Asianet Suvarna News Asianet Suvarna News

ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನ ಬರ್ಬರ ಹತ್ಯೆ

ಹಳೇ ವೈಷಮ್ಯದ ಹಿನ್ನೆಲೆ ಸ್ನೇಹಿತರ ನಡುವೆ ನಡೆದ ಜಗಳ ವಿಕೋಪಕ್ಕೆ ಹೋಗಿ ನಡೆದ ಕೊಲೆ| ಕಲಬುರಗಿ ನಗರದಲ್ಲಿ ನಡೆದ ಘಟನೆ| ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕೊಲೆಯಾದ ರೌಡೀಶೀಟರ್‌ ಹಸನ್‌| ಮಾರಕಾಸ್ತ್ರಗಳಿಂದ ಕೊಚ್ಚಿ, ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ|

Rowdy Sheeter Murder in Kalaburag
Author
Bengaluru, First Published Jun 21, 2020, 1:58 PM IST

ಕಲಬುರಗಿ(ಜೂ.21): ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ನಗರದ ಪೀರ ಬಂಗಾಲಿ ಮೈದಾನದಲ್ಲಿ ನಡೆದಿದೆ. ಹಸನ್‌ ಅಲಿ(24) ಅಲಿಯಾಸ್‌ ಚಿಂದಿ ಹಸನ್‌ ಕೊಲೆಯಾದ ರೌಡಿಶೀಟರ್‌. 

ಹಳೇ ವೈಷಮ್ಯದ ಹಿನ್ನೆಲೆ ಸ್ನೇಹಿತರ ನಡುವೆ ನಡೆದ ಜಗಳ ವಿಕೋಪಕ್ಕೆ ಹೋಗಿ ಹತ್ಯೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕೊಲೆಯಾದ ರೌಡೀಶೀಟರ್‌ ಹಸನ್‌ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ನಿನ್ನೆ ತಡರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ, ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬವಾಗಿ ಹತ್ಯೆ ಮಾಡಲಾಗಿದೆ. 

ಪ್ರೀತಿಯ ಹೆಸರಲ್ಲಿ ವಿದ್ಯಾರ್ಥಿನಿ ಮೇಲೆ ರೌಡಿಶೀಟರ್‌ ಅತ್ಯಾಚಾರ

ಕೊಲೆಯಾದ ಹಸನ್‌ ಅಲಿ ಕೊಲೆ ಪ್ರಕರಣ, ಬೈಕ್‌ ಕಳ್ಳತನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ವಾಸ ಅನುಭವಿಸಿದ್ದ. ಆರು ತಿಂಗಳ ಹಿಂದಷ್ಟೇ ಜೈಲಿನಿಂದ ಬೇಲ್‌ ಮೇಲೆ ಬಿಡುಗಡೆಯಾಗಿದ್ದ. ಈ ಕುರಿತು ಗ್ರಾಮಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆದಿದೆ.
 

Follow Us:
Download App:
  • android
  • ios