Bengaluru: ಬಾರ್‌ನಲ್ಲಿ ಕುಡಿದು ಗಲಾಟೆ, ರೌಡಿಶೀಟರ್ ಭೀಕರ ಹತ್ಯೆ!
ಬೆಂಗಳೂರಿನಲ್ಲಿ ರೌಡಿಶೀಟರ್ ಭೀಕರ ಹತ್ಯೆ ನಡೆದಿದೆ. ಸುಬ್ರಹ್ಮಣ್ಯಪುರ ರೌಡಿಶೀಟರ್ ಶಿವರಾಜ್ ನನ್ನು ಬಿಯರ್ ಬಾಟಲ್‌ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಬೆಂಗಳೂರು (ಏ.10): ಬೆಂಗಳೂರಿನಲ್ಲಿ ರೌಡಿಶೀಟರ್ ಭೀಕರ ಹತ್ಯೆ ನಡೆದಿದೆ. ಸುಬ್ರಹ್ಮಣ್ಯಪುರ ರೌಡಿಶೀಟರ್ ಶಿವರಾಜ್ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬಿಯರ್ ಬಾಟಲಿನಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಮತ್ತೊಬ್ಬ ರೌಡಿಶೀಟರ್ ಮಂಜ @ ಪೊಲಾರ್ ಕಿರಿಕ್ ನಿಂದ ಈ ಕೊಲೆಯಾಗಿದೆ. ನಿನ್ನೆ ಉತ್ತರಹಳ್ಳಿಯ ಬಾರ್ ವೊಂದರಲ್ಲಿ ರೌಡಿಶೀಟರ್ ಗಳು ಇಬ್ಬರೂ ಪಾನಮತ್ತರಾಗಿದ್ದರು. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಶಿವರಾಜ್ ತಲೆಗೆ ಮಂಜ ಬಿಯರ್ ಬಾಟಲಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು, ರಕ್ತದ ಮಡುವಲ್ಲಿ ಬಿದ್ದ ಆತ ಮೃತಪಟ್ಟಿದ್ದಾನೆ. ಸದ್ಯ ಘಟನೆ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿ ಮಂಜನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಏಕಾಂಗಿ ಮಹಿಳೆ ಹತ್ಯೆ!, ಪೊಲೀಸ್ ಆಗುತ್ತೇನೆ ಎಂದ ಮೃತಳ ಮಗ
ಬೆಂಗಳೂರು: ವೈಯಕ್ತಿಕ ಕಾರಣದಿಂದ ಮನೆಯಲ್ಲಿ ಏಕಾಂಗಿಯಾಗಿ ನೆಲೆಸಿದ್ದ ಮಹಿಳೆಯೊಬ್ಬಳಿಗೆ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿರುವ ಘಟನೆ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಟಿ.ಸಿ.ಪಾಳ್ಯ ನಿವಾಸಿ ಅಂಬಿಕಾ (40) ಕೊಲೆಯಾದ ದುರ್ದೈವಿ. ನಾಲ್ಕು ದಿನಗಳ ಹಿಂದೆಯೇ ಈ ಹತ್ಯೆ ನಡೆದಿದೆ. ಮೃತಳ ಮನೆಯಿಂದ ಬರುತ್ತಿದ್ದ ದುರ್ವಾಸನೆ ಹಿನ್ನೆಲೆಯಲ್ಲಿ ಪೊಲೀಸರಿಗೆ ಶನಿವಾರ ಸ್ಥಳೀಯರು ತಿಳಿಸಿದ್ದಾರೆ. ಮೃತಳ ಮನೆ ಬಾಗಿಲು ಮುರಿದು ಒಳ ಪ್ರವೇಶಿಸಿ ಪೊಲೀಸರು ಪರಿಶೀಲಿಸಿದಾಗ ಕೊಳತೆ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬಳಿಕ ಅಂಬಿಕಾಳ ಮೊಬೈಲ್‌ನಲ್ಲಿ ನಂಬರ್ ಪಡೆದು ಆಕೆಯ ಕುಟುಂಬದವರಿಗೆ ಘಟನೆ ಬಗ್ಗೆ ಮಾಹಿತಿ ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಅಂಬಿಕಾ ಬಳ್ಳಾರಿ ಜಿಲ್ಲೆ ಶಿರಗುಪ್ಪ ತಾಲೂಕಿನ ಎಚ್.ಹೊಸಹಳ್ಳಿ ಗ್ರಾಮದವಳಾಗಿದ್ದು, ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಟಿ.ಸಿ.ಪಾಳ್ಯದ ಗಾರ್ಡನ್ ಸಿಟಿ ಕಾಲೇಜು ಸಮೀಪ ಅಂಬಿಕಾ ನೆಲೆಸಿದ್ದಳು. ಹಲವು ತಿಂಗಳ ಹಿಂದೆಯೇ ಅನಾರೋಗ್ಯ ಹಿನ್ನೆಲೆಯಲ್ಲಿ ಆಕೆಯ ಪತಿ ಸಹ ಮೃತಪಟ್ಟಿದ್ದರು. ಇಬ್ಬರು ಮಕ್ಕಳ ಪೈಕಿ ಹಿರಿಯ ಮಗ ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ಓದುತ್ತಿದ್ದಾನೆ. ಈ ಕೃತ್ಯಕ್ಕೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
Yadagiri: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ, ಓರ್ವ ಸಾವು
ಏ.3ರಂದು ತನ್ನ ನೆರೆಮನೆಯ ಮಹಿಳೆಯನ್ನು ಭೇಟಿಯಾಗಿ ಅಂಬಿಕಾ ಮಾತನಾಡಿದ್ದಳು. ನಂತರ ಆಕೆ ಹೊರಗೆ ಎಲ್ಲೂ ಕಾಣಿಸಿಕೊಂಡಿಲ್ಲ. ಹೀಗಾಗಿ ಏ.4 ಅಥವಾ ಏ.5ರಂದು ಆಕೆಯ ಮನೆಗೆ ಬಂದಿರುವ ಪರಿಚಿತರೇ ಹತ್ಯೆ ಮಾಡಿದ್ದಾರೆ. ಮೃತಳ ದೇಹದಲ್ಲಿ ನಾಲ್ಕೈದು ಬಾರಿ ಚೂರಿ ಇರಿತದ ಗುರುತುಗಳು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
BENGALURU: ಕಳ್ಳನೆಂದು 1 ವಾರ ಕೋಣೆಯಲ್ಲಿ ಕೂಡಿಟ್ಟು ಹಿಂಸಿಸಿದ್ರು, ಸತ್ತ ಬಳಿಕ ಹೆಣವನ್ನು ಮೋರಿಗೆಸೆದ್ರು!
ಮೃತ ಅಂಬಿಕಾ ಸಾವಿನ ಬಗ್ಗೆ ಶ್ರೀ ಸಿದ್ಧಗಂಗಾ ಮಠದಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಆಕೆಯ ಮಗನಿಗೆ ಕುಟುಂಬ ಸದಸ್ಯರು ತಿಳಿಸಿದ್ದರು. ತಾಯಿ ಹತ್ಯೆ ವಿಚಾರ ತಿಳಿದು ಆಘಾತಗೊಂಡು ಆತ, ನಗರಕ್ಕೆ ಶನಿವಾರ ರಾತ್ರಿಯೇ ಬಂದು ಪೊಲೀಸರನ್ನು ಭೇಟಿಯಾಗಿದ್ದ. ಸೋಮವಾರ ಆತನಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇದೆ. ನಾನು ಚೆನ್ನಾಗಿ ಓದಿ ಮುಂದೆ ಪೊಲೀಸ್ ಆಗುವೆ ಎಂದು ಪಿಎಸ್‌ಐ ಅನಿತಾ ಅವರಿಗೆ ಹೇಳಿ ಅಂಬಿಕಾ ಪುತ್ರ ಕಣ್ಣೀರಿಟ್ಟಿದ್ದಾನೆ. ಆಗ ಆತನನ್ನು ಸಂತೈಸಿ ಶಿಕ್ಷಣಕ್ಕೆ ನೆರವು ನೀಡುವ ಭರವಸೆಯನ್ನು ಪಿಎಸ್‌ಐ ನೀಡಿದ್ದಾರೆ.