ಮ್ಯಾಂಚೆಸ್ಟರ್(ಫೆ.20): ಈ ಫೋಟೋದಲ್ಲಿ ಮುಗ್ದನಂತೆ ಕಾಣುವ ಈ ಯುವಕನ ಮೇಲೆ ಬರೋಬ್ಬರಿ 136 ಪುರುಷರ ಮೇಲೆ ಅತ್ಯಾಚಾರ ಎಸಗಿದ ಆರೋಪವಿದೆ. ಈತನ ಅತ್ಯಾಚಾರ ಪ್ರಕರಣಗಳ ಸರಣಿಯನ್ನು ಕೇಳಿಯೇ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.

ಹೌದು, ಮ್ಯಾಂಚೆಸ್ಟರ್’ನ ರೇನ್ ಹಾರ್ಡ್ ಸಿನಗಾ ಎಂಬ ಇಂಡೋನೇಷ್ಯಾ ಮೂಲದ ಕಾಮುಕ ಇದುವರೆಗೂ ಸುಮಾರು 136 ಪುರುಷರ ಮೇಲೆ ಅತ್ಯಾಚಾರವೆಸಗಿದ್ದಾನೆ.

ರೇನ್ ಹಾರ್ಡ್ ಸಿನಗಾ ಅತ್ಯಾಚಾರ ಎಸಗಿದ ಪುರುಷರ ಪೈಕಿ ಕೇವಲ 48 ಪುರುಷರು ಈತನ ವಿರುದ್ಧ ಪ್ರಕರಣ ದಾಖಲಿಸಿದ್ದು, ವಿಚಾರಣೆ ಸಂದರ್ಭದಲ್ಲಿ ಈತನ ಭಿಭಿತ್ಸ ಕತೆಗಳನ್ನು ಕೇಳಿ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.

ತಾನೇ ಕೊಂದ ಗರ್ಲ್‌ಫ್ರೆಂಡ್ ಶವದೊಂದಿಗೆ ಸಂಭೋಗಕ್ಕೆ ಯತ್ನ: ಒದ್ದು ಒಳಗಾಕಿದ ಪೊಲೀಸರು!

ಗೆಳೆತನ ಬೆಳೆಸುವ ನೆಪದಲ್ಲಿ ಯುವಕರನ್ನು ಮನೆಗೆ ಕರೆಯುತ್ತಿದ್ದ ರೇನ್ ಹಾರ್ಡ್ ಸಿನಗಾ, ಅವರಿಗೆ ಮಾದಕ ದ್ರವ್ಯ ಸೇವಿಸುವಂತೆ ಒತ್ತಾಯಿಸಿ ಬಳಿಕ ಅವರ ಮೇಲೆ ಅತ್ಯಾಚಾರ ಮಾಡುತ್ತಿದ್ದ ಎನ್ನಲಾಗಿದೆ.

ಅಲ್ಲದೇ ಅತ್ಯಾಚಾರ ಮಾಡುತ್ತಿರುವ ದೃಶ್ಯವನ್ನು ಮೊಬೈಲ್’ನಲ್ಲಿ ಸೆರೆಹಿಡಿದು ಮತ್ತೆ ಸಂಭೋಗಕ್ಕೆ ಬರದಿದ್ದರೆ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಹಾಕುತ್ತಿದ್ದ ಎನ್ನಲಾಗಿದೆ.

ಸದ್ಯ ರೇನ್ ಹಾರ್ಡ್ ಸಿನಗಾ ವಿರುದ್ಧ ಪ್ರಕರಣಗಳು ಸಾಬೀತಾಗಿದ್ದು, ಮ್ಯಾಂಚೆಸ್ಟರ್ ನ್ಯಾಯಾಲಯ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"