Asianet Suvarna News Asianet Suvarna News

ಕಡಬ;  ಸಮನ್ಸ್‌ ನೀಡಲು ಬಂದ ಪೊಲೀಸ್‌ನಿಂದ ಬಾಲಕಿ ಗರ್ಭಿಣಿ, ದೂರು ದಾಖಲು

* ಕಡಬ ಠಾಣೆಯ ಪೊಲೀಸ್ ಸಿಬ್ಬಂದಿ ವಿರುದ್ದ ಅತ್ಯಾಚಾರ ಆರೋಪ 

* ಸಾಮಾಜಿಕ ತಾಣಗಳಲ್ಲಿ ಅತ್ಯಾಚಾರದ ವಿಚಾರ ವೈರಲ್ ಬೆನ್ನಲ್ಲೇ ದೂರು

* ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣೆಗೆ ಬಾಲಕಿ ತಂದೆಯಿಂದ ದೂರು

* ಅಪ್ರಾಪ್ತ ಬಾಲಕಿ ಅತ್ಯಾಚಾರ ಆರೋಪದಡಿ ಕಡಬ ಠಾಣೆಯ ಸಿಬ್ಬಂದಿ ಶಿವರಾಜ್ ವಿರುದ್ದ ದೂರು

rape allegation Over Kadaba Dakshina Kannada police personnel mah
Author
Bengaluru, First Published Sep 27, 2021, 4:48 PM IST
  • Facebook
  • Twitter
  • Whatsapp

ಮಂಗಳೂರು/ ಕಡಬ(ಸೆ. 28)  ಕಡಬ ಠಾಣೆಯ ಪೊಲೀಸ್ ಸಿಬ್ಬಂದಿ ವಿರುದ್ದ ಅತ್ಯಾಚಾರ ಆರೋಪ ಕೇಳಿ ಬಂದಿದೆ ಸಾಮಾಜಿಕ ತಾಣಗಳಲ್ಲಿ ಅತ್ಯಾಚಾರದ ವಿಚಾರ ವೈರಲ್ ಬೆನ್ನಲ್ಲೇ ದೂರು ದಾಖಲಾಗಿದೆ.

ಕಡಬ ಪೊಲೀಸ್ ಠಾಣೆಗೆ ಬಾಲಕಿ ತಂದೆ ದೂರು ನೀಡಿದ್ದಾರೆ. ಅಪ್ರಾಪ್ತ ಬಾಲಕಿ ಅತ್ಯಾಚಾರ ಆರೋಪದಡಿ ಕಡಬ ಠಾಣೆಯ ಸಿಬ್ಬಂದಿ ಶಿವರಾಜ್ ವಿರುದ್ದ ದೂರು ದಾಖಲಾಗಿದೆ.

ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿ ಗರ್ಭವತಿಯಾದ ಬಳಿಕ ಗರ್ಭಪಾತ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದಾರೆ.  ಪ್ರಕರಣವೊಂದರ ಸಂಬಂಧ ಸಮನ್ಸ್ ನೀಡಲು ಆರು ತಿಂಗಳ ಹಿಂದೆ ಮನೆಗೆ ಬಂದಿದ್ದ ವೇಳೆ ಬಾಲಕಿ ಪರಿಚಯವಾಗಿದ್ದಳು.

ಪ್ಯಾಂಟ್ ಕಳಚಿ ಮಹಿಳೆಯ ಖಾಸಗಿ ಅಂಗ ಮುಟ್ಟಲು ಮುಂದಾದ ಪ್ರಸಿದ್ಧ ಡಾಕ್ಟರ್!

ಪ್ರಕರಣ ಮುಗಿದಿದ್ದರೂ ಶಿವರಾಜ್ ಬೇರೆ ಬೇರೆ ನೆಪವೊಡ್ಡಿ ಮನೆಗೆ ಬರುತ್ತಿದ್ದ. ಬಳಿಕ ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆ ಜೊತೆ ಲೈಂಗಿಕ ಸಂಪರ್ಕ ನಡೆಸಿದ್ದಾನೆ. ಗರ್ಭಿಣಿಯಾದ ಬಳಿಕ ಮನೆಯವರಿಗೆ ವಿಷಯ ಗೊತ್ತಾಗಿದೆ.

ಈ ವೇಳೆ ಪೊಲೀಸ್ ಸಿಬ್ಬಂದಿ ಶಿವರಾಜ್ ನನ್ನ ಕೇಳಿದಾಗ ಗರ್ಭಪಾತ ಮಾಡಿಸಲು ದುಡ್ಡು ಕೊಡ್ತೇನೆ ಅಂತ ಹೇಳಿ ಬೆದರಿಕೆ ಹಾಕಿದ್ದಾನೆ.  ಆರೋಪಿಯನ್ನು ಅಮಾನತುಗೊಳಿಸಿ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ವಿಎಚ್ ಪಿ ಎಚ್ಚರಿಕೆ  ನೀಡಿದೆ.  

Follow Us:
Download App:
  • android
  • ios