Asianet Suvarna News Asianet Suvarna News

ಮಂಗಳೂರು;  ಕೋರ್ಟ್ 6ನೇ ಮಹಡಿಯಿಂದ ಹಾರಿ ರೇಪ್ ಆರೋಪಿ ಸುಸೈಡ್!

* ನ್ಯಾಯಾಲಯದ ಆರನೇ ಮಹಡಿಯಿಂದ ಹಾರಿ ಪೋಕ್ಸೋ ಆರೋಪಿ ಆತ್ಮಹತ್ಯೆ 

* ಮಂಗಳೂರಿನ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಘಟನೆ

* ಉಳ್ಳಾಲದ ಕಿನ್ಯಾ ನಿವಾಸಿ ರವಿರಾಜ್(31)ಆತ್ಮಹತ್ಯೆ ಮಾಡಿಕೊಂಡ ಆರೋಪಿ

* ಆಗಸ್ಟ್  30ರಂದು ಪೋಕ್ಸೋ ಪ್ರಕರಣದಡಿ ಬಂಧಿತನಾಗಿದ್ದ ರವಿರಾಜ್

Rape accused commits suicide after jumping off 6th floor of Court mah
Author
Bengaluru, First Published Aug 31, 2021, 8:05 PM IST

ಮಂಗಳೂರು( ಆ. 31) ನ್ಯಾಯಾಲಯದ ಆರನೇ ಮಹಡಿಯಿಂದ ಹಾರಿ ಪೋಕ್ಸೋ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಮಂಗಳೂರಿನ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಘಟನೆ ನಡೆದಿದೆ.

ಉಳ್ಳಾಲದ ಕಿನ್ಯಾ ನಿವಾಸಿ ರವಿರಾಜ್(31)ಆತ್ಮಹತ್ಯೆ ಮಾಡಿಕೊಂಡ ಆರೋಪಿ. ಆಗಸ್ಟ್  30ರಂದು ಪೋಕ್ಸೋ ಪ್ರಕರಣದಡಿ ರವಿರಾಜ್ ಬಂಧನವಾಗಿತ್ತು. ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ರವಿರಾಜ್ ನ್ನು ಬಂಧಿಸಲಾಗಿತು.

ಧರ್ಮಸ್ಥಳ, ಸುಬ್ರಹ್ಮಣ್ಯ ಪ್ರವಾಸಿಗರ ಚಿನ್ನ ಕದ್ದು ಬೆಂಗಳೂರಲ್ಲಿ ಎಂಜಾಯ್ ಮಾಡ್ತಿದ್ಲು! 

ಕುಡಿದ ಮತ್ತಿನಲ್ಲಿ  ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ. ರವಿರಾಜ್ ನನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಕೋರ್ಟ್ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಕೋರ್ಟ್ ನ ಆರನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

Follow Us:
Download App:
  • android
  • ios