ಕೋಟಾ[ನ.30]: ರಾಜಸ್ಥಾನದ ಬುಂಡಿ ಜಿಲ್ಲೆಯಲ್ಲಿ 15 ವರ್ಷದ ಬಾಲ ವಧುವನ್ನು ಅಪಹರಿಸಿ ತಾಳಿ ಕಟ್ಟಿದ ಗಂಡನೇ ಅತ್ಯಾಚಾರ ಎಸಗಿದ ಭೀಕರ ಘಟನೆ ನಡೆದಿದೆ.

ಕೆಲ ವರ್ಷಗಳ ಹಿಂದೆಯೇ ಅಪ್ರಾಪ್ತ ಬಾಲಕಿ ಜೊತೆ ಯುವಕನ ವಿವಾಹವಾಗಿತ್ತು. ಆದರೆ, ಆಕೆ ಅಪ್ರಾಪ್ತೆಯಾಗಿದ್ದ ಕಾರಣ ಪೋಷಕರು ಆಕೆಯನ್ನು ಪತಿಯ ಮನೆಗೆ ಕಳುಹಿಸಿರಲಿಲ್ಲ. ಇದರಿಂದ ಆಕ್ರೋಶಗೊಂಡ ಪತಿ, ಬಾಲಕಿ ಶಾಲೆಯಿಂದ ವಾಹನದಲ್ಲಿ ಮನೆಗೆ ಬರುವ ವೇಳೆ, ವಾಹನ ಅಡ್ಡಗಟ್ಟಿಆಕೆಯನ್ನು ಬಲವಂತವಾಗಿ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.

ಪ್ರಿಯತಮೆಗೆ ಕಾಟ: ಕೊಲೆ ಮಾಡಿ ಮೃತದೇಹ ಎಸೆದು ಪೊಲೀಸ್‌ಗೆ ಫೋನ್ ಮಾಡಿದ..!

ಇದೀಗ ಬಾಲಕಿಯ ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪತಿ ವಿರುದ್ಧ ಕೇಸು ದಾಖಲಿಸಲಾಗಿದೆ. ಆದರೆ ಆತ ನಾಪತ್ತೆಯಾಗಿದ್ದಾನೆ.

ಪುತ್ತೂರು ರೇಪ್‌: 4ನೇ ಆರೋಪಿ ಪ್ರಜ್ವಲ್‌ಗೆ ಜಾಮೀನು