ಪುಣೆ (ಡಿ.  25)  ಸೆಕ್ಯೂರಿಟಿ ಗಾರ್ಡ್ ಒಬ್ಬ ತಾನು ಪೊಲೀಸ್ ಆಫೀಸರ್ ಎಂದು ನಂಬಿಸಿ ಯುವತಿಯೊಬ್ಬಳ  ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ.

ಪುಣೆಯ ಪಿಂಪ್ರಿ-ಚಿಂಚ್‌ವಾಡ್ ಪ್ರದೇಶದಲ್ಲಿ 19 ವರ್ಷದ  ರೋಗಿಗೆ ಕಿರುಕುಳ  ನೀಡಿದ್ದ   47 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ.  ಡಿಸೆಂಬರ್ 21 ರ ರಾತ್ರಿ ಈ ಪ್ರಕರಣ ನಡೆದಿದೆ. ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

'ಪಿರಿಯಡ್ಸ್ ಇದ್ದ ದಿನ ಮದುವೆ.. ಹಣ ಕೊಡದಿದ್ದರೆ  ಬೇರೆಯವರ ಜತೆ ಮಲಗ್ತೇನೆ'

ಪೊಲೀಸ್ ಅಧಿಕಾರಿಯಂತೆ ನಟಿಸಿ ನಿಮ್ಮನ್ನು ಟ್ರೀಟ್ ಮೆಂಟ್ ಗೆ ಕರೆದುಕೊಂಡು ಹೋಗಬೇಕು ಎಂದು ಬೇರೆ ಕೋಣೆಗೆ ಕರೆದುಕೊಂಡು ಹೋಗಿದ್ದಾನೆ.  ಅಲ್ಲಿ ಅಸಭ್ಯ ಭಾಷೆ ಬಳಸಿದ್ದು ಅಲ್ಲದೆ ಮೈಕೈ ಮುಟ್ಟಲು ಯತ್ನಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.

ಭದ್ರತಾ ಸಿಬ್ಬಂದಿ ಇತರ ರೋಗಿಗಳೊಂದಿಗೂ ಹೀಗೆ ನಡೆದುಕೊಂಡಿದ್ದಾನೆಯೇ ಎಂಬ ಆಧಾರದ ಮೇಲೆ ತನಿಖೆ ನಡೆಯುತ್ತಿದೆ.  ಲೈಂಗಿಕ ದೌರ್ಜನ್ಯ ಮತ್ತು ಪೊಲೀಸ್ ಅಧಿಕಾರಿಯಂತೆ ನಟಿಸಿದ ಆರೋಪದ ಮೇಲೆ ಕೇಸ್ ದಾಖಲಿಸಿಕೊಳ್ಳಲಾಗಿದೆ.