Asianet Suvarna News Asianet Suvarna News

Crime| ಸಾಲ ವಾಪಸ್‌ ಕೇಳಿದ್ದಕ್ಕೆ ಕೊಂದು ಕಾಲುವೆಗೆ ಎಸೆದರು..!

*  ಪಟಾಕಿ ತರಲು ಹೋಗಿದ್ದವನ್ನನ್ನು ಪುಸಲಾಯಿಸಿ ಕೊರೆದೊಯ್ದು ಹಲ್ಲೆ
*  ಹಣ್ಣಿನ ವ್ಯಾಪಾರಿ ಮಣಿ ಬಳಿ ಕೆಲಸ ಮಾಡುತ್ತಿದ್ದ ಪಾಷಾ
*  3 ಲಕ್ಷ ಸಾಲ ವಾಪಸ್‌ ನೀಡಲು ಪಾಷಾಗೆ ತಿಳಿಸಿದ್ದ ಮಣಿ
 

Police Arrested Two Accused for Murder Case in Bengaluru
Author
Bengaluru, First Published Nov 7, 2021, 10:52 AM IST
  • Facebook
  • Twitter
  • Whatsapp

ಬೆಂಗಳೂರು(ನ.07): ಯುವಕನ ಕೈಕಾಲು ಕಟ್ಟಿಬಾಯಿಗೆ ಟೇಪ್‌ ಬಿಗಿದು ಹತ್ಯೆ(Murder) ಮಾಡಿ ರಾಜಕಾಲುವೆಗೆ ಎಸೆದಿದ್ದ ಪ್ರಕರಣ ಬೇಧಿಸಿರುವ ರಾಜರಾಜೇಶ್ವರಿನಗರ ಠಾಣೆ ಪೊಲೀಸರು(Police), ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಜೆ.ಜೆ.ನಗರ ನಿವಾಸಿ ತಜೀಮುಲ್ಲಾ ಪಾಷಾ (39) ಹಾಗೂ ಆತನ ಸಹೋದರ ವಾಲ್ಮೀಕಿನಗರ ನಿವಾಸಿ ಸಯ್ಯದ್‌ ನಾಸೀರ್‌ (26) ಬಂಧಿತರು(Arrest). ನ.2ರಂದು ಬೆಳಗ್ಗೆ ಡಿಸೋಜಾ ನಗರದ ರಾಜಕಾಲುವೆ ಬಳಿ ಚೀಲದಲ್ಲಿ ಯುವಕನ ಮೃತದೇಹ(Deadbody) ಪತ್ತೆಯಾಗಿತ್ತು. ಪ್ರಕರಣ(Case) ದಾಖಲಿಸಿಕೊಂಡು ತನಿಖೆ(Investigation) ಮಾಡಿದಾಗ ಮೃತ ಯುವಕ ಭಾರತಿನಗರದ ನಿವಾಸಿ ಮಣಿ ಎಂಬುವವರ ಪುತ್ರ ತರುಣ್‌ (21) ಎಂಬುದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ಜಾಡು ಹಿಡಿದು ಇಬ್ಬರು ಆರೋಪಿಗಳನ್ನು(Accused) ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೌಡಿಶೀಟರ್‌ ಆನಂದ್‌ ಹತ್ಯೆ: 11 ಮಂದಿ ಬಂಧನ

ಕೊಲೆಯಾದ ತರುಣ್‌ ತಂದೆ ಮಣಿ ಹಣ್ಣಿನ ವ್ಯಾಪಾರಿಯಾಗಿದ್ದಾರೆ. ಆರೋಪಿ ತಜೀಮುಲ್ಲಾ ಸರಕು ಸಾಗಣೆ ವಾಹನ ಚಾಲಕನಾಗಿದ್ದು, ಮಣಿ ಬಳಿ ಕೆಲಸ ಮಾಡುತ್ತಿದ್ದ. ಕೆಲ ತಿಂಗಳ ಹಿಂದೆ ಮಣಿಯಿಂದ 3 ಲಕ್ಷ ಸಾಲ(Loan) ಪಡೆದಿದ್ದ. ಮೂರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ಸಾಲದ ಹಣ ಹಿಂದಿರುಗಿಸಿರಲಿಲ್ಲ. ಈ ನಡುವೆ ಮಣಿ ಅವರು ಹಣ ಹಿಂದಿರುಗಿಸುವಂತೆ ತಜೀಮುಲ್ಲಾನನ್ನು ಕೇಳುತ್ತಿದ್ದರು. ಇದು ತಜೀಮುಲ್ಲಾಗೆ ಕಿರಿಕಿರಿಯಾಗಿತ್ತು. ಮಣಿ ಬಳಿ ಹಣ ಇರುವ ಬಗ್ಗೆ ತಿಳಿದುಕೊಂಡಿದ್ದ ಆರೋಪಿ ತಜೀಮುಲ್ಲಾ, ಮಣಿಯ ಪುತ್ರ ತರುಣ್‌ನನ್ನು ಅಪಹರಿಸಿ ಹಣ ಸುಲಿಗೆಗೆ ಸಂಚು ರೂಪಿಸಿದ್ದ. ಇದಕ್ಕೆ ಸಹೋದರ ಸಯ್ಯದ್‌ ನಾಸೀರ್‌ ಸಾಥ್‌ ಪಡೆದಿದ್ದ.

ಪುಸಲಾಯಿಸಿ ಕರೆದೊಯ್ದರು:

ದೀಪಾವಳಿ(Deepavali) ಹಬ್ಬದ ಹಿನ್ನೆಲೆಯಲ್ಲಿ ನ.1ರಂದು ಮಣಿ ಪುತ್ರ ತರುಣ್‌ ಪಟಾಕಿ ತರಲು ತಾಯಿಯಿಂದ ಹಣ ಪಡೆದು ಹೊರಬಂದಿದ್ದ. ಈ ವೇಳೆ ತರುಣ್‌ನನ್ನು ಭೇಟಿಯಾದ ಆರೋಪಿಗಳು, ಪುಟ್ಟೇನಹಳ್ಳಿಯ ಅರಕೆರೆಯಲ್ಲಿರುವ ತಮ್ಮ ಸಹೋದರಿಯ ಮನೆಯಲ್ಲಿ ಕಡಿಮೆ ದರಕ್ಕೆ ಪಟಾಕಿ(Fireworks) ಸಿಗಲಿದೆ ಎಂದು ಪುಸಲಾಯಿಸಿ ಕರೆದೊಯ್ದಿದ್ದರು. ಬಳಿಕ ಒಂದು ಕೊಠಡಿಯಲ್ಲಿ ತರುಣ್‌ನನ್ನು ಕೂಡಿ ಹಾಕಿ ಹಲ್ಲೆ ನಡೆಸಿದ್ದರು. ಚೀರಾಟದಂತೆ ಬಾಯಿಗೆ ಪ್ಲಾಸ್ಟರ್‌ ಹಾಕಿ ಕೈ ಕಾಲು ಕಟ್ಟಿದ್ದರು. ಈ ವೇಳೆ ತರುಣ್‌ ತೀವ್ರ ಪ್ರತಿರೋಧ ತೋರಿದಾಗ ವೈಯರ್‌ ತೆಗೆದುಕೊಂಡು ಆತನ ಕುತ್ತಿಗೆಗೆ ಹಾಕಿ ಬಿಗಿದಿದ್ದಾರೆ. ಆಗ ಉಸಿರಾಡಲು ಸಾಧ್ಯವಾಗದೇ ತರುಣ್‌ ಮೃತಪಟ್ಟಿದ್ದ(Death) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಳಗಾವಿ;  ಬೈಕ್‌ಗೆ ಗುದ್ದಿದ ಕಾರು, ಪಾದಚಾರಿಗೆ ಗುದ್ದಿದ ಬೈಕ್.. ತುಳಿದು ವೃದ್ಧನ ಹತ್ಯೆ!

50 ಲಕ್ಷಕ್ಕೆ ಬೇಡಿಕೆ

ಈ ನಡುವೆ ಆರೋಪಿಗಳು ಅಪರಿಚಿತರ ಸೋಗಿನಲ್ಲಿ ಮಣಿಗೆ ಕರೆ ಮಾಡಿ, ತರುಣ್‌ ಅಪಹರಣದ ಬಗ್ಗೆ ಮಾಹಿತಿ ನೀಡಿದ್ದರು. ಅಂತೆಯೆ ಆತನನ್ನು ಬಿಡಲು .50 ಲಕ್ಷಕ್ಕೆ ಬೇಡಿಕೆ ಇರಿಸಿದ್ದು, ಹಣ ಕೊಡದಿದ್ದರೆ ಮಗನನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದರು. ಮತ್ತೊಂದೆಡೆ ತರುಣ್‌ ಮೃತಪಟ್ಟಿದ್ದರಿಂದ ಆರೋಪಿಗಳು ಮೃತದೇಹವನ್ನು ಪ್ಲಾಸ್ಟಿಕ್‌ ಚೀಲಕ್ಕೆ ಹಾಕಿ ಡಿಸೋಜಾ ನಗರದ ರಾಜಕಾಲುವೆ ಬಳಿ ಎಸೆದಿದ್ದರು. ನ.2ರಂದು ಬೆಳಗ್ಗೆ ಚಿಂದಿ ಆಯುವ ವ್ಯಕ್ತಿಯೊಬ್ಬ ಚೀಲದಲ್ಲಿ ಮೃತದೇಹ ಇರುವುದನ್ನು ಗಮನಿಸಿ ಸ್ಥಳೀಯರಿಗೆ ತಿಳಿಸಿದ್ದ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಾಸಿಕೊಂಡಿದ್ದ ರಾಜರಾಜೇಶ್ವರಿನಗರ ಠಾಣೆ ಪೊಲೀಸರು, ಮಣಿ ಮೊಬೈಲ್‌ಗೆ ಬಂದಿದ್ದ ಕರೆಯ ಜಾಡು ಹಿಡಿದು ಆರೋಪಿಗಳನ್ನು ಬಂಧಿಸಿದ್ದಾರೆ.

ಯುವಕನ ಕೊಲೆ ಮಾಡಿ ಚೀಲದಲ್ಲಿ ತುಂಬಿದರು

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನ ಕತ್ತು ಕೊಯ್ದು ಹತ್ಯೆ ಮಾಡಿದ ಬಳಿಕ ಮೃತದೇಹವನ್ನು ಚೀಲದಲ್ಲಿ ತುಂಬಿ ರಾಜರಾಜೇಶ್ವರಿ ನಗರ ಸಮೀಪದ ಡಿಸೋಜಾ ನಗರದ ರಾಜಕಾಲುವೆ ಬಳಿ ಎಸೆದು ಪರಾರಿಯಾಗಿದ್ದರು. 
ಮೃತನು 18 ರಿಂದ 19 ವರ್ಷ ವಯಸ್ಸಿನವನಾಗಿದ್ದು, ಆತನನ್ನು ನಸುಕಿನಲ್ಲಿ ದುಷ್ಕರ್ಮಿಗಳು ಕೊಂದಿರಬಹುದು. ರಾಜಕಾಲುವೆ ಸಮೀಪ ಚೀಲದಲ್ಲಿ ಮೃತದೇಹ ಕಂಡು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಸಾಗಿಸಿದ್ದಾರೆ. ಮೃತನ ಗುರುತು ಪತ್ತೆಯಾಗಿಲ್ಲ. ಈ ಬಗ್ಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Follow Us:
Download App:
  • android
  • ios