ಮೈಸೂರು(ಜ.13): ವ್ಯಕ್ತಿಯೊಬ್ಬರ ಮೇಲೆ ಎರಡು ಬಾರಿ ಆಟೋ ಹರಿಸಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ಎನ್‌.ಆರ್‌.ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಹತ್ಯೆ ದೃಶ್ಯಾವಳಿಯು ಸಿಸಿಟಿವಿಯಲ್ಲಿ ಸೆರೆಯಾಗಿ ವೈರಲ್‌ ಆಗಿದೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕಜ್ಜಿಹುಂಡಿ ನಿವಾಸಿ ಮಲ್ಲಿಕಾರ್ಜನ(55) ಮೃತಪಟ್ಟವರು. ಇವರು ಬಾಡಿಗೆ ಆಟೋ ಓಡಿಸಿಕೊಂಡಿದ್ದರು. ಇವರ ಮೇಲೆ ಜ.10 ರಂದು ಭಾನುವಾರ ರಾತ್ರಿ ರಸ್ತೆಯಲ್ಲಿ ನಿಂತಿದ್ದ ಮಲ್ಲಿಕಾರ್ಜುನ ಅವರ ಮೇಲೆ ಬಿಎಂಶ್ರೀ ನಗರದ ಶ್ರೀಧರ್‌ ಎಂಬಾತ ಎರಡು ಬಾರಿ ಆಟೋ ಹರಿಸಿದ್ದಾನೆ. 

ಲಿವ್‌ ಇನ್ ಸಂಗಾತಿ ಕೊಲೆ ಮಾಡಿ ಕರೆ ಮಾಡಿ ಎಸ್ಕೇಪ್ ಆಗಿದ್ದ ಭೂಪ ಸಿಕ್ಕಿಬಿದ್ದ

ಆರೋಪಿ ಶ್ರೀಧರ್‌ ಆಟೋದಲ್ಲಿ ಮಲ್ಲಿಕಾರ್ಜುನ ಮೇಲೆ 2 ಬಾರಿ ಆಟೋ ಹರಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.