ಬೆಂಗಳೂರು(ಫೆ.03): ಹಳೇ ದ್ವೇಷದ ಹಿನ್ನೆಲೆಯಲ್ಲಿ ಕ್ಯಾಂಟರ್‌ ಚಾಲಕನೊಬ್ಬನನ್ನು ಆತನ ಪರಿಚಯಸ್ಥರೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಂದಿರುವ ಘಟನೆ ಬೆಟ್ಟದಾಸಪುರ ಸಮೀಪ ನಡೆದಿದೆ.

ಹೆಬ್ಬಗೋಡಿಯ ಶಿಕಾರಿಪಾಳ್ಯದ ಸೈಯದ್‌ ಅಫ್ಜಲ್‌ (36) ಕೊಲೆಯಾದ ದುರ್ದೈವಿ. ಬೆಟ್ಟದಾಸಪುರದ ವಿಟ್ಟಸಂದ್ರ ಸರ್ಕಲ್‌ನಲ್ಲಿ ಸೋಮವಾರ ಸಂಜೆ 6.30ರಲ್ಲಿ ಹೋಗುತ್ತಿದ್ದಾಗ ಸೈಯದ್‌ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ಹತ್ಯೆಗೈದಿದ್ದರು. ಪ್ರಕರಣ ಸಂಬಂಧ 7 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಂಪು ಸ್ಕೂಟರ್‌ನಲ್ಲಿ ಗೆಳತಿ ಶವ ತಂದು ರಸ್ತೆಗೆ ಎಸೆದ ಕಿರಾತಕರು!

ಹಲವು ದಿನಗಳಿಂದ ಸೈಯದ್‌ ಮತ್ತು ಆರೋಪಿಗಳ ನಡುವೆ ಸ್ನೇಹವಿತ್ತು. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೃತ್ಯ ಎಸಗಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಈ ಬಗ್ಗೆ ಎಲೆಕ್ಟ್ರಾನಿಕ್‌ ಸಿಟಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.