ಇಸ್ಲಾಮಾಬಾದ್(ಅ. 02) ಭಾರತದಲ್ಲಿ ಉತ್ತರಪ್ರದೇಶದ ಅತ್ಯಾಚಾರ ಪ್ರಕರಣ ಮಾರ್ದನಿಸುತ್ತಿದ್ದರೆ ಅತ್ತ ಪಾಕಿಸ್ತಾನದಲ್ಲಿಯೂ ಒಂದು ಘೋರ ಘಟನೆ ನಡೆದು ಹೋಗಿದೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 17 ವರ್ಷದ ಹಿಂದೂ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮೂವರು ಬ್ಲ್ಯಾಕ್‌ಮೇಲ್  ಮಾಡುತ್ತಿದ್ದರು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

ಉತ್ತರ ಪ್ರದೇಶ ಕ್ರೂರತ್ವಕ್ಕೆ ಪ್ರಿಯಾಂಕಾ ಚೋಪ್ರಾ ಕಿಡಿ

ಥಾರ್‌ಪಾರ್ಕರ್ ಜಿಲ್ಲೆಯ ದಲನ್-ಜೋ-ತಾರ್ ಗ್ರಾಮದಲ್ಲಿ ಬಾವಿಗೆ ಹಾರಿ ಬಾಲಕಿ ಬುಧವಾರ ತನ್ನ  ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

2019 ರ ಜುಲೈ ವೇಳೆ ಬಾಲಕಿ ಮೇಲೆ ಮೂವರು  ಅತ್ಯಾಚಾರ ಮಾಡಿದ್ದರು. ನಂತರ ಪ್ರಕರಣ ದಾಖಲಾಗಿ ಆರೋಪಿಗಳು ಜಾಮೀನು ಪಡೆದುಕೊಂಡಿದ್ದರು. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯೊಬ್ಬ ಬೇರೆಯವರಿಂದ ಬ್ಲ್ಯಾಕ್‌ಮೇಲ್ ಮಾಡಿ ಬಾಲಕಿ ಮತ್ತು ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗಿದೆ.

 ಬಾಲಕಿಯನ್ನು ಬಲವಂತವಾಗಿ ಮನೆಯೊಂದಕ್ಕೆ ಕರೆದೊಯ್ದು ಅಲ್ಲಿ ಅತ್ಯಾಚಾರ ನಡೆಸಿ ಅದನ್ನು ಚಿತ್ರೀಕರಣ ಸಹ ಮಾಡಿದ್ದರು. ಕರೋನಾ ಕಾರಣಕ್ಕೆ ಪ್ರಕರಣದ ವಿಚಾರಣೆ ವಿಳಂಬವಾಗಿತ್ತು.