Asianet Suvarna News Asianet Suvarna News

ಬೆಂಗ್ಳೂರು ಮುತ್ತೂಟ್ ಫೈನಾನ್ಸ್‌ನ 77 ಕೆಜಿ ಚಿನ್ನ ಕಳವು: ಇಬ್ಬರು ಅರೆಸ್ಟ್

ಬೆಂಗಳೂರಿನ ಮುತ್ತೂಟ್ ಫೈನಾನ್ಸ್‌ನ 77 ಕೆ.ಜಿ ಚಿನ್ನ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಸಿಸಿಬಿ ವಿಶೇಷ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Muthoot Finance 77 Gold theft case CCB Police arrests 2 accused at Indo-Nepal border
Author
Bengaluru, First Published Jan 1, 2020, 3:14 PM IST

ಬೆಂಗಳೂರು, (ಜ.01): ಬೆಂಗಳೂರಿನ ಮುತ್ತೂಟ್ ಫೈನಾನ್ಸ್ ನಲ್ಲಿ 77 ಕೆ.ಜಿ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಮುತ್ತೋಟ್ ಫೈನಾನ್ಸ್ ಕಂಪನಿಯಲ್ಲಿ ಭದ್ರತಾ ಸಿಬ್ಬಂದಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಆರೋಪಿಗಳನ್ನು ನೇಪಾಳದ ಗಡಿ ಭಾಗದಲ್ಲಿ ಸಿಸಿಬಿ ವಿಶೇಷ ತಂಡ ಬಂಧಿಸಿದೆ. ಬಂಧಿತರಿಂದ 8 ಕೆಜಿ ಚಿನ್ನವನ್ನು ವಶ ಪಡಿಸಿಕೊಳ್ಳಲಾಗಿದೆ.  

77 ಕೆಜಿ ಚಿನ್ನ ದೋಚಿದ್ದ ಗ್ಯಾಂಗ್ ಒಂದೂವರೆ ತಿಂಗಳ ಹಿಂದೆ 'ಆ' ಕೆಲಸ ಮಾಡಿತ್ತು!

ಇನ್ನು ಪ್ರಕರಣಕ್ಕೆ ಸಂಬಂಧಿಸಿದ ಉಳಿದ 10 ಆರೋಪಿಗಳಿಗಾಗಿ ಸಿಸಿಬಿ ವಿಶೇಷ ತಂಡ  ಶೋಧ ಕಾರ್ಯ ಮುಂದುವರಿಸಿದೆ. ಪೊಲೀಸರ ಈ ಯಶಸ್ವಿ ಕಾರ್ಯಚರಣೆಗೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮುತ್ತೂಟ್ ಫೈನಾನ್ಸ್  ಕಚೇರಿಯ ಗೋಡೆ ಕೊರೆದು ಕನ್ನ ಹಾಕಿದ್ದ 12 ಮಂದಿ ಆರೋಪಿಗಳು 77 ಕೆಜಿ ಚಿನ್ನವನ್ನು ಹೊತ್ತೊಯ್ದಿದ್ದರು. ಆರೋಪಿಗಳು 77 ಕೆಜಿ ಒಟ್ಟಿಗೆ ಸಾಗಿಸರು ಆಗುವುದಿಲ್ಲ ಎಂಬುದಾಗಿ ತಮ್ಮ ಪಿಜಿಯಲ್ಲಿ ಚಿನ್ನವನ್ನು ಹಂಚಿಕೊಂಡಿದ್ದರು.  

Follow Us:
Download App:
  • android
  • ios