Asianet Suvarna News Asianet Suvarna News

ಗರ್ಭಿಣಿ ಪತ್ನಿಯನ್ನು ಕೊಂದು 22 ವರ್ಷ ಕಾಡಿನಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿ ಕೊನೆಗೂ ಪ್ರತ್ಯಕ್ಷ!

ಗರ್ಭಿಣಿ ಪತ್ನಿಯನ್ನು ಕೊಂದು ಅದಕ್ಕಾಗಿ 20 ವರ್ಷಗಳ ಕಾಲ ಜೈಲು ಶಿಕ್ಷೆಗೆ ಈಡಾಗಿದ್ದ ವ್ಯಕ್ತಿ 2001ರಲ್ಲಿ ಜೈಲಿನಿಂದ ತಪ್ಪಿಸಿಕೊಂಡು ಕಾಡಿಗೆ ತೆರಳಿದ್ದರು. ಇಷ್ಟು ವರ್ಷಗಳ ಕಾಲ ಅವರನ್ನು ಹುಡುಕುವ ಯಾವ ಪ್ರಯತ್ನ ಕೂಡ ಯಶಸ್ವಿಯಾಗಿರಲಿಲ್ಲ. ಬರೋಬ್ಬರಿ 22 ವರ್ಷಗಳ ಬಳಿಕ ಅವರು ವಾಪಾಸ್‌ ಬಂದಿದ್ದಾರೆ.

Murderer who spent 22 years hiding in jungle has now reappeared in argentina san
Author
First Published Oct 21, 2023, 5:48 PM IST

ನವದೆಹಲಿ (ಅ.21): ಗರ್ಭಿಣಿ ಪತ್ನಿಯನ್ನು ಹತ್ಯೆ ಮಾಡಿದ ಅಪರಾಧದಲ್ಲಿ 20 ವರ್ಷಗಳ ಕಾಲ ಜೈಲು ಶಿಕ್ಷೆಗೆ ಒಳಗಾಗಿದ್ದ ವ್ಯಕ್ತಿ. 2001ರಲ್ಲಿ ತಾವಿದ್ದ ಜೈಲಿನಿಂದ ತಪ್ಪಿಸಿಕೊಂಡಿದ್ದರು. ಜೈಲಿನಿಂದ ತಪ್ಪಿಸಿಕೊಂಡು ಹೋದವರೇ ನೇರವಾಗಿ ಅರ್ಜೆಂಟೀನಾದ ಮಳೆ ಕಾಡುಗಳಲ್ಲಿ ಅಡಗಿಕೊಂಡಿದ್ದರು. ಇಷ್ಟು ವರ್ಷಗಳ ಕಾಲ ಅಲ್ಲಿಯೇ ಉಳಿಸಿಕೊಂಡಿದ್ದ ಆತ, ತಾನು ಮಾಡಿದ್ದ ಅಪರಾಧಕ್ಕೆ ಕೋರ್ಟ್‌ ನೀಡಿದ್ದ ಶಿಕ್ಷೆಯ ಅವಧಿ ಮುಗಿದ ಬಳಿಕ ಅರ್ಜೆಂಟೀನಾದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. ಈತನಿಗೆ ಈಗ 70 ವರ್ಷ. ರಾಮನ್ ಏಂಜೆಲ್ ಅಬ್ರೆಗ್ಯು ಹೆಸರಿನ ವ್ಯಕ್ತಿಯ ಬಗ್ಗೆ ಕಳೆದ 22 ವರ್ಷಗಳಿಂದ ಯಾರೊಬ್ಬರಿಗೂ ಸುಳಿವು ಸಿಕ್ಕಿರಲಿಲ್ಲ. ಯಾರ ಕೈಗೂ ಸಿಗದೇ ಮಳೆಕಾಡಿನಲ್ಲಿ ಅವರು ವಾಸ ಮಾಡಿದ್ದರು. ಡೈಲಿ ಮೇಲ್ ವರದಿ ಪ್ರಕಾರ, ಅಬ್ರೆಗ್ಯು 2001 ರಲ್ಲಿ ಅರ್ಜೆಂಟೀನಾದ ಜೈಲಿನಿಂದ ತಪ್ಪಿಸಿಕೊಂಡಿದ್ದ. ತನ್ನ ಗರ್ಭಿಣಿ ಪತ್ನಿಯನ್ನು ಅಬ್ರೆಗ್ಯು ಕೊಂದಿದ್ದ ಅಪರಾಧಕ್ಕಾಗಿ ಅವರಿಗೆ ಕೋರ್ಟ್ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಕೆಲವೇ ತಿಂಗಳುಗಳಲ್ಲಿ ಈತ ಜೈಲಿನಿಂದ ಪರಾರಿಯಾಗಿದ್ದ.ಸ್ಥಳೀಯ ವರದಿಯಗಳ ಪ್ರಕಾರ, ಅಬ್ರೆಗ್ಯು ತನ್ನ ಪತ್ನಿ ಇವಾ ಫಾಲ್ನನ್‌ ಮೇಲೆ ದಾಳಿ ಮಾಡಿದ್ದಲ್ಲದೆ, 9 ಮಿಲಿಮೀಟರ್‌ ಕ್ಯಾಲಿಬರ್‌ ಗನ್‌ನಿಂದ ಶೂಟ್‌ ಮಾಡಿದ್ದ.

ಅಬ್ರೆಗ್ಯೂ ತನ್ನ ಪತ್ನಿಯನ್ನು ಶೂಟ್‌ ಮಾಡುವ ವೇಳೆ ಆಕೆ 7 ತಿಂಗಳ ಗರ್ಭಿಣಿಯಾಗಿದ್ದಳು. ಗಂಡ ತನ್ನನ್ನು ಶೂಟ್‌ ಮಾಡುತ್ತಾನೆ ಎನ್ನುವುದನ್ನು ತಿಳಿದ ಫಾಲ್ಕನ್‌, ಮನೆಯಿಂದ ಪರಾರಿಯಾಗಿದ್ದಲ್ಲದೆ, ಸ್ಥಳೀಯ ಕ್ಲಿನಿಕ್‌ವೊಂದರ ರೂಮ್‌ನಲ್ಲಿ ಅಡಗಿ ಕುಳಿತಿದ್ದಳು. ಆದರೆ, ಆಕೆ ಅಲ್ಲಿಗೆ ಹೋಗಿರುವುದನ್ನು ಪತ್ತೆ ಹಚ್ಚಿದ್ದ ಅಬ್ರೆಗ್ಯು, ನಾಲ್ಕು ಬಾರಿ ಗುಂಡಿನ ದಾಳಿ ನಡೆಸಿ ಆಕೆಯನ್ನು ಸಾಯಿಸಿದ್ದ. ಅವರು ಸ್ತ್ರೀಹತ್ಯೆಯ ಅಪರಾಧಿ ಎನ್ನುವ ಕಾರಣಕ್ಕೆ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಆದರೆ ಕೆಲವು ತಿಂಗಳ ನಂತರ ಚಿಲಿಗೆ ಹೋಗುವ ಟ್ರಕ್‌ನಲ್ಲಿ ಅಡಗಿಕೊಂಡು ಜೈಲಿನಿಂದ ತಪ್ಪಿಸಿಕೊಂಡು ಹೋಗಲು ಯಶಸ್ವಿಯಾಗಿದ್ದರು.

ಆ ಬಳಿಕ ಚಾಕೊ ಸಾಲ್ಟೆನೊ ಕಾಡಿನಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಅಡಗಿಕೊಂಡಿದ್ದ ಈತ ಕಳೆದ ಬುಧವಾರ ಕಾಡಿನಿಂದ ಹೊರಬಂದಿದ್ದಾರೆ. ತನ್ನ ಪ್ರಕರಣದ ಪ್ರಿಸ್ಕ್ರಿಪ್ಷನ್ ಕೋರಲು ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ನನಗೆ ನೀಡಿದ್ದ ಶಿಕ್ಷೆಯ ಅವಧಿ 20 ವರ್ಷಗಳು. ಅಂದಾಜು ಇಷ್ಟೇ ವರ್ಷಗಳ ಕಾಲ ನಾನು ತಲೆಮರೆಸಿಕೊಂಡು ಜೈಲಿನಲ್ಲಿ ವಾಸ ಮಾಡಿದ್ದೆ. ಜೈಲಿನಲ್ಲಿ ಕಳೆಯಬೇಕಾದ ಶಿಕ್ಷೆಯನ್ನು ತಾನು ಕಾಡಿನಲ್ಲಿ ತಲೆಮರಸಿಕೊಂಡು ಕಳೆದಿದ್ದೇನೆ ಎಂದು ತನ್ನ ವಕೀಲರ ಮೂಲಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪಾಕ್ ನೆಲದಲ್ಲೇ ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವುದ್ ಮಲಿಕ್ ಹತ್ಯೆ, ಇದು 17ನೇ ಬಲಿ!

ಅವರನ್ನು ಪ್ರಸ್ತುತ ರಿಯೊ ಗ್ರಾಂಡೆ ಡಿಟೆನ್ಶನ್ ಯೂನಿಟ್‌ನಲ್ಲಿ ಬಂಧಿಸಲಾಗಿದೆ. ಅವರು ಸ್ವತಂತ್ರವಾಗಿ ಉಳಿಯಲು ಅನುಮತಿಸುತ್ತಾರೆಯೇ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ. ಈ ಬಗ್ಗೆ ಕೋರ್ಟ್‌ ಇನ್ನಷ್ಟೇ ನಿರ್ಧಾರ ಮಾಡಬೇಕಿದೆ.

Unknown Gunmen: ಪಠಾಣ್‌ಕೋಟ್‌ ದಾಳಿಯ ಮಾಸ್ಟರ್‌ಮೈಂಡ್‌ ಶಾಹಿದ್‌ ಲತೀಫ್‌ ಪಾಕಿಸ್ತಾನದಲ್ಲಿ ಹತ್ಯೆ!

Follow Us:
Download App:
  • android
  • ios