ಬೆಂಗಳೂರು[ಜ. 22]  ಶಾಂತಿನಗರ ಶಾಸಕ ಎನ್‌.ಎ.ಹ್ಯಾರೀಸ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸ್ಫೋಟವಾಗಿದ್ದು ಹ್ಯಾರೀಸ್ ಕಾಲಿಗೆ ಗಾಯವಾಗಿದೆ.  ವಿವೇಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವನ್ನಾರ್​ ಪೇಟೆಯಲ್ಲಿ ಜನ್ಮದಿನ ಕಾರ್ಯಕ್ರಮದಲ್ಲಿ  ಅನುಮಾನಾಸ್ಪದ ವಸ್ತು ಸ್ಫೋಟಗೊಂಡಿದೆ. ಸ್ಫೋಟದಿಂದಾಗಿ ಶಾಂತಿನಗರ ಶಾಸಕ ಎನ್​.ಎ​.ಹ್ಯಾರಿಸ್​ ಸೇರಿ ನಾಲ್ವರಿಗೆ ಗಾಯವಾಗಿದೆ.

"

ಎನ್​.ಎ​. ಹ್ಯಾರಿಸ್​ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ವೇದಿಕೆಯಲ್ಲಿ ಇದ್ದಕ್ಕಿದ್ದ ಹಾಗೆ ಸ್ಫೋಟ ಸಂಭವಿಸಿದೆ. ಹ್ಯಾರೀಸ್ ದೊಡ್ಡ ಕುರ್ಚಿಯ ಬದಲು ಚಿಕ್ಕ ಕುರ್ಚಿಯಲ್ಲಿ ಆಸೀನರಾದರು. ಒಂದು ವೇಳೆ ದೊಡ್ಡ ಚೇರ್ ಬಳಿ ಬಂದಿದ್ದರೆ ಅಪಾಯದ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇತ್ತು.

ಗಾಯಾಳುಗಳನ್ನು ಸೆಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು, ಶ್ವಾನದಳದ ಸಿಬ್ಬಂದಿ ದೌಡಾಯಿಸಿದ್ದು, ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಮಂಗಳೂರಿನಲ್ಲಿ ಬಾಂಬ್ ಇಟ್ಟವ ಬೆಂಗಳೂರಿಗೆ ಬಂದಿದ್ದೇ ರೋಚಕ

ಘಟನೆ ಸಂಬಂಧ ಶಾಸಕ ಎನ್.ಎ. ಹ್ಯಾರೀಸ್ ಮಗ ನಲಪಾಡ್​ ಪ್ರತಿಕ್ರಿಯೆ ನೀಡಿ ಯಾರೋ ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಮಾಡಿದ್ದಾರೆ. ಇದು ಪೂರ್ವನಿಯೋಜಿತ ಕೆಲಸ ಎಂದು ಹೇಳಿದ್ದು ಯಾರೋ ತಂದೆಯವರ ಮೇಲೆ ಕಚ್ಚಾ ಬಾಂಬ್ ಎಸೆದಿದ್ದಾರೆ ಎಂದಿದ್ದಾರೆ.

"

ಕೆಲ ದಿನಗಳ ಶಾಸಕ ತನ್ವೀರ್ ಸೇಠ್ ಅವರ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆದಿತ್ತು. ಸೇಠ್ ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆದುಕೊಂಡು ಬರುವಂತಹ ಸ್ಥಿತಿ ನಿರ್ಮಾಣ ಆಗಿತ್ತು.

"