ಚಂಡೀಗಢ  (ಜ.03)   ಬಳ್ಳಾರಿಯಿಂದ ಕೆಲಸ ಅರಸಿ ಬಂದಿದ್ದ ಕುಟುಂಬದ ಬಾಲಕಿ ಮೇಲೆ ಮಂಡ್ಯದಲ್ಲಿ ಅತ್ಯಾಚಾರ ನಡೆದಿತ್ತು. ಅಂಥದ್ದೆ ಪ್ರಕರಣ ಈಗ ಪಂಜಾಬ್ ನಿಂದ ವರದಿಯಾಗಿದೆ.

ಪಂಜಾಬ್‌ನ ಜಲಂಧರ್ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ ಆರು ವರ್ಷದ ಬಾಲಕಿಯನ್ನು ಅತ್ಯಾಚರಿಸಿ ಹತ್ಯೆ ಮಾಡಲಾಗಿದೆ.  ಬಾಲಕಿಯ ಮೃತದೇಹ ಜಲಂಧರ್-ಹೋಶಿಯಾರ್‌ಪುರ ರಸ್ತೆಯಲ್ಲಿರುವ ಹಜಾರಾ ಗ್ರಾಮದ ಕಬ್ಬಿನ ಹೊಲದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶೌಚಕ್ಕೆ ತೆರಳಿದ್ದ ವೇಳೆ ಮೈಮೇಲೆ ಬಂದ ಕಾಮುಕನ ಕೊಚ್ಚಿದ ದಿಟ್ಟೆ!

ಬಿಹಾರದಿಂದ ಕೆಲಸ ಅರಸಿ ಕುಟುಂಬ ಪಂಜಾಬ್ ಗೆ ಬಂದಿತ್ತು.  ಮೃತ ಬಾಲಕಿಯ ಮನೆಯ ಪಕ್ಕದಲ್ಲಿದ್ದ ಕುಟುಂಬದ ದೂರದ ಸಂಬಂಧಿಯಾಗಿದ್ದ ಸಂತೋಷ್, ಬಿಸ್ಕತ್ತು ಕೊಡಿಸುವುದಾಗಿ ಬೈಸಿಕಲ್‌ನಲ್ಲಿ ಬಾಲಕಿಯನ್ನು ಕರೆದೊಯ್ದು ನಂತರ ಮನೆಗೆ ತಂದು ಬಿಟ್ಟಿದ್ದ.

ಆದರೆ ಬಾಲಕಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಸಂತೋಷ್ ಸಹ ಕಣ್ಮರೆಯಾಗಿದ್ದ. ಪೊಲೀಸರು ಸಂತೋಷ್  ಪತ್ತೆಗೆ ಬಲೆ ಬೀಸಿದ್ದಾರೆ.