Asianet Suvarna News Asianet Suvarna News

Bengaluru| ಗಾರ್ಮೆಂಟ್ಸ್‌ ಉದ್ಯಮಿ ಹಿಂಬಾಲಿಸಿ ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು

*    ಕೊಲೆಗೆ ದ್ವೇಷ ಕಾರಣ?
*   ನಾಲ್ವರು ದುಷ್ಕರ್ಮಿಗಳಿಂದ ನಾಗವಾರ ಬಳಿ ಕೃತ್ಯ
*   ಬೈಕ್‌ನಲ್ಲಿ ಕಾರು ಹಿಂಬಾಲಿಸಿದ ನಾಲ್ವರು
 

Miscreants Killed Garment Businessman in Bengaluru grg
Author
Bengaluru, First Published Nov 14, 2021, 7:55 AM IST
  • Facebook
  • Twitter
  • Whatsapp

ಬೆಂಗಳೂರು(ನ.14):  ಗಾರ್ಮೆಂಟ್‌ ಉದ್ಯಮಿಯೊಬ್ಬನನ್ನು(Garment Businessman) ನಾಲ್ವರು ದುಷ್ಕರ್ಮಿಗಳು(Miscreants) ಹಾಡಹಗಲೇ ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ(Murder) ಮಾಡಿರುವ ಘಟನೆ ಶನಿವಾರ ಹೆಣ್ಣೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆರ್‌.ಎಸ್‌.ಪಾಳ್ಯ ನಿವಾಸಿ ಗಾರ್ಮೆಂಟ್‌ ಉದ್ಯಮಿ ಶ್ರೀಧರ್‌(41) ಕೊಲೆಯಾದ ದುರ್ದೈವಿ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಹೆಣ್ಣೂರು ಸಮೀಪದ ನಾಗವಾರ ರಿಂಗ್‌ ರಸ್ತೆಯ ಸರ್ವಿಸ್‌ ರಸ್ತೆಯಲ್ಲಿ ಶ್ರೀಧರ್‌ ಹೋಗುವಾಗ ಬೆನ್ನಟ್ಟಿದ ದುಷ್ಕರ್ಮಿಗಳು ದಾಳಿ(Attack) ಮಾಡಿ ಕೊಲೆಗೈದು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಮೂರು ತಂಡಗಳನ್ನು ರಚಿಸಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

ಏನಿದು ಘಟನೆ?

ಗಾರ್ಮೆಂಟ್‌ ಉದ್ಯಮಿಯಾಗಿರುವ ಶ್ರೀಧರ್‌ ಮಧ್ಯಾಹ್ನ ಕಾರಿನಲ್ಲಿ ತೆರಳುವಾಗ ನಾಲ್ವರು ದುಷ್ಕರ್ಮಿಗಳು ದ್ವಿಚಕ್ರವಾಹನದಲ್ಲಿ ಕಾರನ್ನು ಹಿಂಬಾಲಿಸಿದ್ದಾರೆ. ಇದನ್ನು ಗಮನಿಸಿರುವ ಶ್ರೀಧರ್‌ ಕಾರನ್ನು ವೇಗವಾಗಿ ಚಲಾಯಿಸಿದ್ದಾರೆ. ಆದರೂ ದುಷ್ಕರ್ಮಿಗಳು ಕಾರನ್ನು ಹಿಂಬಾಲಿಸಿದ್ದಾರೆ. ಈ ವೇಳೆ ಶ್ರೀಧರ್‌ ಕಾರನ್ನು ನಿಲ್ಲಿಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರ ಝಳಪಿಸುತ್ತಾ ಅಟ್ಟಾಡಿಸಿ ಕೊನೆಗೆ ಸುತ್ತುವರಿದು ಶ್ರೀಧರ್‌ನನ್ನು ಬರ್ಬರವಾಗಿ ಕೊಚ್ಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

Crime News| ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಇರಿದು ಕೊಂದರು

ಶ್ರೀಧರ್‌ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈಗಾಗಲೇ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ(CCTV) ಕ್ಯಾಮರಾ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಿದ್ದಾರೆ. ದುಷ್ಕರ್ಮಿಗಳ ಸುಳಿವು ಸಿಕ್ಕಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಸಂಬಂಧ ಹೆಣ್ಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.

ಗೂಂಡಾ ಕಾಯ್ದೆಯಡಿ ರೌಡಿ ಸೆರೆ

ಕಾನೂನುಬಾಹಿರ ಚಟುವಟಿಕೆ(Illegal Activity) ಹಿನ್ನೆಲೆಯಲ್ಲಿ ಕುಖ್ಯಾತ ರೌಡಿ(Rowdy) ಬಸವೇಶ್ವರ ನಗರದ ರಫಿ ಎಂಬಾತನನ್ನು ಗೂಂಡಾ ಕಾಯ್ದೆಯಡಿ ಸಿಸಿಬಿ ಪೊಲೀಸರು(CCB Police) ಬಂಧಿಸಿದ್ದಾರೆ.

ರಾಜಾಜಿನಗರದ ಪ್ರಕಾಶ ನಗರದ 5ನೇ ಅಡ್ಡ ರಸ್ತೆ ನಿವಾಸಿ ರಫಿ, ಪಶ್ಚಿಮ ವಿಭಾಗದಲ್ಲಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ. ಆತನ ಮೇಲೆ ಬಸವೇಶ್ವರ ನಗರ, ರಾಜಾಜಿನಗರ ಸೇರಿದಂತೆ ಇತರೆ ಠಾಣೆಗಳಲ್ಲಿ(Police Station) ಪ್ರಕರಣ ದಾಖಲಾಗಿವೆ. ರಫಿ ವಿರುದ್ಧ ಬಸವೇಶ್ವರ ನಗರ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು. ಅಪರಾಧ(Crime) ಕೃತ್ಯಗಳಲ್ಲಿ ರಫಿ ಸಕ್ರಿಯವಾದ ಕಾರಣಕ್ಕೆ ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಆದೇಶದಂತೆ ಆರೋಪಿಯನ್ನು ಬಂಧಿಸಲಾಗಿದೆ(Arrest) ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಸಾಲ ತೀರಿಸಲು ಪರಿಚಿತರ ಮನೆಯಲ್ಲಿ ಚಿನ್ನ ದೋಚಿದ

ಸಾಲ(Loan) ತೀರಿಸಲು ತನ್ನ ಪಕ್ಕದ ಮನೆಯಲ್ಲಿ ಚಿನ್ನಾಭರಣ(Jewellery) ದೋಚಿದ್ದ(Theft) ವ್ಯಕ್ತಿಯೊಬ್ಬನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಂದ್ರಹಳ್ಳಿ ಮುಖ್ಯರಸ್ತೆಯ ಡಿ ಗ್ರೂಪ್‌ ಲೇಔಟ್‌ ನಿವಾಸಿ ಯೋಗೇಶ್‌ ಬಂಧಿತನಾಗಿದ್ದು, ಆರೋಪಿಯಿಂದ(Accused) .2.15 ಲಕ್ಷ ಮೌಲ್ಯದ 48 ಗ್ರಾಂ ಆಭರಣ ಜಪ್ತಿ ಮಾಡಲಾಗಿದೆ.

ಹಲವು ದಿನಗಳಿಂದ ಖಾಸಗಿ ಕಂಪನಿ ಉದ್ಯೋಗಿ ಹಾಗೂ ಯೋಗೇಶ್‌ ನೆರೆಹೊರೆಯಲ್ಲಿ ನೆಲೆಸಿದ್ದು, ಎರಡು ಕುಟುಂಬಗಳ ನಡುವೆ ಆತ್ಮೀಯತೆ ಇದೆ. ಟ್ರಾವೆಲ್ಸ್‌ ಏಜೆನ್ಸಿ ನಡೆಸುತ್ತಿದ್ದ ಯೋಗೇಶ್‌, ಇತ್ತೀಚೆಗೆ ವ್ಯವಹಾರದಲ್ಲಿ ನಷ್ಟ ಉಂಟಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಕೆಲ ದಿನಗಳಿಂದ ಸಾಲಗಾರರ ಕಾಟ ಜೋರಾಗಿತ್ತು. ಇದರಿಂದ ಬೇಸತ್ತ ಆತ, ಪಕ್ಕದ ಮನೆಯವರು ಯಾರು ಇಲ್ಲದ ವೇಳೆ ಮನೆ ಬೀಗ ಕೀ ತೆಗೆದು ಆಭರಣ ದೋಚಿದ್ದ. ಬಳಿಕ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿತ್ತು ಎಂದು ಪೊಲೀಸರು ಹೇಳಿದ್ದಾರೆ.

Crime News: ಕಟ್ಟಿಕೊಂಡವನನ್ನು ಬಿಟ್ಟುಬಂದು ಇಟ್ಟುಕೊಂಡವನ ಕೈಯಿಂದ ಕೊಲೆಯಾದಳು

ಕೆ.ಆರ್‌.ಮಾರುಕಟ್ಟೆ ಬಳಿ 170 ಜೀವಂತ ಆಮೆ ಪತ್ತೆ

ಬೆಂಗಳೂರು ನಗರದ ಕೆ.ಆರ್‌.ಮಾರುಕಟ್ಟೆ ಬಳಿ ವಾರಸುದಾರರು ಇಲ್ಲದ ಎರಡು ಬ್ಯಾಗ್‌ಗಳಲ್ಲಿ ಪತ್ತೆಯಾಗಿದ್ದ 170 ಜೀವಂತ ಆಮೆಗಳನ್ನು(Turtle) ಕಲಾಸಿಪಾಳ್ಯ ಠಾಣೆ ಪೊಲೀಸರು ಸುರಕ್ಷಿತವಾಗಿ ಬನ್ನೇರುಘಟ್ಟದ ರಕ್ಷಣಾ ಕೇಂದ್ರಕ್ಕೆ ತಲುಪಿಸಿದ್ದಾರೆ.

ಶುಕ್ರವಾರ ಕೆ.ಆರ್‌.ಮಾರುಕಟ್ಟೆ(KR Market) ಬಳಿಯ ನ್ಯಾಷನಲ್‌ ಟ್ರಾವೆಲ್ಸ್‌ ಕಚೇರಿ ಬಳಿ ಎರಡು ಬ್ಯಾಗ್‌ಗಳು ಬಿದ್ದಿದ್ದವು. ಹೀಗಾಗಿ ಕಚೇರಿಯ ಸಿಬ್ಬಂದಿ ಆ ಬ್ಯಾಗ್‌ಗಳನ್ನು ಪೊಲೀಸ್‌ ಠಾಣೆಗೆ ತಂದಿದ್ದರು. ಈ ವೇಳೆ ಬ್ಯಾಗ್‌ ಬಿಚ್ಚಿ ನೋಡಿದಾಗ 170 ಜೀವಂತ ಆಮೆಗಳು ಇರುವುದು ಬೆಳಕಿಗೆ ಬಂದಿತು. ಹೀಗಾಗಿ ಅವುಗಳನ್ನು ಬನ್ನೇರುಘಟ್ಟರಕ್ಷಣಾ ಕೇಂದ್ರಕ್ಕೆ ತಲುಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಿಚಿತ ಹಣದಾಸೆಗೆ ಜೀವಂತ ಆಮೆಗಳನ್ನು ಅಕ್ರಮವಾಗಿ ಮಾರಾಟ ಮಾಡಲು ತಂದಿರಬಹುದು. ಕೊನೆ ಕ್ಷಣದಲ್ಲಿ ಆ ಬ್ಯಾಗ್‌ಗಳನ್ನು ಬಿಟ್ಟು ಪರಾರಿಯಾಗಿರುವ ಸಾಧ್ಯತೆಯಿದೆ. ಈ ಸಂಬಂಧ ಪ್ರಕರಣ ದಾಖಲಿಸಿದ್ದು, ಅಪರಿಚಿತ ವ್ಯಕ್ತಿಯ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

Follow Us:
Download App:
  • android
  • ios