ರಾಯ್‌ಪುರ(ನ. 29)  ಈಕೆ ಚಾಲಾಕಿ ಬಾಲಕಿ. ಮನೆಗೆ ತಡವಾಗಿ ಬುರುತ್ತಿದ್ದೀಯಾ ಎಂದು ಪೋಷಕರ ಕೈಯಲ್ಲಿ ನಿಂದಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಗ್ಯಾಂಗ್ ರೇಪ್ ಕತೆ ಕಟ್ಟಿದ್ದಾಳೆ.

ಭಾನುವಾರ ಸಂಜೆ (ನವೆಂಬರ್ 22), 14 ವರ್ಷದ ಬಾಲಕಿ ತನ್ನ ಸ್ನೇಹಿತರನ್ನು ಭೇಟಿಯಾಗಲು ಹೋಗುವುದಾಗಿ ಹೇಳಿ ಮನೆಯಿಂದ ಹೊರ ಹೋಗಿದಳು. ಅವಳು ತಡರಾತ್ರಿ ಮನೆಗೆ ಹಿಂದಿರುಗದಿದ್ದಾಗ, ಆಕೆಯ ಕುಟುಂಬ ಸದಸ್ಯರು ಅವಳನ್ನು ಹುಡುಕಲು  ಆರಂಭಿಸಿದ್ದಾರೆ.  ರಾತ್ರಿ 11: 30 ರ ಸುಮಾರಿಗೆ ಅವರು ನಾಪತ್ತೆ ದೂರು  ನೀಡಲು ಠಾಣೆಗೂ ಹೋಗಿದ್ದಾರೆ. ಆದರೆ ಅಷ್ಟರಲ್ಲಿ ಬಾಲಕಿ ಮರಳಿ  ಬಂದಿದ್ದಾಳೆ.

ಫೈವ್ ಸ್ಟಾರ್ ಹೋಟೆಲ್ ನಲ್ಲಿ ಇದೆಂಥ ಹೇಯ ಕೃತ್ಯ

ನಾನು ಗೆಳೆಯೆನೊಂದಿಗೆ ಇದ್ದಾಗ ನಾಲ್ವರು ಅಪರಿಚಿತರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ಹೇಳಿದ್ದಾಳೆ. 

7 ವಿಶೇಷ ಪೊಲೀಸ್ ತಂಡಗಳನ್ನು ರಚನೆ ಮಾಡಿ ಎರಡು ಮೂರು ದಿನ ಮಾಹಿತಿ ಕಲೆ ಹಾಕಿದ್ದಾರೆ.   ಬಾಲಕಿ ಮತ್ತು ಆಕೆಯ ಸ್ನೇಹಿತ ಘಟನೆ ಬಗ್ಗೆ ಹೊಂದಿಣಿಕೆಯಿಲ್ಲದ ಹೇಳೀಕೆ ನೀಡುತ್ತಿದ್ದರು. 

ವಿಚಾರಣೆ ವೇಳೆ ಬಾಲಕಿಯ ಗೆಳೆಯ ಸತ್ಯ ಒಪ್ಪಿಕೊಂಡಿದ್ದು ನಾವಿಬ್ಬರು ಪರಸ್ಪರ ಸಂಬಂಧದಲ್ಲಿ ಇದ್ದೇವು ಎಂದು ಹೇಳಿದ್ದಾನೆ.  ಭೇಟಿ ಮಾಡಲು ಪಿಜಿ, ಕಾಲೇಜು ಸೇರಿದಂತೆ ವಿವಿಧಕಡೆ ಹೋಗುತ್ತಿದ್ದೆವು ಎಂದು ಹೇಳಿದ್ದಾರೆ. ಅಪ್ರಾಪ್ತೆ ಜತೆ ಲೈಂಗಿಕ ಸಂಪರ್ಕ ಬೆಳಸಿದ ಆರೋಪದ ಮೇಲೆ ಆಕೆಯ ಗೆಳೆಯನ ಮೇಲೆ ಪ್ರಕರಣ ದಾಖಲಾಗಿದೆ.