ಬುದ್ಧಿಮಾಂದ್ಯ ಮಹಿಳೆ ಮೇಲೆ ಕೆಆರ್ ಆಸ್ಪತ್ರೆಯಲ್ಲಿ ಅತ್ಯಾಚಾರ
* ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಘೋರ ಘಟನೆ
* ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ
* ಕಿಟಕಿ ಮುರಿದು ಒಳಕ್ಕೆ ನುಗ್ಗಿದ ಅಪರಿಚಿತ
ಮೈಸೂರು(ಜು. 10) ಈ ಘಟನೆಯಿಂದ ಸಾಂಸ್ಕೃತಿಕ ನಗರಿಯೇ ಬೆಚ್ಚಿಬಿದ್ದಿದ್ದು ಪೊಲೀಸರು ಘಟನೆಯ ಹಿಂದೆ ಬಿದ್ದಿದ್ದಾರೆ. ಸುತ್ತಲೂ ಐವತ್ತಕ್ಕೂ ಹೆಚ್ಚು ಸಿಸಿ ಕ್ಯಾಮರಾ ಗಳು. ಈ ಸಿಸಿ ಕ್ಯಾಮರಾಗಳು ಅದೆಷ್ಟು ಇದ್ರೂ, ಇಲ್ಲಿ ನಡೆದಿರೋ ಘಟನೆಯ ಚಿತ್ರವಳಿಗಳು ಮಾತ್ರ ಎಲ್ಲೂ ರೆಕಾರ್ಡ್ ಆಗಿಯೇ ಇಲ್ಲ. ಅಂದಹಾಗೆ ಇದು ಮೈಸೂರಿನ ಬಡವರಪಾಲಿನ ಸಂಜೀವಿನಿ ಅಂತಾ ಕರೆಸಿಕೊಳ್ಳುವ ದೊಡ್ಡಾಸ್ಪತ್ರೆ. ಆದ್ರೆ ಇದೇ ಆಸ್ಪತ್ರೆಯಲ್ಲಿರೋ ಬುದ್ಧಿಮಾಂದ್ಯ ಮಹಿಳೆ ಮೇಲೆ ಅಪರಿಚಿತನೋರ್ವ ಅತ್ಯಾಚಾರ ಎಸಗಿದ್ದಾನೆ ಅನ್ನೋ ಗಂಭೀರ ಆರೋಪವೊಂದು ಇದೀಗ ಕೇಳಿಬಂದಿದೆ.
ಕೆ.ಆರ್. ಆಸ್ಪತ್ರೆಯಲ್ಲಿ ಬುದ್ಧಿಮಾಂದ್ಯ ಮಹಿಳೆಯೊರ್ವಳು ಚಿಕಿತ್ಸೆ ಪಡೆಯುತ್ತಿದ್ಲು. ಆದ್ರೆ ಜುಲೈ 3 ರಂದು ಆಸ್ಪತ್ರೆ ಕಿಟಕಿ ಸರಳು ಮುರಿದು ಅಪರಿಚಿತನೋರ್ವ ಒಳ ನುಗ್ಗಿದ್ದಾನಂತೆ. ಈ ವೇಳೆ ಆಸ್ಪತ್ರೆಯಲ್ಲಿದ್ದ ಇನ್ನಿತರ ಮಹಿಳೆಯರು ಕೂಗಿಕೊಂಡಿದ್ದಾರೆ. ಈ ವೇಳೆ ಅಪರಿಚಿತ ಎಸ್ಕೇಪ್ ಆಗಿದ್ದಾನೆ. ಮೊದಲಿನಿಂದಲೂ ಕಿಟಕಿ ಮೂಲಕ ಅಪರಿಚಿತನೋರ್ವ ಎಂಟ್ರಿಯಾಗಿ ಮಹಿಳೆಯ ಮೇಲೆ ತನ್ನ ಮೃಗೀಯ ವರ್ತನೆ ತೋರ್ತಿದ್ದ ಅನ್ನೋ ಗಂಭೀರ ಆರೋಪ ಇದೆ. ಈ ಬಗ್ಗೆ ಮೊದಲೇ ಆ ವಾರ್ಡ್ ನಲ್ಲಿದ್ದ ವೃದ್ಧೆಯೋರ್ವಳು ಆಸ್ಪತ್ರೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರೂ, ಗಮನ ಹರಿಸಿಲ್ಲ ಅನ್ನೋ ಆರೋಪ ಇದೆ. ಘಟನೆ ಬಳಿಕ ವಿಚಾರ ತಿಳಿದು ಮಾನವ ಹಕ್ಕುಗಳ ಸೇವಾ ಸಮಿತಿ ಸದಸ್ಯ ಸ್ನೇಹಮಹಿ ಕೃಷ್ಣ ಸೇರಿ ಹಲವರು ಆಸ್ಪತ್ರೆಗೆ ತೆರಳಿ ವಿಚಾರಣೆ ಮಾಡಿದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾಡಿಗೆ ಬದಲು ಕಿಸ್ ಕೊಡು ಎಂದ ಮನೆ ಮಾಲೀಕ
ಘಟನೆ ತಿಳಿದು ದೇವರಾಜ ಠಾಣಾ ಪೊಲೀಸರು ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಕೆ.ಆರ್.ಆಸ್ಪತ್ರೆ ಸೂಪರ್ ಡೆಂಟ್ ನಂಜುಂಡಸ್ವಾಮಿ ಮಾತ್ರ ಈ ರೀತಿಯ ಘಟನೆ ನಡೆದಿಯೇ ಇಲ್ಲ ಅನ್ನೋ ರೀತಿ ಪ್ರತಿಕ್ರಿಯೆ ನೀಡ್ತಿದ್ದಾರೆ. ಮೊದಲು ಕಳ್ಳತನಕ್ಕೆ ಯತ್ನ ನಡೆದಿದೆ ಎಂದು ಹೇಳಲಾಗಿತ್ತು. ಇದಕ್ಕೆ ಸುಮ್ಮನ್ನಿದ್ದೇವು, ಆದರೆ ನಂತರ ಅತ್ಯಾಚಾರ ನಡೆದಿದೆ ಅನ್ನೋ ಆರೋಪ ಬಂದಿದೆ. ಈ ಕಾರಣದಿಂದ ಪೊಲೀಸರಿಗೆ ದೂರು ನೀಡಿದ್ದೇವೆ. ಆಕೆ ಬುದ್ಧಿಮಾಂದ್ಯ ಮಹಿಳೆಯಾಗಿದ್ದಾಳೆ, ಸದ್ಯ ಪ್ರಾಥಮಿಕ ಪರೀಕ್ಷೆ ಮಾಡಲಾಗಿದೆ. ಪ್ರಾಥಮಿಕ ಪರೀಕ್ಷೆಯಲ್ಲಿ ಅತ್ಯಾಚಾರದ ವಿಚಾರ ಕಂಡುಬಂದಿಲ್ಲ ಎಫ್.ಎಸ್.ಎಲ್ ಗೆ ವರದಿಗೆ ಕಳುಹಿಸಲಾಗಿದೆ ಎಂದಿದ್ದಾರೆ.
ಒಟ್ಟಿನಲ್ಲಿ, ಆಸ್ಪತ್ರೆ ಭದ್ರತಾ ಸಿಬ್ಬಂದಿ, ಐವತ್ತಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳು ಇದ್ದೂ ಕೂಡ ಈ ರೀತಿಯ ಕೃತ್ಯ ನಡೆಯುತ್ತದೆ ಅಂದ್ರೆ ಮತ್ತೆಲ್ಲಿ ರಕ್ಷಣೆ ಸಿಗುತ್ತದೆ ಅನ್ನೋದೆ ಪ್ರಶ್ನೆಯಾಗಿದೆ. ಚಿಕಿತ್ಸೆ ಪಡೆಯಲು ಬಂದ ರೋಗಿಗಳು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದ್ರೂ ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.