ಬೆಂಗಳೂರು(ಫೆ.06): ಪತಿಯ ಕಿರು​ಕು​ಳಕ್ಕೆ ಬೇಸತ್ತು ಪತ್ನಿ ನೇಣು​ ಬಿ​ಗಿ​ದು​ಕೊಂಡು ಆತ್ಮ​ಹತ್ಯೆ ಮಾಡಿ​ಕೊಂಡಿ​ರುವ ಘಟನೆ ವರ್ತೂರು ಠಾಣಾ ವ್ಯಾಪ್ತಿ​ಯಲ್ಲಿ ನಡೆ​ದಿ​ದೆ. ವರ್ತೂರು ನಿವಾಸಿ ಪದ್ಮಾ​ವ​ತಿ (38) ಮೃತ ಮಹಿ​ಳೆ. ಪದ್ಮಾವತಿ ಅವರ ಪತಿ ಭಾಸ್ಕರ್‌ ಎಂಬ​ವ​ರನ್ನು ಬಂಧಿ​ಸ​ಲಾ​ಗಿದೆ ಎಂದು ಪೊಲೀ​ಸರು ಹೇಳಿ​ದ್ದಾರೆ.

ಭಾಸ್ಕರ್‌ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, 15 ವರ್ಷ​ಗಳ ಹಿಂದೆ ಪದ್ಮಾ​ವ​ತಿ​ಯನ್ನು ವಿವಾಹವಾಗಿದ್ದರು. ದಂಪ​ತಿಗೆ 11 ವರ್ಷದ ಮಗ ಇದ್ದಾನೆ. ಭಾಸ್ಕ​ರ್‌ ಪತ್ನಿಗೆ ನಿತ್ಯ ಕಿರು​ಕುಳ ನೀಡು​ತ್ತಿದ್ದ. ಆಕೆಯ ಕುಟುಂಬ ಸದ​ಸ್ಯರ ಜತೆ ಮಾತ​ನಾ​ಡ​ದಂತೆ ಷರತ್ತು ಹಾಕಿದ್ದ. ಅಲ್ಲದೆ, ಬೇರೊಂದು ಮಹಿಳೆ ಜತೆ ಅನೈತಿಕ ಸಂಬಂಧ ಹೊಂದಿದ್ದ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆದ​ರಿಂದ ಬೇಸತ್ತ ಪದ್ಮಾ​ವತಿ ಜ.28ರಂದು ಮನೆ​ಯಲ್ಲೇ ಫ್ಯಾನ್‌ಗೆ ನೇಣು​ಬಿ​ಗಿ​ದು​ಕೊಂಡು ಆತ್ಮ​ಹತ್ಯೆ ಮಾಡಿ​ಕೊಂಡಿ​ದ್ದಾರೆ. ಕೌಟುಂಬಿಕ ವಿಚಾ​ರಕ್ಕೆ ಈ ಹಿಂದೆ ಪದ್ಮಾ​ವತಿ ಮೂರು ಬಾರಿ ಆತ್ಮ​ಹ​ತ್ಯೆಗೆ ಯತ್ನಿ​ಸಿದ್ದರು ಎಂದು ಆಕೆಯ ಕುಟುಂಬ ಸದ​ಸ್ಯರು ದೂರು ನೀಡಿ​ದ್ದಾರೆ. ಈ ಹಿನ್ನೆ​ಲೆ​ಯಲ್ಲಿ ಭಾಸ್ಕ​ರ್‌​ನನ್ನು ಬಂಧಿ​ಸ​ಲಾ​ಗಿದೆ ಎಂದು ಪೊಲೀ​ಸರು ಹೇಳಿ​ದ​ರು.

ಬೇರೆ ಹೆಣ್ಣುಗಳು ಬೇಕು : ಹೆಂಡ್ತಿ ಮುಖ ಕಂಡರಾಗದ ಸಾಫ್ಟ್‌ವೇರ್ ಗಂಡನಿಂದ ಬೇಸತ್ತು ಸೂಸೈಡ್
 

ಈ ಮಧ್ಯೆ ಭಾಸ್ಕರ್‌ ಪತ್ನಿ ಜತೆ ವಾರಾಂತ್ಯ​ದಲ್ಲಿ ಪಾರ್ಟಿ​ಗ​ಳಿಗೆ ಹೋಗು​ತ್ತಿದ್ದು, ಆ ವೇಳೆ ಸ್ನೇಹಿ​ತರ ಜತೆ ನೃತ್ಯ ಮಾಡು​ವಂತೆ ಪದ್ಮಾ​ವ​ತಿಗೆ ಪೀಡಿ​ಸು​ತ್ತಿದ್ದ ಎಂದು ಹೇಳ​ಲಾ​ಗಿ​ದೆ. ಅದ​ರಂತೆ ನಡೆ​ದು​ಕೊ​ಳ್ಳ​ದಿ​ದ್ದರೆ ದೈಹಿಕ ಮತ್ತು ಮಾನ​ಸಿಕ ಹಿಂಸೆ ನೀಡು​ತ್ತಿದ್ದ. ಪದ್ಮಾ​ವತಿ ಆತ್ಮ​ಹ​ತ್ಯೆಗೆ ಈ ಕಾರ​ಣವೂ ಒಂದು ಎನ್ನ​ಲಾ​ಗಿದೆ. ಈ ಬಗ್ಗೆ ತನಿಖೆ ನಡೆ​ಯು​ತ್ತಿದೆ ಎಂದು ಪೊಲೀ​ಸರು ತಿಳಿಸಿದ್ದಾರೆ.