ಮಂಡ್ಯ: ಮಳವಳ್ಳಿ ಬಾಲಕಿ ರೇಪ್ ಅಂಡ್ ಮರ್ಡರ್ ಕೇಸ್, ಜಾರ್ಜ್‌ಶೀಟ್ ಸಲ್ಲಿಕೆ
ನ್ಯಾಯಾಲಯಕ್ಕೆ 638 ಪುಟಗಳ ದೋಷಾರೋಪಣ ಪಟ್ಟಿ ಸಲ್ಲಿಸಿದ ಮಳವಳ್ಳಿ ಪೊಲೀಸರು
ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ
ಮಂಡ್ಯ(ಅ.26): ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮಳವಳ್ಳಿ ಬಾಲಕಿ ರೇಪ್ ಅಂಡ್ ಮರ್ಡರ್ ಪ್ರಕರಣದಲ್ಲಿ ಶೀಘ್ರ ಜಾರ್ಜ್‌ಶೀಟ್ ಸಲ್ಲಿಸಲು ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ 638 ಪುಟಗಳ ದೋಷಾರೋಪಣ ಪಟ್ಟಿ ಸಲ್ಲಿಸಿದ ಮಳವಳ್ಳಿ ಪೊಲೀಸರು ಪ್ರಕರಣದ ವಿಚಾರಣೆಗೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡುವಂತೆಯು ಮನವಿ ಮಾಡಿದ್ದಾರೆ. ಅ.11 ರಂದು ಮಳವಳ್ಳಿ ಪಟ್ಟಣದಲ್ಲಿ ಹೇಯ ಕೃತ್ಯ ನಡೆದಿತ್ತು. ಟ್ಯೂಷನ್‌ಗೆ ಬಂದಿದ್ದ ಬಾಲಕಿಯನ್ನು ಅತ್ಯಾಚಾರ ಮಾಡಿದ್ದ ಮೇಲ್ವಿಚಾರಕ ಕಾಂತರಾಜು ಬಾಲಕಿಯನ್ನು ಹತ್ಯೆಗೈದಿದ್ದನು. ಘಟನೆ ನಡೆದ ದಿನವೇ ಆರೋಪಿ ಬಂಧನವಾದರು ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ರಾಜ್ಯಾದ್ಯಂತ ಒತ್ತಾಯ ಕೇಳಿಬಂದವು.
ಪ್ರಕರಣ ಸೂಕ್ಷ್ಮತೆ ಅರಿತ ಮಂಡ್ಯ ಎಸ್‌ಪಿ ಎನ್. ಯತೀಶ್ ಮಳವಳ್ಳಿ ಡಿವೈಎಸ್ಪಿ ನವೀನ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ರು. ಘಟನೆ ನಡೆದ ಎರಡೇ ವಾರದಲ್ಲಿ ಪಾರದರ್ಶಕ ಮತ್ತು ವೈಜ್ಞಾನಿಕ ತನಿಖೆ ನಡೆಸಿರುವ ತನಿಖಾ ತಂಡ, ಎಲ್ಲ ಸಾಕ್ಷಿಗಳನ್ನ ಸಂಗ್ರಹಿಸಿ ನ್ಯಾಯಾಲಯಕ್ಕೆ ವಿವರವಾದ ಚಾರ್ಜ್‌ಶೀಟ್ ಸಲ್ಲಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಪ್ರಕರಣದ ವಿಚಾರಣೆಗೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡುವಂತೆಯೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮಳವಳ್ಳಿ ಬಾಲಕಿ ರೇಪ್ & ಮರ್ಡರ್: ಕುಟುಂಬಸ್ಥರಿಗೆ ಸಿದ್ದರಾಮಯ್ಯ ಸೇರಿ ಗಣ್ಯರ ಸಾಂತ್ವನ
638 ಪುಟಗಳ ಚಾರ್ಜ್ ಶೀಟ್: ಸ್ಫೋಟಕ ವಿಚಾರಗಳು ಉಲ್ಲೇಖ
ಮಳವಳ್ಳಿ ಬಾಲಕಿ ಅತ್ಯಾಚಾರ ಕೊಲೆ ಪ್ರಕರಣ ಸಂಬಂಧ 14 ದಿನದಲ್ಲೆ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ದೋಷಾರೋಪಣ ಪಟ್ಟಿಯಲ್ಲಿ ಘಟನೆ ಆಕಸ್ಮಿಕವಲ್ಲ, ಪೂರ್ವ ನಿಯೋಜಿತ ಎಂಬ ವಿಚಾರ ಬಯಲಾಗಿದೆ. ಪ್ರತಿದಿನ ಚಾಕೋಲೇಟ್ ನೀಡ್ತಿದ್ದ ಕೀಚಕ ಕಾಂತರಾಜು ಬಾಲಕಿ ಪುಸಲಾಯಿಸುತ್ತಿದ್ದನು. ಶಾಲೆಗೆ ರಜೆಯಿದ್ದರಿಂದ ಟ್ಯೂಷನ್ ಗೆ ರಜೆ ಇದಿಯಾ ಎಂದು ಕರೆ ಮಾಡಿದ್ದ ಬಾಲಕಿಗೆ ನಾಳೆ 11 ಗಂಟೆಗೆ ಟ್ಯೂಷನ್ ಇದೆ ಬಾ ಎಂದಿದ್ದ ಸುಳ್ಳು ಹೇಳಿದ್ದನು. ಘಟನೆ ನಡೆದ ದಿವವೂ ಟ್ಯೂಷನ್ ಗೆ ಬರುವಂತೆ ಬಾಲಕಿಗೆ ಮಾಡಿದ್ದಾನೆ.
ಕಾಂತರಾಜು ಮಾತಿನಂತೆ 11 ಗಂಟೆಗೆ ಟ್ಯೂಷನ್‌ಗೆ ಬಾಲಕಿ ತೆರಳಿದ್ದಳು. ಟ್ಯೂಷನ್ ಕೇಂದ್ರಕ್ಕೆ ಬೀಗ ಹಾಕಿದ ಹಿನ್ನಲೆ ಕಾಂತರಾಜು ವಾಸವಿದ್ದ ಮೇಲ್ಮಹಡಿಗೆ ತೆರಳಿದ್ದಳು. ಬಳಿಕ ಚಾಕೋಲೆಟ್ ಕೊಟ್ಟು ಟ್ಯೂಷನ್ ಪಕ್ಕದ ನಿರ್ಮಾಣ ಹಂತದ ಮನೆಗೆ ಕರೆದೊಯ್ದ ಕಾಂತರಾಜು. ನಿರ್ಮಾಣ ಹಂತದ ಮನೆಯಲ್ಲಿ ಬಾಲಕಿಯೊಂದಿಗೆ ಬಲವಂತವಾಗಿ ಸಂಭೋಗ ನಡೆಸಿದ್ದಾನೆ. ಬಾಲಕಿ ಕಿರುಚದಂತೆ ಆಕೆಯ ಒಳ ಉಡುಪನ್ನೆ ಬಾಯಿಗೆ ತುರುಕಿದ್ದನು. ಅತ್ಯಾಚಾರ ಎಸಗಿ ಕಲ್ಲಿನಿಂದ ಹಲ್ಲೆ ನಡೆಸಿದ್ದ ಆತ ವೈರ್ ನಿಂದ ಕುತ್ತಿಗೆ ಬಿಗಿದು ಬಾಲಕಿ ಕೊಲೆ ಮಾಡಿದ್ದಾನೆ.
ಬಳಿಕ ಶವವನ್ನ ನೀರಿನ ಸಂಪ್ ಗೆ ಎಸೆದಿದ್ದ ಕಿರಾತಕ. ನಂತರ ಆ ಬಾಲಕಿ ಬಟ್ಟೆಗಳನ್ನ ಮನೆಯ ಹೊರಗೆ ಬಿಸಾಕಿ ಏನು ಗೊತ್ತಿಲ್ಲದಂತೆ ನಾಟಕ ಮಾಡಿದ್ದನು. ಅನುಮಾನ ಬಾರದಂತೆ ಪೋಷಕರೊಂದಿಗೆ ತೆರಳಿ ಬಾಲಕಿ ಹುಡುಕಾಟದ ಡ್ರಾಮ ಮಾಡಿದ್ದ. ಜೊತೆಗೆ ಬೇರೆಯವರ ಮೇಲೆ ಅನುಮಾನ ಮೂಡುವಂತೆಯೂ ಷಡ್ಯಂತ್ರ ನಡೆಸಿದ್ದ. ಬಳಿಕ ಕಾಂತರಾಜುವಿನ ಪೋನ್ ಕರೆ ಪರಿಶೀಲನೆ ಬಳಿಕ ಕೃತ್ಯ ಬಯಲಾಗಿತ್ತು.