ಉತ್ತರ ಪ್ರದೇಶ(ಮೇ 27)  ತನ್ನೊಂದಿಗೆ ಸೆಕ್ಸ್ ಮಾಡಲು ಹೆಂಡತಿ ಒಪ್ಪಲಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಶೂಟ್ ಮಾಡಿ ಮೂವರು ಮಕ್ಕಳನ್ನು ಅಮಾನುಷವಾಗಿ ಕಾಲುವೆಗೆ ಎಸೆದ ಕ್ರೂರಿಯನ್ನು ಬಂಧಿಸಲಾಗಿದೆ.  ಕಳೆದ  15 ದಿನಗಳಿಂದ  ಹೆಂಡತಿ ಗಂಡನಿಂದ ದೂರವಿದ್ದಳು.

ಉತ್ತರ ಪ್ರದೇಶದ ಮುಜಫರ್ ನಗರ್ ದಿಂದ ಘಟನೆ ವರದಿಯಾಗಿದೆ. ಬೇಸಿಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಕ್ಕಳ ಶವ ಇನ್ನೂ ಪತ್ತೆ ಮಾಡಲಾಗಿಲ್ಲ. ಆರೋಪಿ ಪಪ್ಪು ಕುಮಾರ್  ನಾಪತ್ತೆಯಾಗಿದ್ದ.  ಗಂಡನಿಂದಲೇ  ಪತ್ನಿ ಡಾಲಿ (36) ಹತರಾಗಿದ್ದಾರೆ. ಪಾಫಿ ತಂದೆ ಸೋನಿಯಾ (5), ವನ್ಶ್ (3) ಮತ್ತು ಹರ್ಷಿತಾ (15 ತಿಂಗಳು) ರನ್ನು ನೀರಿಗೆ ಎಸೆದಿದ್ದ.

ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ,  ಬಾಂಗ್ಲಾ ಯುವತಿಯ ಮೇಲೆ ದಾರುಣ ಅತ್ಯಾಚಾರ

ಹೆಂಡತಿ ಮಕ್ಕಳನ್ನು ಕೊಂದು ಆರೋಪಿ ತಲೆತಪ್ಪಿಸಿಕೊಂಡಿದ್ದ. ಖಚಿತ ಮಾಹಿತಿ ಆಧರಿಸಿ ಆತನನ್ನು ಬಂಧಿಸಲಾಗಿದೆ ಎಂದು  ಪೊಲೀಸ್ ಅಧಿಕಾರಿ  ದೇಶರಾಜ್ ಸಿಂಗ್  ತಿಳಿಸಿದ್ದಾರೆ. 

ಉತ್ತರ ಪ್ರದೇಶ ಮತ್ತು ರಾಜಸ್ಥಾನದಿಂದ ಮಹಿಳಾ ದೌರ್ಜನ್ಯದ ಪ್ರಕರಣಗಳು  ಮೇಲಿಂದ ಮೇಲೆ ವರದಿಯಾಗುತ್ತಲೇ ಇವೆ. ಅತ್ಯಾಚಾರದ  ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ.