Asianet Suvarna News Asianet Suvarna News

ಟೀಗೆಂದು ಮನೆಗೆ ಕರೆದು ಪತ್ನಿಯ ಗೆಳತಿ ಮೇಲೆ ಅತ್ಯಾಚಾರ, ವಿಡಿಯೋ ಮಾಡ್ಕೊಂಡ!

* ಟೀ ಕುಡಿಯಲು ಕರೆಸಿ ಪತ್ನಿಯ ಗೆಳತಿ ಮೇಲೆ ಅತ್ಯಾಚಾರ
* ನೊಂದ ಮಹಿಳೆಯಿಂದ ಪ್ರಕರಣ ದಾಖಲು
* ಮತ್ತು ಬರುವ ಔಷಧಿ ನೀಡಿ ಅತ್ಯಾಚಾರ
* ವಿಡಿಯೋ ಸೆರೆ ಮಾಡಿಕೊಂಡು ಬ್ಲಾಕ್ ಮೇಲ್

Man rapes wife s friend after inviting her for tea shoots her obscene video mah
Author
Bengaluru, First Published Jul 7, 2021, 11:46 PM IST

ಮೀರತ್(ಜು. 07)  ತನ್ನ ಪತ್ನಿಯ ಸ್ನೇಹಿತೆಯನ್ನು ಟೀ ಕುಡಿಯಲು ಎಂದು ಕರೆಸಿ ಆಕೆಯ ಮೇಲೆ ಕಾಮಾಂಧ ಅತ್ಯಾಚಾರ  ಮಾಡಿದ್ದಾನೆ. 

ಆರೋಪಿಯ ಮೇಲೆ ಮಹಿಳೆ ದೂರು ದಾಖಲಿಸಿದ್ದಾರೆ. ಮೀರತ್ ಜಿಲ್ಲೆಯ ಮಾವಾನಾ ಪಟ್ಟಣದಿಂದ ಪ್ರಕರಣ ವರದಿಯಾಗಿದೆ.  ಅತ್ಯಾಚಾರದ ದೃಶ್ಯವನ್ನು ವಿಡಿಯೋ ಮಾಡಿಕೊಂಡಿದ್ದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ಆರೋಪಿಸಿದ್ದಾಳೆ.

ಅಣ್ಣನ ಮೇಲಿನ ಸೇಡಿಗೆ ತಂಗಿ ಮೇಲೆ ಕಾಮುಕರ ಅಟ್ಟಹಾಸ

ವಾಕಿಂಗ್ ಗೆ ತೆರಳಲು ಮಾಡಿಕೊಂಡಿದ್ದ ಗೆಳತಿಯ ಗಂಡ ಇಂಥ ಕೃತ್ಯ ಎಸಗಿದ್ದಾನೆ. ಹೆಂಡತಿ ಮನೆಯಲ್ಲಿ ಇಲ್ಲದಿದ್ದಾಗ ಟೀ ಕುಡಿಯಲು ಕರೆ ನೀಡಿದ್ದು ಅದನ್ನು ನಂಬಿ ಮಹಿಳೆ ಹೋಗಿದ್ದಾಳೆ.

ತನಗೆ ಮತ್ತು ಬರುವ ಪಾನೀಯ ನೀಡಿ ಅತ್ಯಾಚಾರ ಎಸಗಿ ಅದನ್ನು ವಿಡಿಯೋ ಶೂಟ್ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದಾಳೆ.  ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಹಲವು ಸಾರಿ ದೂರು ನೀಡಲು ಯತ್ನಿಸಿದರೂ ಪೊಲೀಸರು ತೆಗೆದುಕೊಂಡಿಲ್ಲ. ನಂತರ ಅನಿವಾರ್ಯವಾಗಿ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ . ಬುದ್ಧಿಮಾಂದ್ಯ ಮಹಿಳೆ ಮೇಲೆ ಬಸ್ ನಲ್ಲಿಯೇ ಅತ್ಯಾಚಾರ ಎಸಗಿದ ಪ್ರಕರಣ ಕೇರಳದಿಂದ ವರದಿಯಾಗಿತ್ತು.

Follow Us:
Download App:
  • android
  • ios