ರಾಜ್‌ಕೋಟ್( ನ. 02) ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಲೆ ಮಾಡಿ ಆಕೆಯ ಶವವನ್ನು 10 ಕಿಲೋಮೀಟರ್‌ನಷ್ಟು ಸಾಗಿಸಿದ್ದಾನೆ. ಗುಜರಾತ್‌ನ ಪಾಲಿಟಾನಾ ಪಟ್ಟಣದ ಸಮೀಪದ ಹಳ್ಳಿಯಲ್ಲಿ ಭಾನುವಾರ ನಡೆದ ಘಟನೆ ಬೆಳಕಿಗೆ ಬಂದಿದೆ.

34 ವರ್ಷದ ಅಮಿತ್ ಹೆಮ್ನಾನಿ ಹಗಲಿನಲ್ಲಿಯೇ ಹೆಂಡತಿಯ ಶವ ಸಾಗಿಸಿದ್ದಾನೆ.  ಪ್ರದೇಶದ ಕೆಲವು ಸ್ಥಳೀಯರು ಆರೋಪಿ ಕೃತ್ಯ ನೋಡಿ ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.

ಮೊಟ್ಟೆ ಬೆಂದಿಲ್ಲ ಎಂದು ಹೋಟೆಲ್ ಮಾಲೀಕನಿಗೆ ಚಾಖು ಇರಿದ ಅಸಾಮಿ

ಸಿಂಧಿ ಕ್ಯಾಂಪ್ ಕಾಲೋನಿಯಲ್ಲಿರುವ ಮನೆಯಲ್ಲಿ  ಗಂಡ -ಹೆಂಡತಿ ನಡುವೆ ವಾಗ್ವಾದ ನಡೆದಿದ್ದು ವಿಕೋಪಕ್ಕೆ ಹೋಗಿದೆ. ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಮೃತ ಮಹಿಳೆಯನ್ನು ನೈನಾ ಎಂದು ಗುರುತಿಸಲಾಗಿದೆ.  ಕಳೆದ ಒಂದು ವರ್ಷದ ಹಿಂದೆ ಇಬ್ಬರು ವಿವಾಹವಾಗಿದ್ದರು.

ತನ್ನ ಬೈಕ್ ನ ಹ್ಯಾಂಡಲ್ ಮತ್ತು ಫುಟ್ ರಸ್ಟ್ ನಡುವೆ ಪತ್ನಿಯ ಶವ ಇಟ್ಟು ಸುಮಾರು 10 ಕಿ.ಮೀ. ಸಾಗಿಸಿದ್ದಾನೆ. ಇದನ್ನು ಕಂಡು ಅನುಮಾನಗೊಂಡ ಸ್ಥಳೀಯರು ಆರೋಪಿಯ ಬೆನ್ನು ಬಿದ್ದಿದ್ದಾರೆ. ಕೊನೆಗೆ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಆರೋಪಿಯನ್ನು ಕೋವಿಡ್ ಟೆಸ್ಟ್ ಗೆ ಕಳಿಸಲಾಗಿದೆ.