Asianet Suvarna News Asianet Suvarna News

ತಾಯಿಯನ್ನು ನಿಂದಿಸಿದಕ್ಕೆ ಸ್ನೇಹಿತನನ್ನೇ ಹತ್ಯೆ ಮಾಡಿದ..!

ಕೆ.​ಜಿ.​ಹ​ಳ್ಳಿ​ ಠಾಣೆ ವ್ಯಾಪ್ತಿ​ಯಲ್ಲಿ ನಡೆ​ದ ಘಟನೆ| ಆರೋಪಿ ಯೂಸುಫ್‌ ಪರಾರಿ| ಇಬ್ಬರೂ ಮಾತನಾಡುವ ವೇಳೆ ಯೂಸುಫ್‌ ತಾಯಿಯ ಬಗ್ಗೆ ಕೆಟ್ಟದಾಗಿ ನಿಂದಿ​ಸಿದ್ದ ಫರಾನ್‌| ಇದೇ ವಿಚಾರಕ್ಕೆ ಇಬ್ಬರ ನಡುವೆ ನಡೆದಿದ್ದ ಜಗಳ| 

Man Murder in Bengaluru grg
Author
Bengaluru, First Published Apr 17, 2021, 7:19 AM IST

ಬೆಂಗಳೂರು(ಏ.17): ಅವಾಚ್ಯ ಶಬ್ದಗ​ಳಿಂದ ತಾಯಿಯನ್ನು ನಿಂದಿ​ಸಿದಕ್ಕೆ ಆಕ್ರೋ​ಶ​ಗೊಂಡ ಕೋಳಿ ಅಂಗಡಿ ಸಿಬ್ಬಂದಿಯೊಬ್ಬ ಸ್ನೇಹಿ​ತ​ನನ್ನೇ ಹತ್ಯೆಗೈದಿರುವ ಘಟನೆ ಕೆ.​ಜಿ.​ಹ​ಳ್ಳಿ​ ಠಾಣೆ ವ್ಯಾಪ್ತಿ​ಯಲ್ಲಿ ನಡೆ​ದಿ​ದೆ.

ಕೆ.ಜಿ.ಹಳ್ಳಿ ನಿವಾಸಿ ಫರಾನ್‌(26) ಕೊಲೆಯಾದವ. ಆರೋಪಿ ಯೂಸುಫ್‌ (28) ಎಂಬಾ​ತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರೀತಿ ಬಲೆಯಲ್ಲಿ ಬಾಲಕ : ಮಧ್ಯರಾತ್ರಿ ಮಗಳ ಮೂಲಕ ಮನೆಗೆ ಕರೆಸಿ ಕೊಲೆಗೈದ ಮುಖಂಡ

ಫರಾನ್‌ ಹಾಗೂ ಯೂಸುಫ್‌ ಬಾಲ್ಯ ಸ್ನೇಹಿ​ತ​ರಾ​ಗಿದ್ದು, ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಗುರುವಾರ ರಾತ್ರಿ 10 ಗಂಟೆಗೆ ಇಬ್ಬರೂ ಮಾತನಾಡುವ ವೇಳೆ ಯೂಸುಫ್‌ ತಾಯಿಯ ಬಗ್ಗೆ ಫರಾನ್‌ ಕೆಟ್ಟದಾಗಿ ನಿಂದಿ​ಸಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ​ಅದರಿಂದ ಆಕ್ರೋಶಗೊಂಡ ಯೂಸುಫ್‌ ಅಂಗಡಿಯಲ್ಲಿದ್ದ ಚೂರಿಯಿಂದ ಫರಾನ್‌ ಕಿವಿಯ ಹಿಂಭಾಗಕ್ಕೆ ಇರಿ​ದಿ​ದ್ದಾನೆ. ಪರಿಣಾಮ ಕಿವಿಯ ಹಿಂಭಾಗಕ್ಕೆ ಗಾಯವಾಗಿ ತೀವ್ರ ರಕ್ತಸ್ರಾವದಿಂದ ಫರಾನ್‌ ಮೃತಪಟ್ಟಿದ್ದು, ಆರೋಪಿ ಯೂಸುಫ್‌ ಪರಾರಿಯಾಗಿದ್ದಾನೆ. ಆರೋಪಿಯ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಬಂಧಿಸಲಾ​ಗು​ವು​ದು ಎಂದು ಪೊಲೀ​ಸರು ಹೇಳಿದ್ದಾರೆ.
 

Follow Us:
Download App:
  • android
  • ios