Asianet Suvarna News Asianet Suvarna News

ನಿರ್ಭಯಾ ರೇಪಿಸ್ಟ್‌ಗಳಿಗೆ ಗಲ್ಲು, ಮಗಳನ್ನೇ ರೇಪ್‌ ಮಾಡಿದ ತಂದೆಗೆ ಜೀವಾವಧಿ ಶಿಕ್ಷೆ!

ಮಗಳ ಮೇಲೆ ರೇಪ್‌ ಮಾಡಿದ್ದ ತಂದೆಗೆ ನಾಲ್ಕು ಜೀವಾವಧಿ ಶಿಕ್ಷೆ| ಶಿಕ್ಷೆಯ ಜೊತೆಗೆ ದೋಷಿಗೆ 4500 ರು. ದಂಡ| 5 ಲಕ್ಷ ಪರಿಹಾರ ನೀಡುವಂತೆ ಸರ್ಕಾರಕ್ಕೆ ಸೂಚನೆ

Man gets four terms of life sentence for raping minor daughter
Author
Bangalore, First Published Jan 8, 2020, 12:12 PM IST
  • Facebook
  • Twitter
  • Whatsapp

ತಂಜಾವೂರು[ಜ.08]: ಸ್ವಂತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದ ತಂದೆಗೆ ಇಲ್ಲಿನ ಮಹಿಳಾ ನ್ಯಾಯಾಲಯವೊಂದು 4 ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಅಲ್ಲದೇ ಸಾಯುವವರೆಗೂ ಬಿಡುಗಡೆ ಮಾಡಬಾರದು ಎಂದು ಹೇಳಿರುವ ನ್ಯಾಯಾಲಯ ದೋಷಿಗೆ 4500ರು. ದಂಡ ಕೂಡ ವಿಧಿಸಿದೆ.

ಅಲ್ಲದೆ ಮಗಳಿಗೆ ಕೊಲೆ ಬೆದರಿಕೆ ಹಾಕಿದ್ದಕ್ಕೆ 6 ತಿಂಗಳು ಹೆಚ್ಚುವರಿ ಶಿಕ್ಷೆ ವಿಧಿಸಿದೆ. ಮಾತ್ರವಲ್ಲ ಸಂತ್ರಸ್ತ ಬಾಲಕಿಗೆ ಚಿಕಿತ್ಸೆ ವೆಚ್ಚದ ಜತೆಗೆ 5 ಲಕ್ಷ ಪರಿಹಾರವನ್ನೂ ನೀಡಬೇಕು ಎಂದು ಕೋರ್ಟ್‌ ಸರ್ಕಾರಕ್ಕೆ ಆದೇಶಿಸಿದೆ.

ಇಲ್ಲಿನ ಮಧುಕರಿಯ ಕುಮಾರ್‌ (31) ಎಂಬಾತ ತನ್ನ ಹೆಂಡತಿ ಸಾವಿನ ಬಳಿಕ ತನ್ನ ಜತೆಯೇ ಇದ್ದ 10 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದ. ಒಂದು ವೇಳೆ ವಿಷಯ ಬಹಿರಂಗ ಪಡಿಸಿದರೆ, ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದ. ಬಾಲಕಿಯಲ್ಲಿ ಉಂಟಾದ ದೈಹಿಕ ಬದಲಾವಣೆ ಕಂಡು, ಶಿಕ್ಷಕರು ಪ್ರಶ್ನಿಸಿದ ಮೇಲೆ ವಿಚಾರ ಬೆಳಕಿಗೆ ಬಂದಿತ್ತು.

ನಿರ್ಭಯಾ ಹತ್ಯಾಚಾರಿಗಳಿಗೆ ಡೆತ್ ವಾರೆಂಟ್: ರಾಕ್ಷಸರ ಸಂಹಾರಕ್ಕೆ ದಿನಾಂಕ ಫಿಕ್ಸ್!

Follow Us:
Download App:
  • android
  • ios