ಥಾನೆ(ಫೆ.19): ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ ಮಾಡಿ ಆಕೆಯನ್ನು ಗರ್ಭಿಣಿ ಮಾಡಿದ 41 ವರ್ಷದ ತಂದೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ಮಗಳನ್ನು ರೇಪ್ ಮಾಡಿದ ತಂದೆಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಐಪಿಸಿ ಅಡಿಯಲ್ಲಿ ಅತ್ಯಾಚಾರ ಆರೋಪ ಮತ್ತು ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸುವ ಪೋಸ್ಕೋ ಕಾಯ್ದೆಯಡಿಯಲ್ಲಿ ವಿಶೇಷ ನ್ಯಾ.ಕವಿತಾ ಶಿರ್ಭಾಟೆ ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿದ್ದಾರೆ.

ಹಿಂದು ಅಪ್ರಾಪ್ತೆಯನ್ನು ಅಪಹರಿಸಿದ ಪಾಕ್ ಪೊಲೀಸ್: ಮತಾಂತರಕ್ಕೆ ಕಿರುಕುಳ

14 ವರ್ಷದ ಮಗಳೊಂದಿಗೆ ಬೇರೆಯಾಗಿ ಬದುಕುತ್ತಿದ್ದ ವ್ಯಕ್ತಿ ಆಕೆ 10 ವರ್ಷವಿದ್ದಾಗಿನಿಂದಲೂ ಆಕೆಯ ಮೇಲೆ ಅತ್ಯಾಚಾರ ಮಾಡಿರುವುದು ತಿಳಿದುಬಂದಿದೆ.

2018 ಸೆಪ್ಟೆಂಬರ್ನಲ್ಲಿ 14 ವರ್ಷದ ಬಾಲಕಿ ಹೊಟ್ಟೆ ನೋವೆಂದು ತಪಾಸಣೆಗೆ ಬಂದಿದ್ದಾಗ ಗರ್ಭಿಣಿಯಾಗಿರುವುದು ಗೊತ್ತಾಗಿತ್ತು, ನಂತರ ಆಕೆಯೇ ತಂದೆಯ ವಿರುದ್ಧ ಕೇಸು ದಾಖಲಿಸಿದ್ದಾರೆ.