Asianet Suvarna News Asianet Suvarna News

ಮೈಸೂರಲ್ಲಿ ಲವ್ ಸೆಕ್ಸ್ ಧೋಖಾ; ಪ್ರೀತಿ ನೆಪದಲ್ಲಿ ವಿಚ್ಛೇದಿತ ಮಹಿಳೆ ಗರ್ಭಿಣಿ ಮಾಡಿ ಯುವಕ ಪರಾರಿ!

ಮದುವೆಯಾಗುತ್ತೇನೆಂದು ನಂಬಿಸಿ ವಿಚ್ಛೇದಿತ ಮಹಿಳೆಯನ್ನ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ ಘಟನೆ ಮೈಸೂರಿನ ಬೋಗಾದಿಯ ಬ್ಯಾಂಕರ್ಸ್ ಕಾಲೋನಿಯಲ್ಲಿ ನಡೆದಿದೆ. ಮೈಸೂರಿನ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ 34 ವರ್ಷದ ಸಂತ್ರಸ್ತೆ. ಕೊಳ್ಳೇಗಾಲದ ತೇರಂಬಳ್ಳಿ ಗ್ರಾಮದ ಹರೀಶ(25) ವಂಚಿಸಿ ನಾಪತ್ತೆಯಾಗಿರುವ ಆರೋಪಿ

Love sex dokha case; A divorced woman filed a rape case at saraswatipuram mysuru district rav
Author
First Published Jun 9, 2024, 10:37 AM IST

ಮೈಸೂರು (ಜೂ.9): ಮದುವೆಯಾಗುತ್ತೇನೆಂದು ನಂಬಿಸಿ ವಿಚ್ಛೇದಿತ ಮಹಿಳೆಯನ್ನ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ ಘಟನೆ ಮೈಸೂರಿನ ಬೋಗಾದಿಯ ಬ್ಯಾಂಕರ್ಸ್ ಕಾಲೋನಿಯಲ್ಲಿ ನಡೆದಿದೆ.

ಮೈಸೂರಿನ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ 34 ವರ್ಷದ ಸಂತ್ರಸ್ತೆ. ಕೊಳ್ಳೇಗಾಲದ ತೇರಂಬಳ್ಳಿ ಗ್ರಾಮದ ಹರೀಶ(25) ವಂಚಿಸಿ ನಾಪತ್ತೆಯಾಗಿರುವ ಆರೋಪಿ. ಮೈಸೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಆರೋಪಿ ಹರೀಶ್, ಸಂತ್ರಸ್ತೆಯೊಂದಿಗೆ ಪ್ರೀತಿಯ ನಾಟಕವಾಡಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ. ನೊಂದ ಮಹಿಳೆ ಗರ್ಭಿಣಿಯಾಗಿರುವುದು ತಿಳಿದು ನಾಪತ್ತೆಯಾಗಿರುವ ಆಸಾಮಿ. ಪ್ರಿಯಕರನ ವಂಚನೆಯಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ. ನ್ಯಾಯ ಕೊಡಿಸುವಂತೆ ಮೈಸೂರಿನ ಸರಸ್ವತಿ ಪುರಂ ಪೋಲಿಸ್ ಠಾಣೆಗೆ ನೀಡಿದ್ದಾರೆ.

ಪ್ರೀತಿ ನೆಪದಲ್ಲಿ ದೈಹಿಕ ಸಂಪರ್ಕ ಬೆಳೆಸಿ ಪ್ರಿಯಕರನಿಂದ ವಂಚನೆ

ಏನಿದು ಘಟನೆ?

ಸಂತ್ರಸ್ತೆ ಮಹಿಳೆ ಈಗಾಗಲೇ ಮಹಿಳೆಯಾಗಿದೆ. ಆದರೆ ದಾಂಪತ್ಯ ಕಲಹದಿಂದ 2018ರಲ್ಲಿ ಗಂಡನಿಂದ ವಿಚ್ಛೇದನ ಪಡೆದು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸ್ವತಂತ್ರವಾಗಿ ಜೀವನ ಸಾಗಿಸಿದ್ದಳು. ಆದರೆ ವಿಚ್ಛೇದಿತ ಮಹಿಳೆ ಬಾಳಲ್ಲಿ  ಆರೋಪಿ ಹರೀಶ್ ಎಂಟ್ರಿ ಆಗಿದ್ದಾನೆ. ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಪ್ರವೃತ್ತಿಯಲ್ಲಿ ಉತ್ತಮ ಹಾಡುಗಾರನಾಗಿದ್ದಾನೆ. ಇತ್ತ ಸಂತ್ರಸ್ತೆ ಮಹಿಳೆ ಕೂಡ ಹಾಡುಗಾರ್ತಿ ಆಗಿದ್ದರಿಂದ ಸಿಂಗಿಂಗ್ ಇವೆಂಟ್ಸ್ ಗಳಲ್ಲಿ ಹಾಡು ಹೇಳಲು ಹೋಗುತ್ತಿದ್ದಾಗ ಇಬ್ಬರು ಪರಸ್ಪರ ಪರಿಚಯವಾಗಿದ್ದಾರೆ. ಪರಿಚಯ ಪ್ರೀತಿಗೆ ತಿರುಗಿದೆ.

ಮಹಿಳೆ ವಿಚ್ಛೇದಿತಳಾಗಿದ್ದು ತಿಳಿದು ಆಂಟಿ ಪ್ರೀತ್ಸೆ ಅಂತಾ ದುಂಬಾಲು ಬಿದ್ದಿದ್ದ ಪ್ರಿಯಕರ ಮೊದಲಿಗೆ ನಿರಾಕರಿಸಿರುವ ಸಂತ್ರಸ್ತೆ ಬಳಿಕ ಯುವಕ ಮದುವೆಯಾಗುತ್ತೇನೆಂದು ನಂಬಿಸಿದ್ದರಿಂದ ಬಾಳಲ್ಲಿ ಸಂಗಾತಿಯೊಬ್ಬ ಬೇಕೇಬೇಕು ಅಲ್ಲವೇ ಹೀಗಾಗಿ ಅವನ ಪ್ರಪೋಸ್ ಒಪ್ಪಿಕೊಂಡು ಪರಸ್ಪರ ಪ್ರೀತಿಯಲ್ಲಿ ಬಿದ್ದು ಪ್ರಣಯ ಹಕ್ಕಿಗಳಂತೆ ಎಲ್ಲವೂ ಮಾಡಿಕೊಂಡಿದ್ದಾರೆ.

ಅಲ್ಲಿಂದ ಟೀಚರಮ್ಮ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ ಹರೀಶ್, ಪ್ರಣಯದಾಟ ಆಡಿದ್ದಾನೆ. ಆದರೆ ಯಾವಾಗ ಸಂತ್ರಸ್ತೆ ಗರ್ಭಿಣಿಯಾಗಿದ್ದಾಳೆಂಬುದು ತಿಳಿಯಿತೋ ಅಲ್ಲಿಂದ ಪ್ರಿಯಕರ ನಾಪತ್ತೆಯಾಗಿದ್ದಾನೆ. ಇತ್ತ ಮದುವೆಯಾಗುತ್ತಾನೆಂದು ನಂಬಿ ಸರ್ವಸ್ವ ಒಪ್ಪಿಸಿ ಬಸಿರು ಆದ ಸಂತ್ರಸ್ತೆ ಶಾಕ್‌ ಆಗಿದ್ದಾಳೆ. ಸುತ್ತಮುತ್ತಲೆಲ್ಲ ವಿಚಾರಿಸಿದರೂ ಪ್ರಿಯಕರನ ಮಾಹಿತಿ ಇಲ್ಲ, ಮೊಬೈಲ್ ಸಂಪರ್ಕಕ್ಕೂ ಸಿಗುತ್ತಿಲ್ಲ. ಇದರಿಂದ ವಂಚನೆಗೊಳಗಾಗಿರುವುದು ತಿಳಿಯುತ್ತಿದ್ದಂತೆ ಸಂತ್ರಸ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. 

ಸಂತ್ರಸ್ತೆ ಹೇಳೋದೇನು?

ನಾನು ವಿಚ್ಛೇದಿತಳಾಗಿದ್ದು ನನ್ನನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿದ್ದಾನೆ.  ಆಗಾಗ ಮನೆಗೆ ಬಂದು ನನಗೆ ಬಲವಂತವಾಗಿ ಮದ್ಯ ಕುಡಿಸಿ ಲೈಂಗಿಕವಾಗಿ ಬಳಸಿಕೊಂಡು ಅತ್ಯಾಚಾರ ನಡೆಸಿದ್ದಾನೆ. ಅದರ ಪರಿಣಾಮ ನಾನೀಗ ಗರ್ಭಿಣಿಯಾಗಿದ್ದೇನೆ. ಆದರೆ ಅವನು ಕಳೆದೆರಡು ತಿಂಗಳಿನಿಂದ ಸಂಪರ್ಕಕ್ಕೆ ಸಿಗದೇ ನಾಪತ್ರೆಯಾಗಿದ್ದಾನೆ. ಹರೀಶ್ ಕುಟುಂಬದವರು ಮದುವೆ ಮಾಡಿಕೊಡಲು ನಿರಾಕರಿಸಿದ್ದಾರೆ. ಹೀಗಾಗಿ ನ್ಯಾಯಕ್ಕಾಗಿ ನಾನು ಸರಸ್ವತಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ನನಗೆ ನ್ಯಾಯ ಸಿಗುವ ಭರವಸೆ ಇದೆ. ಆತ ನನ್ನನ್ನು ಮದುವೆಯಾದರೆ ಕೇಸ್ ವಾಪಸ್ ಪಡೆಯುತ್ತೇನೆ ಎಂದಿರುವ ಸಂತ್ರಸ್ತೆ.

Bengaluru: ಕಿಟಕಿಯ ಗ್ರಿಲ್‌ ಕತ್ತರಿಸಿ ಮನೆ ಕಳ್ಳತನ ಮಾಡುತ್ತಿದ್ದವರ ಬಂಧನ!

ಸದ್ಯ ಘಟನೆ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆಗೆ ಮುಂದಾಗಿದ್ದಾರೆ. ಮೊದಲ ಗಂಡನಿಂದ ಬೇಸತ್ತು ವಿಚ್ಛೇದನ ಪಡೆದು ಸ್ವಾತಂತ್ರವಾಗಿ ಬದುಕಿದ್ದ ಮಹಿಳೆ ಬಾಳಲ್ಲಿ ಮತ್ತೊಬ್ಬನು ಎಂಟ್ರಿಯಾಗಿ ಬಾಳಲ್ಲಿ ಬಿರುಗಾಳಿ ಎಬ್ಬಿಸಿ ಹೋಗಿದ್ದಾನೆ.

Latest Videos
Follow Us:
Download App:
  • android
  • ios