ಬೆಂಗಳೂರು(ಜೂ.19): ನನಗೆ ಮೈ ಮೇಲೆ ದೇವರು ಬರುತ್ತೆ ನಾನು ಹೇಳೋದೆಲ್ಲ ಸತ್ಯ, ನನ್ನಿಂದ ಯಾರಿಗೂ ಮೋಸ ಆಗೋದಿಲ್ಲ ಎಂದು ಹೇಳುವ ಖತರ್ನಾಕ್ ಮಹಿಳೆಯೊಬ್ಬಳು ಅಮಾಯಕರಿಂದ ಕೋಟಿಗಟ್ಲೆ ಹಣ ಪೀಕಿರುವ ಘಟನೆ ನಗರದಲ್ಲಿ ನಡೆದಿದೆ. 

45 ವರ್ಷದ ಚಂದ್ರಕಲಾ ಎಂಬಾಕೆಯೇ ಸಾಕಷ್ಟು ಮಹಿಳೆಯರಿಗೆ ವಂಚಿಸಿದ ಮಹಿಳೆಯಾಗಿದ್ದಾಳೆ. ಈಕೆ ಮೈ ಮೇಲೆ ದೇವರು ಬರುತ್ತೆ ಅಂತ ಅದನ್ನೇ ಬಂಡವಾಳ ಮಾಡ್ಕೊಂಡು ಅಮಾಯಕ ಮಹಿಳೆಯರಿಗೆ ಉಂಡೆನಾಮ ಹಾಕಿದ್ದಾಳೆ.
ಆರೋಪಿ ಚಂದ್ರಕಲಾ ದುಡ್ಡಿರುವ ಮಹಿಳೆಯರ ಫ್ರೆಂಡ್‌ಶಿಪ್‌ ಮಾಡಿಕೊಂಡು ಒಳ್ಳೆಯವಳ ತರ ನಾಟಕ ಮಾಡಿ ನಂಬಿಕೆಯನ್ನ ಬೆಳೆಸಿಕೊಳ್ಳುತ್ತಿದ್ದಳು ಎಂದು ತಿಳಿದು ಬಂದಿದೆ. ಬಳಿಕ ನನಗೆ ಮೈ ಮೇಲೆ ದೇವರು ಬರುತ್ತೆ ನಾನು ಹೇಳೋದೆಲ್ಲ ಸತ್ಯ, ನನ್ನಿಂದ ಯಾರಿಗೂ ಮೋಸ ಆಗೋದಿಲ್ಲ ಎಂದು ಹೇಳುತ್ತಿದ್ದಳು. ಮನೆಗೆ ದೇವರು ಕರೆಸಿದ್ದೀವಿ ಬನ್ನಿ ಅಂತ ಮಹಿಳಯರಿಗೆ ಆಮಂತ್ರಣ ಕೊಡುತ್ತಿದ್ದಳು. ಅವರ ಮುಂದೆ ಮೈ ಮೇಲೆ ದೇವರು ಬಂದಿರುವ ರೀತಿ ನಟನೆ ಮಾಡಿ ಅವರನ್ನ ನಂಬಿಸುತ್ತಿದ್ದಳು. ನನ್ನ ಮೈ ಮೇಲೆ ದೇವರು ಬರುತ್ತೆ ನಾನು ಮೋಸ ಮಾಡೋದಿಕ್ಕೆ ಆಗುತ್ತಾ?ನಿಮಗೆ ಸೈಟ್ ಕೊಟ್ಟೇ ಕೊಡ್ತೀನಿ ಅಂತಾ ಮಹಳೆಯರಿಗೆ ಉಂಡೆನಾಮ ಹಾಕಿದ್ದಾಳೆ.

ಬಣ್ಣದ ಮಾತಿಗೆ ಮರುಳಾದ ಯುವತಿ..! ಪ್ರೀತಿಯ ಹೆಸರಲ್ಲಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ

ಬಳಿಕ ನಿಮಗೆ ಸೈಟ್ ಕೊಡಿಸುತ್ತೇನೆ ಎಂದು ಮಹಿಳೆಯರನ್ನ ನಂಬಿಸಿ ಒಬ್ಬೊಬ್ಬರಿಂದ 20 ರಿಂದ 30 ಲಕ್ಷ ರೂ. ಪಡೆದು ವಂಚನೆ ಮಾಡುತ್ತಿದ್ದಳು. ಒಂದೇ ಸೈಟ್ ತೋರಿಸಿ 30ಕ್ಕೂ ಹೆಚ್ಚು ಮಹಿಳೆಯರಿಂದ ಕೋಟಿಗಟ್ಟಲೆ ಹಣ ಪೀಕಿದ್ದಾಳೆ ಎಂದು ಎಂದು ವಂಚನೆಗೊಳಗಾದ ಮಹಿಳರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದೂರು ಕೊಟ್ಟರೂ ಉಪಯೋಗಕ್ಕೆ ಬಾರದ ಹಾಗೆ ಆಗಿದೆ. ವಂಚಕಿಯನ್ನ ಹಿಡಿದುಕೊಟ್ಟರೂ ನ್ಯಾಯಾಲಯಕ್ಕೆ ಹೋಗಿ ಅಂತ ಪೊಲೀಸರು ಅಸಡ್ಡೆ ಉತ್ತರ ನೀಡುತ್ತಿದ್ದಾರೆ ಎಂದು ವಂಚನೆಗೊಳಗಾದ ಮಹಿಳೆಯರು ಆರೋಪಿಸಿದ್ದಾರೆ. 

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"