ಕೋಲಾರದ ಸುಶೀಲಮ್ಮನನ್ನು ಕೊಂದು ಶವದೊಂದಿಗೆ 2 ಬಾರಿ ಸಂಭೋಗ ಮಾಡಿದ ಸುಹೇಲ್!

ಕೋಲಾರ ಜಿಲ್ಲೆಯ ಮುಳುಬಾಗಿಲಿನಲ್ಲಿ ಆಟೋ ಚಾಲಕನೊಬ್ಬ ಮಹಿಳೆಯನ್ನು ಕೊಲೆಗೈದು, ಶವದೊಂದಿಗೆ ಎರಡು ಬಾರಿ ಸಂಭೋಗ ನಡೆಸಿದ್ದಾನೆ. ಆರೋಪಿ ಆಟೋ ಚಾಲಕ ಸೈಯದ್ ಸುಹೇಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Kolar Syed Suhail who killed Sushilamma and had sex with dead body sat

ಕೋಲಾರ (ಅ.10): ಕೆಲವೊಂದು ವಿಕೃತ ಮನಸ್ಥಿತಿಗಳು ಹೇಗಿರುತ್ತವೆ ಎಂಬುದಕ್ಕೆ ಇಲ್ಲೊಬ್ಬ ವಿಕೃತ ಕಾಮಿ ಸಾಕ್ಷಿಯಾಗಿದ್ದಾನೆ ನೋಡಿ. ಮಹಿಳೆಯನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಕೊಲೆ ಮಾಡಿ, ನಂತರ ಶವದೊಂದಿಗೆ ಎರಡು ಬಾರಿ ಅತ್ಯಾಚಾರ ಮಾಡಿದ್ದಾರೆ.

ಈ ಘಟನೆ ಕೋಲಾರ ಜಿಲ್ಲೆಯ ಮುಳುಬಾಗಿಲಿನ ಹೈದರಿ ನಗರದಲ್ಲಿ ನಡೆದಿದೆ. ಕೊಲೆಯಾದ ಮಹಿಳೆ ಸುಶೀಲಮ್ಮ (50) ಆಗಿದ್ದಾಳೆ. ಇನ್ನು ಕೊಲೆ ಮಾಡಿದ ವ್ಯಕ್ತಿ ಆಟೋ ಚಾಲಕ ಸೈಯದ್ ಸುಹೇಲ್ ಆಗಿದ್ದಾನೆ. ಈತ ಬೇರೆಲ್ಲೂ ಇಲ್ಲ, ನಮ್ಮ ನಿಮ್ಮ ನಡುವೆ ಆಟೋ ಓಡಿಸಿಕೊಂಡು ಪ್ರಯಾಣಿಕರನ್ನು ಸಾಗಿಸುವ ವ್ಯಕ್ತಿಯಾಗಿದ್ದಾನೆ. ಇದೀಗ ತನ್ನ ಕಾಮತೃಷೆ ತೀರಿಸಿಕೊಳ್ಳಲು ಮಹಿಳೆಯನ್ನು ಕೊಲೆ ಮಾಡಿ ಅತ್ಯಾಚಾರಗೈದು ಹೆಣವನ್ನು ಬೀಸಾಡಿ ಬಂದಿದ್ದಾನೆ. 

ಇದನ್ನೂ ಓದಿ: ನಿಮ್ಮ ಅಂಗಡಿಗಳಿಗೂ ಬರಬಹುದು ನಕಲಿ ಪತ್ರಕರ್ತರು: ₹ 10 ಸಾವಿರದಿಂದ 10 ಲಕ್ಷದವರೆಗೆ ಹಣ ವಸೂಲಿ!

ಮುಳುಬಾಗಿಲಿನ ಪಳ್ಳಿಗರಪಾಳ್ಯದ ಸುಶೀಲಮ್ಮ ಕಾಣೆಯಾದ ಬಗ್ಗೆ ಮಾಹಿತಿ ನೀಡಿದಾಗ ಎಲ್ಲೆಡೆ ಶೋಧ ಕಾರ್ಯ ಮಾಡಲಾಗಿದೆ. ಹೈದರಿ ನಗರದ ನಿರ್ಜನ ಪ್ರದೇಶದಲ್ಲಿ ಸುಶೀಲಮ್ಮದ ಮೃತದೇಹ ಪತ್ತೆಯಾಗಿದೆ. ಆಗ ಪೊಲೀಸರು ತನಿಖೆ ಆರಂಭಿಸಿ ಆರೋಪಿಯ ಜಾಡು ಹಿಡಿದು ಹೊರಟಾಗ ಆರೋಪಿ ಸುಹೇಲ್‌ನ ಆಟೋದಲ್ಲಿ ಹೋಗುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡುಬಂದಿದೆ. ಕೂಡಲೇ ಅವನ್ನು ಶಕ್ಕೆ ಪಡೆದು ವಿಚಾರಣೆ ಮಾಡಿದ ಪೊಲೀಸರಿಗೆ ಸತ್ಯಾಂಶವನ್ನು ಹೇಳಿದ್ದಾನೆ. ಆಗ ಸೆ.24ರಂದು ಮಹಿಳೆಯನ್ನು ಕೊಲೆಗೈದು, ಮೃತದೇಹದೊಂದಿಗೆ ಸಂಭೋಗ ಮಾಡಿದ್ದಾಗಿ ಹೇಳಿದ್ದಾನೆ.

ಈ ಆಟೋ ಡ್ರೈವರ್ ಸುಹೇಲ್‌ನನ್ನು ಮಾನಸಿಕ ಅಸ್ವಸ್ಥ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈತನ್ನು ಸದ್ಯಕ್ಕೆ ಪೊಲೀಸರು ಬಂಧಿಸಿದ್ದು, ಮತ್ತಷ್ಟು ಮಾಹಿತಿಗೆ ವಿಚಾರಣೆ ಮಾಡುತ್ತಿದ್ದಾರೆ. ಈ ಪ್ರಕರಣವು ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆಯಿಂದಾಗಿ ಮಹಿಳೆಯರು ಹಾಗೂ ಒಬ್ಬಂಟಿ ಹೆಣ್ಣು ಮಕ್ಕಳು ಆಟೋದಲ್ಲಿ ಹೋಗಲು ಭಯಪಡುವ ಸ್ಥಿತಿ ಮುಳುಬಾಗಿಲು ಪಟ್ಟಣದಲ್ಲಿ ನಿರ್ಮಾಣವಾಗಿದೆ.

Latest Videos
Follow Us:
Download App:
  • android
  • ios