Asianet Suvarna News Asianet Suvarna News

ಆನ್‌ಲೈನ್ ಗೆಳೆಯನ ಭೇಟಿಗೆ 300 ಕಿಮೀ ಪ್ರಯಾಣ: ನಾಲ್ವರಿಂದ ಗ್ಯಾಂಗ್ ರೇಪ್

ಆನ್‌ಲೈನ್‌ನಲ್ಲಿ ಗೆಳೆತನ ಶುರುವಾಗಿ ಆತ್ಮೀಯೆ ಬೆಳೆದಿತ್ತು. ಸ್ನೇಹಿತನ ನಂಬಿ 300 ಕಿಮೀ ಪ್ರಯಾಣಿಸಿ ಹೋಗಿದ್ದಳಾಕೆ. ಮೊದಲ ಬಾರಿ ಆನ್‌ಲೈನ್ ಗೆಳೆಯನ ಎದುರಾಗಿ ನೋಡುವ ತವಕವಿತ್ತು. ಆದರೆ ಅಲ್ಲಿ ನಡೆದಿದ್ದು ಮಾತ್ರ ದುರಂತ

Kerala woman travels 300km to meet her online friend She is gang raped filmed dpl
Author
Bangalore, First Published Sep 11, 2021, 11:34 AM IST
  • Facebook
  • Twitter
  • Whatsapp

ತಿರುವನಂತಪುರಂ(ಸೆ.11): ಆನ್‌ಲೈನ್‌ನಲ್ಲಿ ಗೆಳೆತನ ಶುರುವಾಗಿ ಆತ್ಮೀಯೆ ಬೆಳೆದಿತ್ತು. ಸ್ನೇಹಿತನ ನಂಬಿ 300 ಕಿಮೀ ಪ್ರಯಾಣಿಸಿ ಹೋಗಿದ್ದಳಾಕೆ. ಮೊದಲ ಬಾರಿ ಆನ್‌ಲೈನ್ ಗೆಳೆಯನ ಎದುರಾಗಿ ನೋಡುವ ತವಕವಿತ್ತು. ಆದರೆ ಅಲ್ಲಿ ನಡೆದಿದ್ದು ಮಾತ್ರ ದುರಂತ. ಉತ್ಸಾಹದಲ್ಲಿ ಗೆಳೆಯನ ನೋಡಲು ಹೋಗಿದ್ದ 28ರ ಯುವತಿಯ ನಂಬಿಕೆಗೆ ದ್ರೋಹ ಮಾಡಿದ್ದಲ್ಲದೆ ತನ್ನ ಮೂವರ ಸ್ನೇಹಿತರೊಂದಿಗೆ ಆಕೆಯ ಮೇಲೆರಗಿದ ಆತ ಮೃಗಕ್ಕಿಂತ ಕಡೆಯಾಗಿ ವರ್ತಿಸಿದ.

28 ವರ್ಷದ ಯುವತಿಯೊಬ್ಬಳು ಆನ್‌ಲೈನ್‌ನಲ್ಲಿ ಸ್ನೇಹ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಭೇಟಿಯಾಗಲು 300 ಕಿಮೀ ಪ್ರಯಾಣಿಸಿದಳು. ಆ ವ್ಯಕ್ತಿ ಮತ್ತು ಆತನ ಮೂವರು ಸ್ನೇಹಿತರೊಂದಿಗೆ ಆಕೆಯ ಮೇಲೆ ಉತ್ತರ ಕೇರಳದ ಕೋಯಿಕ್ಕೋಡ್‌ನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈನಲ್ಲೊಂದು ನಿರ್ಭಯಾ ಪ್ರಕರಣ; ಅತ್ಯಾಚಾರ ಎಸಗಿ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಿದ ಪಾಪಿ!

ನಾಲ್ವರು ಬಲವಂತವಾಗಿ ಆಕೆಗೆ ಮಾದಕ ದ್ರವ್ಯ ನೀಡಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರ ಮಾಡುವುದನ್ನು ಚಿತ್ರೀಕರಿಸಿದ್ದಾರೆ. ನಂತರ ಆಕೆಯನ್ನು ಖಾಸಗಿ ಆಸ್ಪತ್ರೆಯಿಂದ ಸ್ವಲ್ಪ ದೂರ ಎಸೆದು ಹೋಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರಿಗೆ ದೂರು ನೀಡದಂತೆ ಅವರು ಅವಳಿಗೆ ಎಚ್ಚರಿಕೆ ನೀಡಿದ್ದರು. ಹಲ್ಲೆಯ ವೀಡಿಯೊಗಳು ಮತ್ತು ಫೋಟೋಗಳನ್ನು ಅಂತರ್ಜಾಲದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದರು.

ಆಕೆ ಸಾಯಬಹುದೆಂಬ ಭಯದಿಂದ ಆರೋಪಿಗಳು ಆಸ್ಪತ್ರೆಯ ಬಳಿ ಬಿಟ್ಟು ಹೋದರು. ಆಕೆಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಅವರು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿರುವ ಯುವತಿ ತಾನು ಸಂಪರ್ಕದಲ್ಲಿರುವ ವ್ಯಕ್ತಿಯ ಫೋನ್ ಸಂಖ್ಯೆ ಮತ್ತು ಇತರ ಕೆಲವು ವಿವರಗಳನ್ನು ಹಂಚಿಕೊಂಡಿದ್ದು, ಆರೋಪಿಗಳನ್ನು ಪತ್ತೆ ಮಾಡಲು ಪೊಲೀಸರಿಗೆ ಸಹಾಯ ಮಾಡಿದ್ದಾರೆ.

Follow Us:
Download App:
  • android
  • ios