Asianet Suvarna News Asianet Suvarna News

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ; ಸುಪ್ರೀಂ ಮಹತ್ವದ ಆದೇಶ

* ಹಿರಿಯ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣ
* ಕವಿತಾ ಲಂಕೇಶ್ ಸಲ್ಲಿಸಿದ್ದ ಅರ್ಜಿ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
* ಆರೋಪಿ ಮೋಹನ್ ನಾಯಕ್ ವಿರುದ್ಧ KCOCA ಕಾಯ್ದೆ ಮರು ಜಾರಿ 
* 2017ರ ಸೆಪ್ಟೆಂಬರ್ 5ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದ್ದ ಹತ್ಯೆ

Journalist Gauri Lankesh murder case Organised crime charges valid says Supreme Court mah
Author
Bengaluru, First Published Oct 22, 2021, 4:41 PM IST

ನವದೆಹಲಿ(ಅ. 22)  ಹಿರಿಯ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ (Gauri Lankesh) ಹತ್ಯೆ (Murder) ಪ್ರಕರಣದ ಸಂಬಂಧ ಸುಪ್ರೀಂ ಕೋರ್ಟ್(Supreme Court) ಮಹತ್ವದ ಮಾತೊಂದನ್ನು  ಹೇಳಿದೆ. 

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನ ವಿರುದ್ಧದ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೋಕಾ) ನಿಯಮಗಳ ಅಡಿ ದಾಖಲಿಸಲಾದ ಆರೋಪ ಪಟ್ಟಿ ವಜಾಗೊಳಿಸುವ ಕರ್ನಾಟಕ ಹೈಕೋರ್ಟ್(Karnataka High Court) ಆದೇಶವನ್ನು ಸುಪ್ರೀಂ ತಳ್ಳಿ ಹಾಖಿದೆ.  ಆರೋಪಿ ವಿರುದ್ಧ  KCOCA ಕಾಯ್ದೆ ಮತ್ತೆ ಜಾರಿಯಾಗಿದೆ.

ಎಎಂ ಖನ್ವಾಲಿಕರ್ ಒಳಗೊಂಡ ತ್ರಿಸದಸ್ಯ ಪೀಠ ಆದೇಶ ನೀಡಿದೆ.  ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ (Kavitha Lankesh) ಸಲ್ಲಿಸಿದ್ದ ಅರ್ಜಿಯನ್ನು ಎತ್ತಿ ಹಿಡಿದಿದೆ. ಇದರ ಪರಿಣಾಮ ಆರೋಪಿ ಮೋಹನ್ ನಾಯಕ್ ವಿರುದ್ಧ ಮತ್ತೆ ಕೋಕಾ ಜಾರಿಯಾಗಿದೆ.

ಮೋಹನ್ ನಾಯಕ್ ವಿರುದ್ಧ ಕೋಕಾ ತನಿಖೆಯನ್ನು ಜಾರಿಗೊಳಿಸಲು ಕರ್ನಾಟಕ ಹೈಕೋರ್ಟ್ ಈ ವರ್ಷದ ಆರಂಭದಲ್ಲಿ ತಡೆ ನೀಡಿತ್ತು. ಹತ್ಯೆಯ ಸಂಚಿನಲ್ಲಿ ಮೋಹನ್ ನಾಯಕ್ ಭಾಗಿಯಾದಂತೆ ಕಾಣುತ್ತಿಲ್ಲ ಎಂದು ಹೇಳಿತ್ತು.

ಕುಟುಂಬಕ್ಕೆ ಗೊತ್ತಿಲ್ಲದೆ ಗೌರಿ ಹೆಸರಿನಲ್ಲಿ ಕೋಟಿ ಕೋಟಿ ಸಂಗ್ರಹ

ಪ್ರಮುಖ ಆರೋಪಿ ಅಮೋಲ್ ಕಾಳೆ (Amol Kale) ಸೇರಿದಂತೆ ಕೆಲವರಿಗೆ ಮೋಹನ್ ನಾಯಕ್ ಮನೆ ಬಾಡಿಗೆಗೆ ನೀಡಿದ್ದರು ಈ ಪ್ರಕರಣದ ಪ್ರಮುಖ ಅಂಶ. ಇದೇ ಆಧಾರದಲ್ಲಿ ನಾಯಕ್ ಮೇಲೆ ತನಿಖೆ ನಡೆದಿತ್ತು. ಗೌರಿ ಲಂಕೇಶ್ ಹತ್ಯೆ ನಂತರವೂ ಆರೋಪಿಗಳು ನಾಯಕ್ ಬಾಡಿಗೆ ನೀಡಿದ್ದ ಮನೆಯಲ್ಲೇ ಅಡಿಕೊಂಡಿದ್ದರು.

ಇದೊಂದು  'ಸಂಘಟಿತ ಸಿಂಡಿಕೇಟ್'  ಮೂಲಕ ನಡೆಸಲಾದ ಪ್ರಕರಣವೇ ಎಂಬುದನ್ನು ಪೊಲೀಸರು (Bengaluru Police) ವಿವರವಾಗಿ ತನಿಖೆ ನಡೆಸಬೇಕಿದೆ ಎಂದು ನ್ಯಾಯಾಲಯ ಹೇಳಿದೆ. ಮೋಹನ್ ನಾಯಕ್ ವಿರುದ್ಧ ಕೋಕಾ ಕಾಯ್ದೆ ಹೇರಲು ಬೆಂಗಳೂರು ಪೊಲೀಸ್ ಆಯುಕ್ತರು 2018ರಲ್ಲಿ ನೀಡಿದ್ದ ಅನುಮತಿ ಹಾಗೂ ಅದರ ಬಳಿಕ ಕೋಕಾ ಕಾಯ್ದೆಯಡಿ ಸಲ್ಲಿಸಲಾಗಿದ್ದ ಪೂರಕ ಆರೋಪಪಟ್ಟಿಯನ್ನು ಕರ್ನಾಟಕ ಹೈಕೋರ್ಟ್ ಏಪ್ರಿಲ್ 22ರಂದು ರದ್ದುಗೊಳಿಸಿತ್ತು. 

ಗೌರಿ ಲಂಕೇಶ್ ಹತ್ಯೆ;  ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಅವರನ್ನು 2017ರ ಸೆಪ್ಟೆಂಬರ್ 5ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿನ ಅವರ ಮನೆಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಸಂಜೆ ವೇಳೆ ಕೆಲಸ ಮುಗಿಸಿ ಮನೆಗೆ ಬಂದಿದ್ದ ಗೌರಿ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿದ್ದರು. ಸಿಸಿಟಿವಿ (CCTV) ದೃಶ್ಯಾವಳಿ ಮತ್ತು ಪೂರಕ ಮಾಹಿತಿ ಆಧರಿಸಿ ತನಿಖೆ ನಡೆಸಲಾಗಿತ್ತು. ಮಹಾರಾಷ್ಟ್ರ ಮತ್ತು  ಬೆಳಗಾವಿಯಲ್ಲಿಯೂ  ಪೊಲೀಸರು ಶೋಧ ನಡೆಸಿದ್ದರು. 

 

 

Follow Us:
Download App:
  • android
  • ios