ಸಿಂಗಪುರ್(ಜೂ. 08) ಕರೆಂಟ್ ಕೈ ಕೊಟ್ಟ ಸಮಯದಲ್ಲಿ ಮನೆಯಿಂದ ಎಸ್ಕೇಪ್ ಆಗಿದ್ದ ಬ್ರಾ ಕಳ್ಳನಿಗೆ ಆರು ತಿಂಗಳಿಗೆ ಒಂದು ವಾರ ಕಡಿಮೆ ಶಿಕ್ಷೆ ವಿಧಿಸಲಾಗಿದೆ.

ಈ ಒಂದು ಕೆಟ್ಟ ಚಟದಿಂದ ಜೈಲುವಾಸ ಫಿಕ್ಸ್ ಆಗಿದೆ. ಕರೆಂಟ್ ಹೋಯಿತು ಎಂಬ ಕಾರಣಕ್ಕೆ ಮನೆ ಬಿಟ್ಟು ಹೊರಟು ಹೋಗಲು ಕಾರಣವೇ ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದ್ದಾರೆ.

39  ವರ್ಷದ ಲೀ ಚಿ ಕಿನ್ ಮೇಲೆ ಹತ್ತು ವಿವಿಧ ಪ್ರಕರಣಗಳಿವೆ. ಇನ್ನು ಹದಿನಾಲ್ಕು ಪ್ರಕರಣಗಳ ವಿಚಾರಣೆ ನಡೆಯುವುದು ಬಾಕಿ ಇದೆ.

ಎಲ್ಲ ಕಾಣುವಂತೆ ಬಟ್ಟೆ ಧರಿಸಿ ಕೋವಿಡ್ ವಾರ್ಡ್ ಗೆ ಬಂದ ನರ್ಸ್

ಕಳ್ಳನ ಕಳ್ಳತನದ ಲೆಕ್ಕ ಏನು ಕಡಿಮೆ ಇಲ್ಲ. 2018ರ ಏಪ್ರಿಲ್ ನಿಂದ 2020  ಏಪ್ರಿಲ್ ವರೆಗೆ  30 ಸಾರಿ ವಿವಿಧ ಮನೆಗಳ ಮೇಲೆ ದಾಳಿ ಮಾಡಿದ ಕಳ್ಳ 34 ಬ್ರಾ 42 ಪ್ಯಾಂಟಿಗಳ ಕಳ್ಳತನ ಮಾಡಿದ್ದಾನೆ.

ಕಳೆದ ವರ್ಷವೂ ಪುಣ್ಯಾತ್ಮ ಅರೆಸ್ಟ್ ಆಗಿದ್ದ, ಆ ವೇಳೆ ಆತನ ಮನೆಯಲ್ಲಿ  106  ಬ್ರಾ ಮತ್ತು  41 ಪ್ಯಾಂಟಿಗಳು ಸಿಕ್ಕಿದ್ದವು. ಮನೆಯೊಂದಕ್ಕೆ ನುಗ್ಗಿ ತಲಾ ಹನ್ನೆರಡು ಬ್ರಾ ಮತ್ತು ಪ್ಯಾಂಟಿ ಹೊತ್ತುಕೊಂಡು ಹಿಂದಿನ ಬಾಗಿಲಲ್ಲಿ ಹಾರಿಬಂದಿದ್ದು ಇಲ್ಲಿಯವರೆಗಿನ ದಾಖಲೆ.  ಬೆಂಗಳೂರಿನ ಮಹಾರಾಣಿ ಕಾಲೇಜಿನ ಹಾಸ್ಟೇಲ್ ಗೆ ನುಗ್ಗಿದ್ದ ಸೈಕೋ  ಒಣಗಿಸಿದ್ದ ಹೆಣ್ಣು ಮಕ್ಕಳ ಒಳುಡುಪು ಕದ್ದಿದ್ದು ವರದಿಯಾಗಿತ್ತು.