ಮದ್ಯದ ನಶೆಯಲ್ಲಿ ನಾಯಿಯ ಮೇಲೆ ಅತ್ಯಾಚಾರ ಮಾಡಿ 3ನೇ ಮಹಡಿಯಿಂದ ಎಸೆದ ರಾಕ್ಷಸ!
ಪ್ರಕರಣದ ಗಂಭೀರತೆಯನ್ನು ಅರಿತ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಎಕ್ಸ್ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದು, ಇಂಥ ವ್ಯಕ್ತಿಗಳು ಎಲ್ಲಾ ಮಿತಿಗಳನ್ನು ದಾಟಿದ್ದಾರೆ. ಇವರಿಗೆ ಮನುಷ್ಯರೆಂದು ಕರೆಸಿಕೊಳ್ಳುವ ಯಾವ ಹಕ್ಕೂ ಇಲ್ಲ ಎಂದು ಹೇಳಿದ್ದಾರೆ.

ನವದೆಹಲಿ (ಅ.28): ಗ್ರೇಟರ್ ನೋಯ್ಡಾದಿಂದ ವರದಿಯಾದ ಆಘಾತಕಾರಿ ಘಟನೆಯಲ್ಲಿ, ಮಥುರಾ ಮೂಲದ ಸೋನ್‌ವೀರ್ ಎಂಬ 28 ವರ್ಷದ ವ್ಯಕ್ತಿ, ಪ್ರದೇಶದ ಆಲ್ಫಾ 2 ಪ್ರದೇಶದಲ್ಲಿ ಹೆಣ್ಣು ನಾಯಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅಕ್ಕಪಕ್ಕದ ಮನೆಯವರು ಇದನ್ನು ರೆಡ್‌ಹ್ಯಾಂಡ್ ಆಗಿ ಕಂಡ ಬಳಿಕ ಈತ ಸ್ವಲ್ಪವೂ ಕನಿಕರವಿಲ್ಲದೆ, ಮೂರನೇ ಮಹಡಿಯ ಬಾಲ್ಕನಿಯಿಂದ ನಾಯಿಯನ್ನು ಕೆಳಕ್ಕೆ ಎಸೆದಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸರಿಗೆ ಈ ಕುರಿತಾಗಿ ಮಾಹಿತಿ ನೀಡಿದ ಬಳಿಕ ಈತನನ್ನು ಬಂಧಿಸಿ ಎಫ್‌ಐಆರ್ ದಾಖಲು ಮಾಡಲಾಗಿದೆ. ನಾಯಿಯ ಮೇಲೆ ಅತ್ಯಾಚಾರ ಮಾಡುತ್ತಿರುವುದನ್ನು ನೋಡಿದ ಬಳಿಕ ನೆರೆಮನೆಯವರು ಆಘಾತದಿಂದ ಕಿರುಚಿಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಸೋನ್‌ವೀರ್ ನಾಯಿಯನ್ನು ಮೂರನೇ ಮಹಡಿಯಿಂದ ಎಸೆದಿದ್ದಾರೆ. ನಾಯಿಗೆ ಸಣ್ಣ ಪ್ರಮಾಣದ ಗಾಯವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿದ ನಂತರ ಇಂದು ಸಂಜೆ ಆರೋಪಿಯನ್ನು ಬಂಧಿಸಲಾಗಿದೆ, ಎಂದು ಸ್ಥಳೀಯ ಬೀಟಾ 2 ಪೊಲೀಸ್ ಠಾಣೆಯ ಪ್ರಭಾರಿ ವಿನೋದ್ ಕುಮಾರ್ ಮಿಶ್ರಾ ಹೇಳಿದ್ದಾರೆ.
ವರದಿಯ ಪ್ರಕಾರ, ನಾಯಿಯ ಮೇಲೆ ಅತ್ಯಾಚಾರ ಮಾಡಿದ ವ್ಯಕ್ತಿ ಖಾಸಗಿ ನಿರ್ಮಾಣ ಕಂಪನಿಯಲ್ಲಿ ಕೆಲಸ ಮಾಡಡುತ್ತಿದ್ದ ಅಪರಾಧ ಮಾಡುವಾಗ ಮದ್ಯದ ನಶೆಯಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದು, ಆತನ ಕುರಿತಾಗಿ ಇನ್ನಷ್ಟು ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 377 (ಯಾವುದೇ ಪುರುಷ, ಮಹಿಳೆ ಅಥವಾ ಪ್ರಾಣಿಯೊಂದಿಗೆ ಪ್ರಕೃತಿಯ ಕ್ರಮದ ವಿರುದ್ಧ ದೈಹಿಕ ಸಂಭೋಗ) ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ, ಆದರೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ರ ಅಡಿಯಲ್ಲಿ ಆರೋಪಗಳನ್ನು ಸಹ ಅನ್ವಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಥೂ ಇವೆನೆಂಥಾ ನೀಚ ವಿಕೃತಕಾಮಿ: ವನ್ಯಜೀವಿ ತಜ್ಞನಿಂದಲೇ 40ಕ್ಕೂ ಹೆಚ್ಚು ನಾಯಿಗಳ ಅತ್ಯಾಚಾರವೆಸಗಿ ಹತ್ಯೆ
ಡಿಸಿಡಬ್ಲ್ಯೂ ಅಧ್ಯಕ್ಷೆ ಸ್ವಾತಿ ಮಲಿವಾಲ್ ಟೀಕೆ: ಈ ವಿಷಯ ಗಮನಕ್ಕೆ ಬಂದ ಬಳಿಕ ಎಕ್ಸ್ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್, ಇಂಥ ಜನರು ನೀಚತನದ ಎಲ್ಲಾ ಮಿತಿಗಳನ್ನು ಮೀರಿದ್ದಾರೆ. ಈ ಅಸಹ್ಯಕರ ವರ್ತನೆಯನ್ನು ಕಟು ಶಬ್ದಗಳಲ್ಲಿ ಟೀಕಿಸಿದ ಸ್ವಾತಿ, ಇವರು ತಮ್ಮನ್ನು ತಾವು ಮನುಷ್ಯರು ಎಂದು ಹೇಳಿಕೊಳ್ಳುವ ಯಾವ ಹಕ್ಕೂಗಳೂ ಇಲ್ಲ ಎಂದಿದ್ದಾರೆ.
Video: ಬೀದಿ ನಾಯಿಯ ಮೇಲೆ ಅತ್ಯಾಚಾರ, ದೆಹಲಿ ವ್ಯಕ್ತಿಯ ಮೇಲೆ ಎಫ್ಐಆರ್!