ಇಸ್ಲಾಮಾಬಾದ್( ಸೆ. 15)  ಅತ್ಯಾಚಾರಿಗಳನ್ನು ರಾಸಾಯನಿಕದಲ್ಲಿ ಮುಳುಗಿಸಿ ಎತ್ತಬೇಕು ಇಲ್ಲವೇ ಸಾರ್ವಜನಿಕವಾಗಿ ಗಲ್ಲಿಗೆ ಹಾಕಬೇಕು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಎರಡು ಮಕ್ಕಳ ತಾಯಿ ಮೇಲೆ ಲಾಹೋರ್ ಸಮೀಪ ಹೆದ್ದಾರಿಯಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ ಖಾನ್ ರೇಪಿಸ್ಟ್ ಗಳನ್ನು ರಾಸಾಯನಿಕದಲ್ಲಿ ಮುಳುಗಿಸಬೇಕು ಎಂದರು.

ಅತ್ಯಾಚಾರ ಎಸಗಿದ ಇಬ್ಬರಲ್ಲಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.  ಕಳೆದ ವಾರ, ಲಾಹೋರ್ ಬಳಿಯ ಪ್ರಮುಖ ಹೆದ್ದಾರಿಯೊಂದರಲ್ಲಿ ಓಡಿಸುತ್ತಿದ್ದ ಇಬ್ಬರು ತಾಯಿಯನ್ನು ತನ್ನ ಕಾರಿನಿಂದ ಹೊರಗೆ ಎಳೆದೊಯ್ದು ಗನ್‌ಪಾಯಿಂಟ್‌ನಲ್ಲಿ ಇಬ್ಬರು ವ್ಯಕ್ತಿಗಳು ಅತ್ಯಾಚಾರ ಮಾಡಿದ್ದಾರೆ. 

ಮನೆಗೆ ಹಿಂದಿರುಗುತ್ತಿದ್ದ ಯುವತಿಗೆ ಮದ್ಯ ಕುಡಿಸಿ ಅತ್ಯಾಚಾರ

ಅಪರಾಧಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕೆಂದು ತಾನು ನಂಬಿದ್ದೇನೆ ಎಂದು ಖಾನ್ ಹೇಳಿದ್ದಾರೆ, ಆದರೆ ಇಂತಹ ಕೃತ್ಯವು ಯುರೋಪಿಯನ್ ಯೂನಿಯನ್ (ಇಯು) ಪಾಕಿಸ್ತಾನಕ್ಕೆ ನೀಡಿದ ಆದ್ಯತೆಯ ವ್ಯಾಪಾರ ಸ್ಥಾನಮಾನಕ್ಕೆ ಅಪಾಯ ತರುವ ವಿಚಾರವನ್ನು ಅಧಿಕಾರಿಗಳು ತಮಗೆ ತಿಳಿಸಿದ್ದಾರೆ ಎಂದಿದ್ದಾರೆ.

ಪೊಲೀಸರು ಡಿಎನ್‌ಎ ಸ್ಯಾಂಪಲ್ ಸಂಗ್ರಹಣೆ ಮಾಡಿದ್ದು ತನಿಖೆ ಪ್ರಗತಿಯಲ್ಲಿದೆ. ಇಡೀ ಪಾಕಿಸ್ತಾನದಲ್ಲಿ ಈ ಘೋರ ಕೃತ್ಯದ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು.