ಕಾರವಾರ(ಮಾ. 30)  ಯಾರೂ ಲಾಕ್ ಡೌನ್ ಮಾಡಿದರೆ ಏನು? ನಮ್ಮನ್ನು ಹಿಡಿಯುವವರು ಯಾರು? ಇದು ಸದ್ಯ ಕುಡುಕರು ಕೇಳುತ್ತಿರುವ ಪ್ರಶ್ನೆ. ಕುಡುಕನೊಬ್ಬ ಎಣ್ಣೆ ಬೇಕೆ ಬೇಕು ಎಂದು ಹೇಳಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕೆಲವೇ ಕ್ಷಣದಲ್ಲಿ ಆತ ಕ್ಷಮಾಪಣೆಯನ್ನು ಕೇಳಿದ್ದ.

ಲಾಕ್ ಡೌನ್ ಆದ ತಕ್ಷಣ ಇನ್ನೊಂದು ಕಡೆ ಕಳ್ಳ ಭಟ್ಟಿ ಮತ್ತು ಅಕ್ರಮ ಮದ್ಯ ಸಾಗಾಟ ಜೋರಾಗುವುದು ಸರ್ವೇ ಸಾಮಾನ್ಯ. ಹಲವಾರು ಕಡೆ ದಾಳಿ ನಡೆಸಿದ ಪೊಲೀಸರು  ವಶಕ್ಕೆ ಪಡೆಸಿಕೊಂಡಿದ್ದು ಆಗಿದೆ ನಾಶ ಮಾಡಿದ್ದು ಆಗಿದೆ. ಆದರೆ ಎಲ್ಲವೂ ಒಂದೇ ಕ್ಷಣಕ್ಕೆ ತಹಬದಿಗೆ ಬರಬೇಕಲ್ಲ.

ಮ್ಯಾಟ್ರಿಮೋನಿ ಪರಿಚಯ, ಮದುವೆ ಆಸೆ ತೋರಿಸಿ ಯುವತಿಗೆ ಪಂಗನಾಮ!

ಲಾಕ್ ಡೌನ್ ಅವಧಿಯಲ್ಲೂ ಗೋವಾದಿಂದ ತಂದಿದ್ದ ಅಪಾರ ಪ್ರಮಾಣದ ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ.  ಅರಣ್ಯದಲ್ಲಿ ಬಚ್ಚಿಟ್ಟ 50 ಸಾವಿರ ರು. ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ. ಎಲ್ಲ ಕಡೆ ಬಿಗಿ ಬಂದೋಬಸ್ತ್ ಇದ್ದರೂ ಕಣ್ಣು ತಪ್ಪಿಸಿ ತಂದವವರ ಚಾಕಚಕ್ಯತೆ ಮೆಚ್ಚಲೇಬೇಕು.