ಥಾಣೆ(ಡಿ. 10)  ಡಿಸೆಂಬರ್ 8 ರಂದು  ಪೊಲೀಸರಿಗೆ ಕತ್ತರಿಸಿ ಸೂಟ್ ಕೇಸ್ ನಲ್ಲಿ ತುಂಬಿದ್ದ ಮಹಿಳೆಯ ಶವವೊಂದು  ಪತ್ತೆಯಾಗುತ್ತದೆ. ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿನ ಘಟನೆ ಒಂದು ಕ್ಷಣ ಇಡೀ ರಾಜ್ಯವನ್ನು ಜತೆಗೆ ಪೊಲೀಸ್ ಇಲಾಖೆಯನ್ನೇ ಬೆಚ್ಚಿ ಬೀಳಿಸುತ್ತದೆ.

ಘಟನೆಯ ಒಂದು ದಿನದ ನಂತರ ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸುತ್ತಾರೆ. ಆರೋಪಿ ಮತ್ತೆ ಯಾರು ಅಲ್ಲ ಹುಡುಗಿಯ ತಂದೆಯೇ ಆಗಿರುತ್ತಾನೆ. 

ಬ್ಯಾಗ್ ಒಂದು ಸಿಕ್ಕಿದ್ದು ಅದರಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಆಟೋ ಚಾಲಕನೊಬ್ಬ ಕೊಟ್ಟ ಮಾಹಿತಿ ಆಧರಿಸಿ ಪೊಲೀಸರು ಪರಿಶೀಲನೆ ನಡೆಸಿದಾಗ ಸೂಟ್ ಕೇಸ್ ನಲ್ಲಿ ತುಂಡುತುಂಡಾಗಿ ತುಂಬಿದ್ದ ಮಹಿಳೆಯ ಶವ ಪತ್ತೆಯಾಗುತ್ತದೆ.

ಆಕೆಗೆ ಗಂಡನಿಂದ ಅದು ಬೇಕಿತ್ತು... ಸಿಗದಿದ್ದಾಗ!

ಪೊಲೀಸರು ಬ್ಯಾಗ್ ತೆರೆದು ನೋಡಿದಾಗ ಮುಂಡದ ಭಾಗ ಮಾತ್ರ ಸಿಗುತ್ತದೆ. ರುಂಡ ಮಿಸ್ ಆಗಿದ್ದು ಗುರುತು ಪತ್ತೆ ಸಹ ಸಾಧ್ಯವಾಗುವುದಿಲ್ಲ.ಸಿಸಿಟಿವಿ  ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಯ ಪತ್ತೆ ಮಾಡಿದಾಗ ಇದೊಂದು ಮರ್ಯಾದಾ ಹತ್ಯೆ ಪ್ರಕರಣ ಎಂಬುದು ಸಾಬೀತಾಗುತ್ತದೆ. 

ತೀಥ್ ವಾಲಾದ ನಿವಾಸಿ ಅರವಿಂದ್ ತಿವಾರಿ(47) ಎಂಬುವರನ್ನು ಬಂಧಿಸಿದ್ದೇವೆ. ಮುಂಬೈನ ಅಂಧೇರಿಯಲ್ಲಿ ಲಾಜಿಸ್ಟಿಕ್ ಒಂದರಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಮಗಳನ್ನೇ ಹತ್ಯೆ ಮಾಡಿದ್ದ.

ಬೆಂಗಳೂರಿನಲ್ಲಿ ಕಾಮುಕರಿಗೆ ಉಳಿಗಾಲ ಇಲ್ಲ,,, ಎಲ್ಲ ಕಡೆ ಸಿಸಿ ಕ್ಯಾಮರಾ

ತನ್ನ ಮಗಳು ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದುದ್ದು ಒಪ್ಪಿಗೆ ಇರಲಿಲ್ಲ. ಇದೇ ಕಾರಣಕ್ಕೆ ತನ್ನ 22 ವರ್ಷದ ಮಗಳನ್ನು ತುಂಡು ತುಂಡಾಗಿ ಕತ್ತರಿಸಿ ಸೂಟ್ ಕೇಸ್ ನಲ್ಲಿ ತುಂಬಿ ಎಸೆದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಥಾಣೆ ಪೊಲೀಸ್ ಕಮಿಷನರ್ ದೀಪಕ್ ದೆರೋಜ್ 30 ಗಂಟೆಗಳ ಅವಧಿಯಲ್ಲಿ ಆರೋಪಿ ಪತ್ತೆ ಮಾಡಿದ ತಂಡಕ್ಕೆ ಬಹುಮಾನ ಘೋಷಿಸಿದ್ದಾರೆ.