ಮುಂಬೈ (ಜ.  29) ಬಟ್ಟೆ ಬಿಚ್ಚದೆ ಸ್ಪರ್ಶ ಮಾಡಿದರೆ ಅದು ಲೈಂಗಿಕ ದೌರ್ಜನ್ಯ ಅಲ್ಲ ಎಂದು ನ್ಯಾಯಾಲಯ ಹೇಳಿದ್ದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಈಗ ಸಹ ಅಂಥದ್ದೇ ಒಂದು ತೀರ್ಪು ಹೊರ ಬಂದಿದೆ.

 ನಾಗಪುರ ಪೀಠ ಅತ್ಯಾಚಾರ ಆರೋಪಿಯನ್ನು ಖುಲಾಸೆಗೊಳಿಸಿದೆ.  ಬಾಂಬೆ ಹೈಕೋರ್ಟ್ ನಾಗ್ಪುರ ಪೀಠದ ನ್ಯಾಯಮೂರ್ತಿ ಪುಷ್ಟ ಗನೇಡಿವಾಲಾ  ತೀರ್ಪು ನೀಡಿದ್ದಾರೆ.

ಸಂತ್ರಸ್ತೆಯ ಬಟ್ಟೆಗೆ ಬಾಯಿಗೆ ಬಟ್ಟೆ ತುರುಕಿ, ಯಾರ ಸಹಾಯವಿಲ್ಲದೆ ಆಕೆಯ ಬಟ್ಟೆ ಬಿಚ್ಚಿ  ಅತ್ಯಾಚಾರ ಮಾಡಲು ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ ಎಂದು ಈ ಪ್ರಕರಣದಕ್ಕೆ ಸಂಬಂಧಿಸಿ ತೀರ್ಪು ನೀಡಿದ್ದಾರೆ.  ಈ ಪ್ರಕರಣ ನಡೆದಾಗ ಸಂತ್ರಸ್ತೆ ವಯಸ್ಸು ಹದಿನೆಂಟು ವರ್ಷ ದಾಟಿದ್ದರಿಂದ ಇದನ್ನು ಒಪ್ಪಿತ ಸೆಕ್ಸ್ ಎಂದು ಪರಿಗಣನೆ ಮಾಡಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

'ಬಟ್ಟೆ ಧರಿಸಿದ್ದಾಗ ಖಾಸಗಿ ಅಂಗ ಮುಟ್ಟಿದರೆ ದೌರ್ಜನ್ಯ ಅಲ್ಲ'

ಬಾಯಿಗೆ ಬಟ್ಟೆ ತುರುಕಿ ತನ್ನ ಬಟ್ಟೆಯನ್ನು ಜತೆಗೆ ಸಂತ್ರಸ್ತೆಯ ಬಟ್ಟೆಯನ್ನು ಬಿಚ್ಚಲು ಸಾಧ್ಯವಿಲ್ಲ ಎಂಬುದು ತೀರ್ಪಿನ ಪ್ರಮುಖ ಅಂಶ.

ತನ್ನ  15  ವರ್ಷದ ಮಗಳ ಮೇಲೆ ಪಕ್ಕದ ಮನೆಯ ಸೂರ್ ಅತ್ಯಾಚಾರ ಮಾಡಿದ್ದ ಎಂದು ಯುವತಿ ತಾಯಿ ದೂರು ಸಲ್ಲಿಸಿದ್ದರು. ಆದರೆ ಪ್ರಕರಣ ನಡೆಯುವಾಗ ಯುವತಿ ವಯಸ್ಸು ಹದಿನೆಂಟು ದಾಟಿತ್ತು, ಇಬ್ಬರ ನಡುವೆ ಒಪ್ಪಿತ ಸೆಕ್ಸ್ ನಡೆದಿತ್ತು ಎಂದು ಆರೋಪಿ ಪರ ವಕೀಲರು ವಾದ ಮಂಡಿಸಿದ್ದರು.

ಆ ದಿನ ನಾವು ಮಲಗಿದ್ದ ವೇಳೆ ಆರೋಪಿ ನಮ್ಮ ಮನೆಗೆ ಕುಡಿದು ಬಂದು ಎರಗಿದ್ದ. ಕೂಗಾಡದಂತೆ ತಡೆದು ನನ್ನ ಬಾಯಿಗೆ ಬಟ್ಟೆ ತುರುಕಿ ನಂತರ ತನ್ನ ಬಟ್ಟೆ ಕಳಚಿದ್ದು ಅಲ್ಲದೆ ನನ್ನ ಬಟ್ಟೆಯನ್ನು ಕಳಚಿ ಅತ್ಯಾಚಾರ ಎಸಗಿದ್ದ. ನಂತರ ಬಂದ ಅಮ್ಮನಿಗೆ ವಿಚಾರ ತಿಳಿಸಿದ ನಂತರ ದೂರು ಕೊಟ್ಟೆವು ಎಂದು ಯುವತಿ ಹೇಳಿಕೆ ನೀಡಿದ್ದಳು.

ಒಂದು  ವೇಳೆ ಅತ್ಯಾಚಾರವೇ ನಡೆದಿದ್ದರೆ ಇಬ್ಬರ  ನಡುವೆ ಸಂಘರ್ಷ ನಡೆಯಬೇಕಿತ್ತು. ಆದರೆ ವೈದ್ಯಕೀಯ ವರದಿಯಲ್ಲಿ ಅಂಥ ಯಾವ ಉಲ್ಲೇಖ ಇಲ್ಲ ಎಂಬುದೆಲ್ಲವನ್ನು ಮನಗಂಡು ಆರೋಪಿಯನ್ನು ಖುಲಾಸೆ ಮಾಡಲಾಗಿದೆ.