ವಡೋದರ(ಮೇ.09): ಅತ್ಯಾಚಾರ ಘಟನೆಗಳಾದಾಗ ಅದಕ್ಕೆ ಸಂಬಂಧಿಸಿ ಆರೋಪಿ, ಸಂತ್ರಸ್ತರು ಮಾತ್ರವಲ್ಲ ಉಳಿದೆಲ್ಲ ವಿಚಾರಗಳ ಬಗ್ಗೆಯೂ ವಿವರವಾಗಿ ತನಿಖೆ ಮಾಡಲಾಗುತ್ತದೆ.

ಗುಜರಾತ್‌ನ ವಡೋದರದಲ್ಲಿ ನಡೆದ ಅತ್ಯಾಚಾರ ಪ್ರಕರಣವೊಂದರ ತನಿಖೆ ನಡೆಸಿದ ಪೊಲೀಸರಿಗೆ ಕುತೂಹಲಕಾರಿ ಸಂಶಯವೊಂದು ಮೂಡಿದೆ. ಅತ್ಯಾಚಾರ ನಡೆದ ಕಾರನ್ನು ವಶಕ್ಕೆ ಪಡೆಯಲಾಗಿತ್ತು.

ಹೂವಿನಹಡಗಲಿ: ರೈಲಿಗೆ ತಲೆ ಕೊಟ್ಟು ತಾಪಂ ಎಂಜಿನಿಯರ್‌ ಆತ್ಮಹತ್ಯೆ

ವಶಕ್ಕೆ ಪಡೆದ SUVನಲ್ಲಿ ಅತ್ಯಾಚಾರ ಮಾಡಲು ಸಾದ್ಯವಾಗುವಷ್ಟು ಸ್ಥಳ ಇದೆಯಾ ಎಂಬುದು ಪೊಲೀಸರ ಸಂಶಯ. ಇದಕ್ಕೆ ಸಾಧ್ಯತೆ ಇದೆಯಾ ಎಂದು ಪೊಲೀಸರು ಆರ್‌ಟಿಒ ಮೊರೆ ಹೋಗಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಮುಟ್ಟುಗೋಲು ಹಾಕಿಕೊಂಡಿರುವ ಕಾರಲ್ಲಿ ಅಪರಾಧ ನಡೆಯಲು ಸಾಕಷ್ಟು ಸ್ಥಳಾವಕಾಶ ಇದೆಯೇ ಎಂದು ವಡೋದರಾ ಪೊಲೀಸರು ಆರ್‌ಟಿಒಗೆ ಕೇಳಿದ್ದಾರೆ. ಆರ್‌ಟಿಒ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಿ, ಇದು ತಾವು ಸ್ವೀಕರಿಸಿದ ಮೊದಲ ಇಂತಹ ಮೊದಲ ಮನವಿ ಎಂದು ಹೇಳಿದ್ದಾರೆ. ಪ್ರತಿಕ್ರಿಯಿಸಿದ ಆರ್‌ಟಿಒ ಅಪರಾಧವು ಅಷ್ಟು ಜಾಗದಲ್ಲಿ ಸಂಭವಿಸಿದೆಯೋ ಇಲ್ಲವೋ ಎಂಬ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.