ಲಕ್ನೋ( ಡಿ. 24)  ಗ್ಯಾಂಗ್ ರೇಪ್ ಗೆ ಒಳಗಾಗಿದ್ದ ಸಂತ್ರಸ್ತ ಮಹಿಳೆ ಪೊಲೀಸ್ ಸ್ಟೇಶನ್ ಗೆ ದೂರು ದಾಖಲಿಸಲು ಬಂದರೆ ಪೊಲೀಸ್ ಅಧಿಕಾರಿಯೇ ಆಕೆಯ ಮೇಲೆ ರೇಪ್ ಮಾಡಿದ್ದಾನೆ. ಉತ್ತರ ಪ್ರದೇಶದ ಶಹಜನ್ ಪುರದಿಂದ ಘಟನೆ ವರದಿಯಾಗಿದೆ.

35  ವರ್ಷದ ಮಹಿಳೆ ಕಳೆದ ತಿಂಗಳು ಕಾಲುನಡಿಗೆಯಲ್ಲಿ ಮದನ್ ಪುರಕ್ಕೆ ತೆರಳುತ್ತಿದ್ದಳು. ಈ ವೇಳೆ ಆಕೆಯನ್ನು ಅಡ್ಡಹಾಕಿದ ಐದು ಜನ ಕಾಮಪಿಶಾಚಿಗಳು ಎಳೆದೊಯ್ದು ಅತ್ಯಾಚಾರ ಮಾಡಿದ್ದಾರೆ.

ನಂಬಿಕೆಯಿಟ್ಟು ತಂಗಿಯನ್ನು ಸ್ನೇಹಿತನ ರೂಂಗೆ ಕಳಿಸಿದ್ದಸೇ ತಪ್ಪಾಯಿತು

 ಸಂತ್ರಸ್ತ ಮಹಿಳೆ ದೂರು ನೀಡಲು ಜಲಾಲಾಬಾದ್ ಠಾಣೆಗೆ ತೆರಳಿದ್ದಾಳೆ. ಅಲ್ಲಿದ್ದ ಇನ್ಸ್ ಪೆಕ್ಟರ್ ಸಹ ಕ್ರೌರ್ಯ ಮೆರೆದಿದ್ದಾನೆ. ನಂತರ ಮಹಿಳೆ ಎಡಿಜಿ ಅವಿನಾಶ್ ಚಂದ್ರ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ಅತ್ಯಾಚಾರ ಆರೋಪಿ ಇನ್ಸ್ ಪೆಕ್ಟರ್ ಬ್ರಹ್ಮಪಾಲ್ ಸಿಂಗ್ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.

ಉತ್ತರ ಪ್ರದೇಶದಿಂದ ದೇಶದಲ್ಲಿಯೇ ಅತಿ ಹೆಚ್ಚು ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ.  ಹತ್ರಾಸ್ ಅತ್ಯಾಚಾರ ಪ್ರಕರಣ ದೊಡ್ಡ ಸುದ್ದಿಯಾಗಿದ್ದು ಅನೇಕ ತಿರುವುಗಳನ್ನು ಪಡೆದುಕೊಂಡಿದೆ.