ಬೆಂಗಳೂರು, (ಜ.20): ಯುವಕನೊಬ್ಬನನ್ನು ಎರಡು ದಿನಗಳ ಹಿಂದೆ ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

 ರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಪೂರ್ವ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿವಾಜಿನಗರ ಮಹಮ್ಮದ್ ರಿಜ್ವಾನ್  ಹಾಗೂ ದೇವರ ಜೀವನಹಳ್ಳಿಯ ಫರ್ವೇಜ್ ಅಹಮದ್‌  ಬಂಧಿತ ಆರೋಪಿಗಳು.

ಬೆಂಗಳೂರು: ಹೆಣ್ಣಿನ ತೀಟೆಗೆ ಬಿದ್ದು ಕೊಲೆಯಾದ ಯುವಕ

ಇವರಿಬ್ಬರನ್ನು ಬೆನ್ನಟ್ಟಿ ಬಂಧಿಸಲು ಹೋದ ಭಾರತೀನಗರದ ಮುಖ್ಯಪೇದೆ  ಮಜರ್ ಬೇಗ್‌ಗೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಇದರಿಂದ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. 

ಬಳಿಕ ಆರೋಪಿಗನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ  ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ರಾತ್ರಿ ಕಮರ್ಷಿಯಲ್  ಸ್ಟ್ರೀಟ್‌ನ ಅಬ್ದುಲ್ ಮತೀನ್‌ನನ್ನು ಶಿವಾಜಿನಗರದಿಂದ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಕಾಡುಸಣ್ಣಪನಹಳ್ಳಿಯ  ನಿರ್ಜನ ಪ್ರದೇಶವೊಂದರಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.

ರಿಜ್ವಾನ್ ಎಂಬಾತನ ಅತ್ತಿಗೆ ಜತೆ ಮಸಿನ್ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದ್ದು, ಇದರಿಂದ ಆಕ್ರೋಶಗೊಂಡ ರಿಜ್ವಾನ್ ತನ್ನ ಸ್ನೇಹಿತರ ಜತೆ ಸೇರಿಕೊಂಡು ಈ ಕೃತ್ಯವೆಸಗಿದ್ದಾನೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಈ ಸಂಬಂಧ  ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.