ಬಾಗಲಕೋಟೆ;  ಪತ್ನಿಗೆ ಅಕ್ರಮ ಸಂಬಂಧ ಇತ್ತಾ?  ತಡೆಯಲು ಬಂದ ತಂದೆಯೇ ಮಗನಿಂದ ಹತ್ಯೆ

ಪತ್ನಿ ಮೇಲೆ ಅನೈತಿಕ ಸಂಬಂಧ ಸಂಶಯದಿಂದ ಹಲ್ಲೆ/ ಬಿಡಿಸಲು ಹೋದ ತಂದೆಗೆ ರಾಡ್ ನಿಂದ ಹೊಡೆದು ಕೊಲೆ/ ಕುಡಿದ ಮತ್ತಿನಲ್ಲಿ ಮಗನಿಂದಲೇ ತಂದೆ ಕೊಲೆ,ಪತ್ನಿಗೆ ಗಂಭೀರ ಗಾಯ/ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಪತ್ನಿ ದಾಖಲು

Father Stops Son From Assaulting Wife Gets Killed in Bagalakote mah

ಬಾಗಲಕೋಟೆ (ಮಾ.  02)  ಪತ್ನಿ ಮೇಲೆ ಅನೈತಿಕ ಸಂಬಂಧ ಸಂಶಯದಿಂದ  ಮಗ ಹಲ್ಲೆ ಮಾಡಲು ಮುಂದಾಗಿದ್ದಾನೆ. ಬಿಡಿಸಲು ಹೋದ ತಂದೆಗೆ ಮಗ ರಾಡ್ ನಿಂದ ಹೊಡೆದಿದಿದ್ದಾನೆ.  ಮಗನ ಹೊಡೆತಕ್ಕೆ ತಂದೆ ಸಾವನ್ನಪ್ಪಿದ್ದಾರೆ.

ಕುಡಿದ ಮತ್ತಿನಲ್ಲಿ ಮಗನಿಂದಲೇ ತಂದೆ ಕೊಲೆಯಾಗಿದ್ದು ಪತ್ನಿಗೆ ಗಂಭೀರ ಗಾಯಗಳಾಗಿವೆ.  ಪತ್ನಿ ಗಂಭೀರ ಗಾಯಗೊಂಡಿದ್ದು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಚೌಡಕಮಲದಿನ್ನಿ ಗ್ರಾಮದಲ್ಲಿ ಘಟನೆ ನಡೆದಿದೆ.

'ರೋಡಲ್ಲೇ ಪ್ಯಾಂಟ್‌ ಬಿಚ್ಚಿ ಛೀ ಅಸಹ್ಯ.. ದಿನಾ ನರಕ' ಮೈಸೂರು ಹುಡುಗಿಯ ಆರ್ತನಾದ

ಶಿವಾನಂದಪ್ಪ ಗೌಡರ(72) ಮಗನಿಂದಲೇ ಕೊಲೆಗೀಡಾದ ವ್ಯಕ್ತಿ. ರಾಜೇಂದ್ರ ಕೊಲೆಗೈದ ಮಗ. ಸ್ಥಳಕ್ಕೆ ಹುನಗುಂದ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಪತ್ನಿ ಮೇಲೆ ಅನೈತಿಕ ಸಂಬಂಧ ಸಂಶಯದಿಂದ ಪದೆ ಪದೇ ಹಲ್ಲೆ ಮಾಡುತ್ತಿದ್ದ. ಹುನಗುಂದ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

 

Latest Videos
Follow Us:
Download App:
  • android
  • ios