Asianet Suvarna News Asianet Suvarna News

ಬೆಳಗಾವಿ: ಮಗನ ಕಿರುಕುಳಕ್ಕೆ ಬೇಸತ್ತು ತಂದೆಯೇ ಮಗನ ಹತ್ಯೆಗೆ ಸುಪಾರಿ ಕೊಟ್ಟ!

ಮನೆಯಲ್ಲಿದ್ದ ಬೆಲೆ ಬಾಳುವ ವಸ್ತು, ದವಸ ಧಾನ್ಯವನ್ನು ಮಾರಾಟ ಮಾಡಿ ಮದ್ಯ ಸೇವನೆ ಮಾಡಿ ಕಿರುಕುಳ ನೀಡುತ್ತಿದ್ದ ಮಗನ ಕೃತ್ಯದಿಂದ ಮನನೊಂದು ತಂದೆಯೇ ಹತ್ಯೆ ಮಾಡಲು ಸುಪಾರಿ ಕೊಟ್ಟ ಪ್ರಕರಣದಲ್ಲಿ ಘಟನೆ ನಡೆದ  24 ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Father killed his son in shivananda bharati nagar at belgum district rav
Author
First Published Aug 25, 2023, 9:23 PM IST

ಬೆಳಗಾವಿ (ಆ.25):  ಮನೆಯಲ್ಲಿದ್ದ ಬೆಲೆ ಬಾಳುವ ವಸ್ತು, ದವಸ ಧಾನ್ಯವನ್ನು ಮಾರಾಟ ಮಾಡಿ ಮದ್ಯ ಸೇವನೆ ಮಾಡಿ ಕಿರುಕುಳ ನೀಡುತ್ತಿದ್ದ ಮಗನ ಕೃತ್ಯದಿಂದ ಮನನೊಂದು ತಂದೆಯೇ ಹತ್ಯೆ ಮಾಡಲು ಸುಪಾರಿ ಕೊಟ್ಟ ಪ್ರಕರಣದಲ್ಲಿ ಘಟನೆ ನಡೆದ  24 ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಮುರಗೋಡ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೈಲಹೊಂಗಲ ಪಟ್ಟಣದ ಶಿವಾನಂದ ಭಾರತಿ ನಗರದ ಸಂಗಮೇಶ ಮಾರುತಿ ತಿಗಡಿ(Sangamesh maruthi tigadi) (39) ಕೊಲೆಯಾದ ದುರ್ದೈವಿ. ಸವದತ್ತಿ ತಾಲೂಕಿನ ಹಿರೇಕೊಪ್ಪ ಗ್ರಾಮದ ಮಂಜುನಾಥ ಶೇಖಪ್ಪ ಹೊಂಗಲ (43) ಹಾಗೂ ಹಿರೇಕೊಪ್ಪ ಗ್ರಾಮದ ಅಡಿವೆಪ್ಪ ಅಜ್ಜಪ್ಪ ಬೋಳೆತ್ತಿನ (38) ಬಂಧಿತರು. ಕೊಲೆಗೀಡಾದ ಸಂಗಮೇಶ ಕುಡಿತದ ಚಟಕ್ಕೆ ಅಂಟಿಕೊಂಡಿದ್ದರಿಂದ ಪ್ರತಿನಿತ್ಯ ಬೆಳಗಾಗುವುದೇ ತಡ ಮದ್ಯ ಸೇವನೆ ಮಾಡಿ ತಂದೆ, ತಾಯಿಗೆ ಕಿರುಕುಳ ನೀಡುತ್ತಿದ್ದನು. ಅಲ್ಲದೇ ತನ್ನ ಕುಡಿತದ ಚಟಕ್ಕಾಗಿ ಮನೆಯಲ್ಲಿರುವ ಬೆಲೆ ಬಾಳುವ ಸಾಮಗ್ರಿ, ದವಸ ಧಾನ್ಯಗಳನ್ನು ಮಾರಾಟ ಮಾಡಿ ಮದ್ಯ ಸೇವಿಸುತ್ತಿದ್ದನು. ಅಲ್ಲದೆ ನಶೆಯಲ್ಲಿ ಮನೆಗೆ ಬಂದು ತಂದೆ, ತಾಯಿ ಕಿರುಕುಳ ನೀಡುತ್ತಿದ್ದ ಸಂಗಮೇಶ ಕಿರುಕುಳ ನೀಡುತ್ತಿದ್ದನು. ಇದರಿಂದ ಆಕ್ರೋಶಗೊಂಡ ತಂದೆ ಈತನನ್ನು ಹತ್ಯೆಮಾಡಲು ಸಂಗಮೇಶನೊಂದಿಗೆ ಉಳ್ಳಾಗಡ್ಡಿ ವ್ಯಾಪಾರ ಮಾಡಿಕೊಂಡಿದ್ದ ಸ್ನೇಹಿತರಾಗಿದ್ದ ಆರೋಪಿಗಳಾದ ಮಂಜುನಾಥ ಹಾಗೂ ಅಡಿವೆಪ್ಪನಿಗೆ ಹತ್ಯೆ ಮಾಡಲು ಮಾರ್ಗದರ್ಶನ ನೀಡಿದ್ದಾನೆ ಎಂದು ತಿಳಿದು ಬಂದಿದೆ.

ಮಂಡ್ಯ ಜೆಡಿಎಸ್‌ ಮುಖಂಡ ಅಪ್ಪುಗೌಡ ಕೊಲೆಗೆ ಸ್ನೇಹಿತನಿಂದಲೇ ಸುಪಾರಿ

ಕೊಲೆಗೀಡಾದ ಸಂಗಮೇಶನನ್ನು ಬೈಲಹೊಂಗಲ, ನೇಸರಗಿ, ವಣ್ಣೂರ, ಮುರಗೋಡ ಸೇರಿದಂತೆ ಇನ್ನೀತರ ಕಡೆಗಳಲ್ಲಿ ದ್ವಿಚಕ್ರ ವಾಹನ ಮೇಲೆ ತಿರುಗಾಡಿದ್ದಾರೆ. ಮಂಜುನಾಥ ಹೊಂಗಲ ಇವನೊಂದಿಗೆ ದ್ವಿಚಕ್ರ ವಾಹನದ ಮೇಲೆ ಗೋಕಾಕ ತಾಲೂಕಿನ ಅಂಕಲಗಿಗೆ ಬಂದು ಬಿಟ್ಟಿದ್ದಾನೆ. ಬಳಿಕ ಹಿರೇಕೊಪ್ಪ ಗ್ರಾಮಕ್ಕೆ ಮರಳಿ ಅಡಿವೆಪ್ಪ ಬೋಳೆತ್ತಿನ ಎಂಬಾತನನ್ನು ಕರೆದುಕೊಂಡು ಮತ್ತೆ ಅಂಕಲಗಿಗೆ ಹೋಗಿದ್ದಾನೆ. ಮೂವರು ಜೊತೆಗೂಡಿ ಅಲ್ಲಿನ ವೈನ್‌ಶಾಪನಲ್ಲಿ ಕಂಠಪೂರ್ತಿ ಕುಡಿಸಿದ ಆರೋಪಿ ಮಂಜುನಾಥ ಸಂಗಮೇಶನನ್ನು ಬೈಕ್‌ ಮೇಲೆ ಅಡಿವೆಪ್ಪನ ಸಹಾಯದಿಂದ ಸವದತ್ತಿ ತಾಲೂಕಿನ ಕುಟರನಟ್ಟಿಗ್ರಾಮದ ಹೊರವಲಕ್ಕೆ ಕರೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಕಲ್ಲು ಎತ್ತಿ ಹತ್ಯೆ ಮಾಡಿ ಯಾರಿಗೂ ಸುಳಿವು ಸಿಗದಂತೆ ಪರಾರಿಯಾಗಿದ್ದರು.

ಸುಳಿವು ಸಿಕ್ಕ ಸುಣ್ಣದ ಡಬ್ಬಿ, ಮೊಬೈಲ… ನಂರ್ಬ ಚೀಟಿ:

ಗೋಕಾಕ ತಾಲೂಕಿನ ಅಂಕಲಗಿಯಲ್ಲಿ ಮೂವರು ಸರಾಯಿ ಕುಡಿದು ಕುಟರನಟ್ಟಿಗ್ರಾಮದ ನಿರ್ಜನ ಪ್ರದೇಶದಲ್ಲಿ ಸಂಗಮೇಶನ ತಲೆಯ ಮೇಲೆ ಕಲ್ಲು ಎತ್ತಿ ಕೊಲೆ ಮಾಡಿ ಪರಾರಿಯಾಗಿದ್ದರು. ಆ.20 ರಂದು ಸುದ್ದಿ ತಿಳಿದ ಮುರಗೋಡ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಘಟನೆ ಕುರಿತು ಸುಳಿವು ಮತ್ತು ಸ್ಥಳದಲ್ಲಿನ ಸಾಕ್ಷಿಗಳನ್ನು ಕಲೆ ಹಾಕುವ ಸಮಯದಲ್ಲಿ ಕೊಲೆಗೀಡಾದ ಸಂಗಮೇಶನ ಬಳಿ ರಕ್ತಸಿಕ್ತವಾಗಿರುವ ಒಂದು ಚೀಟಿ ಲಭ್ಯವಾಗಿದೆ. ಅದನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಹಸಿರಕ್ತವನ್ನು ಒಣಗಿಸಿದ ಬಳಿಕ ಚೀಟಿಯನ್ನು ಬಿಚ್ಚಿನೋಡಿದ್ದು, ಒಂದು ಮೊಬೈಲ್‌ ನಂಬರ ಇರುವುದು ಪತ್ತೆಯಾಗಿದೆ. ಈ ನಂಬರೆ ಪೋನ್‌ ಮಾಡಿದ ಪೊಲೀಸರು ಆತನನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿ ಮೃತದೇಹದ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಮೃತ ಸಂಗಮೇಶನ ಕುರಿತು ಸಮಗ್ರ ಮಾಹಿತಿ ನೀಡಿದ್ದಾರೆ.

ಈ ಮಾಹಿತಿ ಆಧರಿಸಿ ಮೃತ ಸಂಗಮೇಶನ ಮನೆಗೆ ತೆರಳಿ ವಿಚಾರಣೆ ನಡೆಸಿದ ಸಮಯದಲ್ಲಿ ಘಟನೆ ಕುರಿತು ಮಾಹಿತಿ ಲಭ್ಯವಾಗಿದೆ. ತಕ್ಷಣ ತಂಡ ರಚಿಸಿಕೊಂಡು ಹಂತಕರ ಬಂಧನಕ್ಕೆ ಬಲೆ ಬಿಸಿದ ಮುರಗೋಡ ಠಾಣೆಯ ಪೊಲೀಸ್‌ ಇನಸ್ಪೆಕ್ಟರ್‌ ಈರಯ್ಯ ಮಠಮತಿ ನೇತೃತ್ವದ ತಂಡ ಘಟನೆ ನಡೆದ ಕೇವಲ 24 ಗಂಟೆಗಳಲ್ಲಿ ಹತ್ಯೆ ಪ್ರಕರಣವನ್ನು ಬೇಧಿಸುವಲ್ಲಿ ಸಫಲರಾಗಿದ್ದಾರೆ. ಈ ಕುರಿತು ಮುರಗೋಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುನ್ನೂರು ವರ್ತಕನ ಹತ್ಯೆಗೆ ಸಂಚು, ಐವರು ಸುಪಾರಿ ಹಂತಕರ ಬಂಧ‌ನ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಹಾಗೂ ರಾಮದುರ್ಗ ಡಿಎಸ್‌ಪಿ ರಾಮನಗೌಡ ಹಟ್ಟಿಮಾರ್ಗದರ್ಶನದಲ್ಲಿ ಪೊಲೀಸ್‌ ಇನಸ್ಪೆಕ್ಟರ್‌ ಈರಯ್ಯ ಮಠಪತಿ, ಪಿಎಸ್‌ಐಗಳಾದ ಎಸ್‌.ಎಂ.ಕಾರಜೋಳ, ಐ.ಎಂ.ಹಿರೇಗೌಡ್ರ, ಸಿಬ್ಬಂದಿಗಳಾದ ಎಚ್‌.ಆರ್‌.ನ್ಯಾಮಗೌಡ, ಎನ್‌.ಸಿ ತಲ್ಲೂರ, ಎಸ್‌.ಎಂ. ಜೈನರ, ಎಂ.ಬಿ. ಸನ್ನಾಯಿಕ, ಎಸ್‌.ಎಂ.ಹುಂಬಿ, ಐ.ಎಸ್‌.ವಕ್ಕುಂದ, ಕೆ.ಬಿ.ಅಲಗರಾವುತ, ಎಂ.ಎಸ್‌.ಅವರಾದಿ, ಕೆ.ಆರ್‌.ಮುನವಳ್ಳಿ, ಎಂ.ಬಿ.ಗುಡಗನಟ್ಟಿಸೇರಿದಂತೆ ಇತರರು ಈ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಶ್ರಮಿಸಿದ್ದಾರೆ. ಮುರಗೋಡ ಠಾಣೆಯ ಪೊಲೀಸರ ಕಾರ್ಯವನ್ನು ಹಿರಿಯ ಪೊಲೀಸ್‌ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Follow Us:
Download App:
  • android
  • ios