ಹೈದರಾಬಾದ್(ಏ. 08) ತನ್ನ ಲೈಂಗಿಕ ದೌರ್ಜನ್ಯದ ದೂರು ದಾಖಲಾದ ನಂತರ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಈ ವ್ಯಕ್ತಿ ತನ್ನ 20 ವರ್ಷದ ಸೋದರಸಂಬಂಧಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು.

ಕಳೆದ ವರ್ಷ ಯುವಕ ಯುನೈಟೆಡ್ ಕಿಂಗ್‌ಡಮ್‌ನಿಂದ ಮರಳಿದ್ದರು. ಭದ್ರಾಡಿ-ಕೊಥಗುಡೆಮ್ ಜಿಲ್ಲೆಯಲ್ಲಿ ಬುಧವಾರ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನೈಟ್ ಶಿಫ್ಟ್ ಮುಗಿಸಿ ಬರ್ತಿದ್ದ ಯುವತಿ ಮೇಲೆರಗಿದ ಕಾಮುಕರು

ಮಂಗಳವಾರ ಸಂಜೆ 20 ವರ್ಷದ ಮಹಿಳೆ ಕೋಥಗುಡೆಮ್  ಪೊಲೀಸರನ್ನು ಸಂಪರ್ಕಿಸಿ ಈತನ ಮೇಲೆ ಅತ್ಯಾಚಾರದ  ದೂರು ದಾಖಲಿಸಿದ್ದರು. ತನ್ನ ಬಾಲ್ಯದಿಂದಲೂ ತನ್ನ ಸಹೋದರ ಮತ್ತು ಆತ್ಮಹತ್ಯೆ ಮಾಡಿಕೊಂಡ ಸೋದರಸಂಬಂಧಿ ಲೈಂಗಿಕ ಕಿರುಕುಳ ನೀಡಿದ್ದಾಳೆ ಎಂದು ಆರೋಪಿಸಿದ್ದಳು.

ನ್ನ ಮೇಲೆ ದೌರ್ಜನ್ಯವಾಗುತ್ತಿದ್ದುದ್ದು ಪೋಷಕರಿಗೂ ತಿಳಿದಿತ್ತು. ತಾಯಿ, ಚಿಕ್ಕಮ್ಮ ಮತ್ತು ಚಿಕ್ಕಪ್ಪ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿದಿದ್ದರೂ ಸುಮ್ಮನೆ ಇದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದರು.

 ಬುಧವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮಹಿಳೆಯ ಸೋದರಸಂಬಂಧಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು ಕೊರೋನಾ ಕಾರಣಕ್ಕೆ ದೇಶಕ್ಕೆ ವಾಪಸ್ ಆದ ಯುವಕ ಇಲ್ಲಿಯೇ ನೆಲೆ ನಿಲ್ಲುವ ತೀರ್ಮಾನ ಮಾಡಿದ್ದರು.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾವುದೆ ಡೆತ್ ನೋಟ್ ಬರೆದಿಟ್ಟಿಲ್ಲ. ಅತ್ಯಾಚಾರದ ಆರೋಪ ಬಂದಿದ್ದರಿಂದ ಮರ್ಯಾದೆಗೆ  ಇಂಥ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.