Asianet Suvarna News Asianet Suvarna News

'ಯಾಕೆ ಕುಡಿಯುತ್ತೀಯಾ' ನಶೆಯಲ್ಲಿದ್ದವನಿಗೆ ಪತ್ನಿ ಹತ್ಯೆ ಮಾಡಿದ್ದೇ ಗೊತ್ತಿಲ್ಲ!

*ಕುಡಿತದ  ನಶೆ ಎಂತೆಂಥ ಕೆಲಸ ಮಾಡಿಸಿಬಿಡುತ್ತದೆ
* ದೊಣ್ಣೆಯಿಂದ ಹೊಡೆದು ಪತ್ನಿಯನ್ನು ಸಾಯಿಸಿದ
* ಹೆಂಡತಿ ಸಾಯಿಸಿ ಮಗುವನ್ನು ಕೋಣೆಯಲ್ಲಿ ಕೂಡಿದ

Drunk man beats wife to death after she raises objection over his alcohol addiction mah
Author
Bengaluru, First Published Sep 14, 2021, 4:01 PM IST
  • Facebook
  • Twitter
  • Whatsapp

ಪ್ರಯಾಗರಾಜ್(ಸೆ.14)  ಗಂಡನ ಮದ್ಯದ   ಚಟಕ್ಕೆ ಬೇಸತ್ತ ಪತ್ನಿ ಅದನ್ನು ವಿರೋಧಿಸಿದ ಕಾರಣ ಸಾವು ಕಾಣಬೇಕಾದ ಪರಿಸ್ಥಿತಿ ಬಂದಿದೆ. ಕುಡುಕ ಗಂಡ ಪತ್ನಿಯನ್ನು ಹತ್ಯೆ ಮಾಡಿದ್ದಾನೆ.

ಪತ್ನಿಯನ್ನು ಕೋಲಿನಿಂದ ಥಳಿಸಿದ ಪಾಪಿ ಪತಿ ಆಕೆ ಸಾಯುವವರೆಗೂ ಹೊಡೆಯುತ್ತಲೇ ಇದ್ದ. ಕುಡಿದ ಅಮಲಿನಲ್ಲಿದ್ದ ಆರೋಪಿ ಈ ಘೋರ ಕೆಲಸ ಮಾಡಿದ್ದಾನೆ. ಆಕೆ ಸಾವನ್ನಪ್ಪಿದ ಸಂಗತಿಯೂ ಆತನ ಅರಿವಿಗೆ ಇರಲಿಲ್ಲ. 

ಶನಿವಾರ ರಾತ್ರಿ ಜಿಲ್ಲೆಯ ಟ್ರಾನ್ಸ್-ಯಮುನಾ ಪ್ರದೇಶದ ಕೌಂಧಿಯಾರ ಪೊಲೀಸ್ ವ್ಯಾಪ್ತಿಯ ನಚ್ನಾ ಗ್ರಾಮದಲ್ಲಿ ಘಟನೆ ನಡೆದಿದೆ. ಪತ್ನಿ ನೀಲು ಗಂಡನ ಕುಡಿತದ ಚಟಕ್ಕೆ ಬೇಸತ್ತಿದ್ದಳು.

ಕಾಂಡೋಮ್ ಬಳಸು ಎಂದಿದ್ದಕ್ಕೆ ಮಹಿಳೆ ಹತ್ಯೆ ಮಾಡಿ ಹೊರನಡೆದ

ಮದ್ಯದ ನಶೆಯಲ್ಲಿದ್ದ ಗಂಡ ಮತ್ತು ಪತ್ನಿ ನಡುವೆ ವಾಗ್ವಾದ ನಡೆದಿದೆ. ಇದು ವಿಕೋಪಕ್ಕೆ ಹೋದಾಗ ಗಂಡ  ಹತ್ತಿರದಲ್ಲಿ ಇದ್ದ ದೊಣ್ಣೆ ತೆಗೆದುಕೊಂಡಿದ್ದಾನೆ.  ನಂತರ ಪತ್ನಿ ಸಾಯುವವರೆಗೂ ಥಳಿಸುತ್ತಲೇ ಇದ್ದ. ಪತ್ನಿಯನ್ನು ಸಾಯಿಸಿದ ನಂತದ 11  ವರ್ಷದ ಮಗಳನ್ನು ಕೋಣೆಯೊಂದರಲ್ಲಿ ಲಾಕ್ ಮಾಡಿ ಇಟ್ಟಿದ್ದ. 

ಮಗಳು ಅದು ಹೇಗೋ ಕೋಣೆಯಿಂದ ತಪ್ಪಿಸಿಕೊಂಡು ಮರುದಿನ ಅಪ್ಪನ ಘೋರ ಕೆಲಸದ ಬಗ್ಗೆ ಹೇಳಿದ್ದಾಳೆ. ಕುಟುಂಬಕ್ಕೆ ಸಂಬಂಧಿಸಿದವರು ಬಂದು ನೋಡಿದಾಗ ಮಹಿಳೆಯ ಶವ ಕಂಡಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಕೊಲೆಗೆ ಬಳಸಿದ್ದ ದೊಣ್ಣೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

 

Follow Us:
Download App:
  • android
  • ios