ಲಕ್ನೋ(ಡಿ. 22)  70  ವರ್ಷದ ವೃದ್ಧ ಲಿವ್ ಇನ್ ಸವಿ ಕಂಡಿದ್ದಾನೆ. ಅದೇ ಕಾರಣಕ್ಕೆ ಸಂಬಂಧವೊಂದನ್ನು ಬೆಳೆಸಿದ್ದಾನೆ. ಕೊನೆಗೆ ಆಸ್ತಿ ಮಾರಿ ಹಣ ನೀಡಲು ಮುಂದಾಗಿದ್ದು ತನ್ನ ಮಕ್ಕಳಿಂದಲೇ ಕೊಲೆಯಾಗಿ ಹೋಗಿದ್ದಾನೆ.

ಉತ್ತರ ಪ್ರದೇಶದ ಲಕ್ನೋದಿಂದ ಪ್ರಕರಣ ವರದಿಯಾಗಿದೆ.  70  ವರ್ಷದ ವೃದ್ಧ ರಾಮ್ ದಯಾಳ್ ಗೆ ಮಕ್ಕಳು ಮೊಮ್ಮಕ್ಕಳು ಇದ್ದಾರೆ. ಆದರೆ ಶಾಂತಿ ದೇವಿ (ಹೆಸರು ಬದಲಿಸಲಾಗಿದೆ) ಎಂಬಾಕೆಯೊಂದಿಗೆ ಲಿವ್ ಇನ್ ನಲ್ಲಿ ಇದ್ದ. ತಂದೆಗೆ ವಯಸ್ಸಾಗಿದೆ ಏನಾದರೂ ಮಾಡಿಕೊಳ್ಳಲಿ ಎಂದು ಮಕ್ಕಳು ಸುಮ್ಮನಾಗಿದ್ದಾರೆ.

ಡಾಕ್ಟರ್ ಮತ್ತು ನಾಲ್ಕು ಮಕ್ಕಳ ತಾಯಿ ನಡುವೆ ಕುಚ್ ಕುಚ್..ಚೆಕ್ ಅಪ್ ಗೆ ಹೋದವಳ ಕತೆ

ಆದರೆ ರಾಮ್  ದಯಾಳ್  ತನ್ನ 57 ಲಕ್ಷ ರೂ. ಬೆಲೆಬಾಳುವ ಆಸ್ತಿ ಮಾರಲು ಮುಂದಾಗಿದ್ದಾನೆ. ವ್ಯಕ್ತಿಯೊಬ್ಬರಿಂದ 11 ಲಕ್ಷ ರೂ. ಮುಂಗಡವನ್ನು ಪಡೆದಿದ್ದಾನೆ. ಇದರಲ್ಲಿ ನಾಲ್ಕು ಲಕ್ಷ ರೂ. ಹಣವನ್ನು ಶಾಂತಿ ದೇವಿಗೆ ನೀಡಿದ್ದಾನೆ.

ಇದಾದ ಮೇಲೆ ಮಕ್ಕಳಿಂದ ವಿರೋಧ ವ್ಯಕ್ತವಾಗಿದೆ. ಒಂದು ಕಡೆ ಶಾಂತಾ ದೇವಿ ಸಹ ನಾವು ಆಸ್ತಿ ಮಾರಾಟ ಮಾಡುತ್ತೇವೆ ಎಂದು ಹೇಳಿದ್ದಾಳೆ. ಅವಕಾಶ ಸಾಧಿಸಿದ ಮಕ್ಕಳು ತಂದೆ ಮತ್ತು ಲಿವ್ ಇನ್ ನಲ್ಲಿದ್ದ ಶಾಂತದೇವಿಯನ್ನು ಕೊಲೆಗೈದಿದ್ದಾರೆ.

ಜೋಡಿ ಕೊಲೆ ಬೆನ್ನು ಹತ್ತಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ದಯಾಳ್ ನ ಇಬ್ಬರು ಮಕ್ಕಳು ಮತ್ತು ಅವರ ಮೂವರು ಸ್ನೇಹಿತರನ್ನು ಜೈಲಿಗೆ ಅಟ್ಟಿದ್ದಾರೆ.