ನಾಗ್ಪುರ(ಆ. 19) ನಗರದ ಹೃದಯ ತಜ್ಞ ವೈದ್ಯರೊಬ್ಬರು ಗಂಡ ಮತ್ತು ಮಕ್ಕಳನ್ನು ಹತ್ಯೆ ಮಾಡಿ ತಾವು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಘಟನೆ ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸುಸೈಡ್ ನೋಟ್  ಸಿಕ್ಕಿದೆ.

ಡಾ. ಸುಷ್ಮಾ ರಾಣೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಕುಟುಂಬದ  ಉಳಿದ ಮೂರು ಸದಸ್ಯರು ಕೋಣೆಯಲ್ಲಿ ಶವವಾಗಿ ಬಿದ್ದಿದ್ದರು. ದೇಹಗಳನ್ನು ಮರಣೋತ್ರರ ಪರೀಕ್ಷೆಗೆ ಕಳುಹಿಸಲಾಗಿದ್ದು ಘಟನೆಗೆ ಕಾರಣ ಹುಡುಕಲಾಗುತ್ತಿದೆ.

ಮದುವೆಯಾಗಲು ಹುಡುಗಿ ಸಿಗಲಿಲ್ಲ ಎಂದು ನೊಂದು ಆತ್ಮಹತ್ಯೆ
 
ಜೂನ್ ತಿಂಗಳಿನಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ಸಹ ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಪೊಲೀಸರು ಆರಂಭಿಕ ತನಿಖೆಯಲ್ಲಿ  ಹೇಳಿದ್ದರು. ಆದರೆ ಇದೀಗ ಸುಶಾಂತ್ ಪ್ರಕರಣವನ್ನು ಸಂಪೂರ್ಣವಾಗಿ ಸಿಬಿಐಗೆ  ವಹಿಸಲಾಗಿದೆ.