ನವದೆಹಲಿ(ಡಿ. 13)  ಮನೆಯಲ್ಲಿ ಜಗಳ ಮಾಡಿಕೊಂಡು  ಸಿಟ್ಟಿನಿಂದ ರೈಲ್ವೆ ನಿಲ್ದಾಣಕ್ಕೆ  ಬಂದು ಕುಳಿತುಕೊಂಡಿದ್ದ ಯುವತಿಯನ್ನು ಅಪಹರಿಸಿ ಕಾಮುಕರು ಅತ್ಯಾಚಾರ ಎಸಗಿದ್ದಾರೆ.

22  ವರ್ಷದ ಯುವತಿ ಮನೆಯಲ್ಲಿ ಜಗಳ ಮಾಡಿಕೊಂಡು ಹತ್ತಿರದ ಶಕುರ್ ಬಸ್ತಿ ರೈಲ್ವೆ ನಿಲ್ದಾಣದ ಬಳಿ ಬಂದು ಕುಳಿತುಕೊಂಡಿದ್ದಳು. ಈ ವೇಳೆ ಅಲ್ಲಿಯೇ ಇದ್ದ ಮೂವರು ಕಾಮುಕರು ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾರೆ.

ಐದು ಮಕ್ಕಳ  ತಾಯಿ ಮೇಲೆ  ಎರಗಿದ ಹದಿನೇಳು ಜನ ಪಿಶಾಚಿಗಳು

ತಪ್ಪಿಸಿಕೊಳ್ಳುವ ಯತ್ನ ಮಾಡಿದ ಯುವತ್ತಿಯನ್ನು ಅಲ್ಲಿಂದ ಹೊತ್ತೊಯ್ಯಲಾಗಿದೆ. ಗ್ಯಾಂಗ್ ರೇಪ್ ನಡೆಸಿದ್ದು ಅಲ್ಲದೆ ಎಲ್ಲಿಯಾದರೂ ಬಾಯಿಬಿಟ್ಟರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿ ಜಾಗ ಖಾಲಿ ಮಾಡಿದ್ದಾರೆ.

ಮನೆಗೆ ಮರಳಿದ ಯುವತಿ ದುರ್ಘಟನೆಯನ್ನು ತಿಳಿಸಿದ್ದು ದೂರು ನೀಡಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ.   ಉತ್ತರ ಪ್ರದೇಶ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಒಂದಾದರ ಮೇಲೊಂದು ಲೈಂಗಿಕ ದೌರ್ಜನ್ಯದ ಪ್ರಕರಣಗಳು ವರದಿಯಾಗುತ್ತಲೆ ಇವೆ.