Asianet Suvarna News Asianet Suvarna News

ದೆಹಲಿಯಲ್ಲಿ ಮತ್ತೊಂದು ಕ್ರೂರ ಘಟನೆ: ಯುವತಿ ಮೇಲೆ 25 ಜನರಿಂದ ಸಾಮೂಹಿಕ ಅತ್ಯಾಚಾರ

  • ಯುವತಿ ಮೇಲೆ ಎರಗಿದ 25 ಜನ ಕಾಮುಕರು
  • ರಾಷ್ಟ್ರ ರಾಜಧಾನಿಯನ್ನು ಬೆಚ್ಚಿಬೀಳಿಸಿದ ಮತ್ತೊಂದು ಗ್ಯಾಂಗ್‌ರೇಪ್
Delhi woman gang raped by 25 men after FB friend calls her to meet parents dpl
Author
Bangalore, First Published May 15, 2021, 5:28 PM IST

ದೆಹಲಿ(ಮೇ.15): ದೆಹಲಿಯಲ್ಲಿ ಇತ್ತೀಚೆಗೆ ನಡೆದ ಕ್ರೂರ ಘಟನೆಯಲ್ಲಿ 25 ಕಾಮುಕರು ಯುವತಿಯನ್ನು ಗ್ಯಾಂಗ್‌ ರೇಪ್ ಮಾಡಿರುವುದು ಬೆಳಕಿಗೆ ಬಂದಿದೆ. ದೆಹಲಿಯ ಯುವತಿಯೊಬ್ಬಳು ತನ್ನ ಫೇಸ್‌ಬುಕ್ ಸ್ನೇಹಿತನ ಪೋಷಕರ ಭೇಟಿಯಾಗಲು ಹೋಗಿ ಘಟನೆ ಸಂಭವಿಸಿದೆ.

ಪೋಷಕರನ್ನು ಭೇಟಿ ಮಾಡಿಸುತ್ತೇನೆಂದು ಯುವತಿಯನ್ನು ಭೇಟಿಯಾಗಲು ಕರೆದಿದ್ದ ಆರೋಪಿ. ನಂಬಿ ಬಂದ ಯುವತಿ ಮೇ 3 ರಂದು ರಾತ್ರಿ ಮತ್ತು ಬೆಳಗ್ಗೆ 25 ಜನರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಳು. ಈ ಘಟನೆ ನಡೆದ 9 ದಿನಗಳ ನಂತರ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

SUV ಕಾರಲ್ಲಿ ರೇಪ್ ಮಾಡೋವಷ್ಟು ಸ್ಥಳ ಇದ್ಯಾ? RTO ವರದಿ ಕೇಳಿದ ಪೊಲೀಸರು

ದೆಹಲಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ಸುಮಾರು ನಾಲ್ಕು ವರ್ಷಗಳ ಹಿಂದೆ ರಾಜಧಾನಿಯಲ್ಲಿ ವಾಸಿಸಲು ಪ್ರಾರಂಭಿಸಿದ್ದರು. ಈ ವರ್ಷದ ಜನವರಿಯಲ್ಲಿ ಮಹಿಳೆಗೆ ಸಾಗರ್ ಎಂಬ ವ್ಯಕ್ತಿಯನ್ನು ಫೇಸ್‌ಬುಕ್‌ನಲ್ಲಿ ಪರಿಚಯವಾದರು. ಇಬ್ಬರು ಮೊಬೈಲ್ ಸಂಖ್ಯೆಗಳನ್ನು ಬದಲಾಯಿಸಿಕೊಂಡಿದ್ದರು.

ಯುವತಿಯ ಫೇಸ್‌ಬುಕ್ ಸ್ನೇಹಿತ ಅವಳನ್ನು ಮದುವೆಯಾಗಲು ಪ್ರಪೋಸ್ ಮಾಡಿದ್ದ. ಯುವತಿ ಸಾಗರ್ ಜೊತೆ ಫೋನ್‌ನಲ್ಲಿ ಮಾತನಾಡಲು ಪ್ರಾರಂಭಿಸಿದಳು. ಸ್ವಲ್ಪ ಸಮಯದ ನಂತರ ಮದುವೆಯನ್ನು ಪ್ರಸ್ತಾಪಿಸಿ, ತನ್ನ ಹೆತ್ತವರಿಗೆ ಪರಿಚಯಿಸಲು ಮುಂದಾಗಿದ್ದ ಯುವಕ. ನಂತರ 23 ವರ್ಷದ ವ್ಯಕ್ತಿ ಯುವತಿಯನ್ನು ಹೋಡಲ್‌ಗೆ ಬರಲು ಕೇಳಿಕೊಂಡಿದ್ದಾನೆ.

ಆರೋಪಿ ಯುವತಿಯನ್ನು ರಾಮ್‌ಘರ್ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಮೇ 3 ರಂದು ಯುವತಿ ಹೊಡಾಲ್‌ಗೆ ಪ್ರಯಾಣಿಸಿ ವ್ಯಕ್ತಿಯನ್ನು ಭೇಟಿಯಾಗಿದ್ದರು. ಹೆತ್ತವರನ್ನು ಭೇಟಿಯಾಗಲು ಕರೆದೊಯ್ಯುವ ಬದಲು, ಸಾಗರ್ ಅವಳನ್ನು ರಾಮಘರ್ ಗ್ರಾಮದ ಅರಣ್ಯಕ್ಕೆ ಕರೆದೊಯ್ದಿದ್ದಾನೆ. ಸಾಗರ್ ಸಹೋದರ ಮತ್ತು ಅವನ ಸ್ನೇಹಿತರ ಗುಂಪು ಕಾಡಿನ ಟ್ಯೂಬ್‌ವೆಲ್ ಬಳಿ ಮದ್ಯ ಸೇವಿಸುತ್ತಿದ್ದರು ಎನ್ನಲಾಗಿದೆ.

ಯುವತಿ ಸ್ಥಳಕ್ಕೆ ತಲುಪಿದಾಗ ಆರೋಪಿಗಳು ಅವಳ ಮೇಲೆ ಗುಂಡು ಹಾರಿಸಿ ಅತ್ಯಾಚಾರ ಮಾಡಿದ್ದಾರೆ. ಮರುದಿನ ಆಕೆಯನ್ನು ಆಕಾಶ್ ಎಂಬ ವ್ಯಾಪಾರಿ ಬಳಿ ಕರೆದೊಯ್ಯಲಾಯಿತು. ಈ ಸ್ಥಳದಲ್ಲಿ ಆಕೆಯನ್ನು ಐದು ಪುರುಷರು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪದೇ ಪದೇ ಲೈಂಗಿಕ ದೌರ್ಜನ್ಯ ನಡೆಸಿದ ನಂತರ ಯುವತಿಯ ಸ್ಥಿತಿ ಹದಗೆಟ್ಟಾಗ ಐವರು ಆರೋಪಿಗಳು ಅವಳನ್ನು ಬದರ್‌ಪುರ ಗಡಿಯ ಬಳಿ ಎಸೆದು ಪರಾರಿಯಾಗಿದ್ದಾರೆ.

ಮೇ 12 ರಂದು ಯುವತಿ ಹಾಸನಪುರ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಯುವತಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ದೂರು ನೀಡಲು ವಿಳಂಬವಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಎಸ್‌ಎಚ್‌ಒ ರಾಜೇಶ್ ಅವರು ಶುಕ್ರವಾರ ಸಾಗರ್‌ನನ್ನು ಬಂಧಿಸಿದ್ದಾರೆ.

Follow Us:
Download App:
  • android
  • ios