ನವದೆಹಲಿ ( ನ. 05)    60  ವರ್ಷದ ವೃದ್ಧನಿಂದ ಅತ್ಯಾಚಾರಕ್ಕೆ ಒಳಗಾಗಿದ್ದ 16 ವರ್ಷದ  ಬಾಲಕಿ ಮನೆಯ ಟೆರೆಸ್ ಮೇಲೆ ಮಗುವಿಗೆ ಜನ್ಮ ನೀಡಿದ್ದಾಳೆ.

ಉತ್ತರ ದೆಹಲಿಯ ಪೊಲೀಸರಿಗೆ ಪಿಸಿಆರ್ ಕರೆ ಬಂದ ನಂತರ ಮಾಹಿತಿ ಕಲೆ ಹಾಕಿದ್ದಾರೆ.  ಬಟ್ಟೆಯಲ್ಲಿ ಸುತ್ತಿದ ಶಿಶುವನ್ನು ರಕ್ಷಣೆ ಮಾಡಲಾಗಿದೆ.  ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಲಾಗಿದೆ.

ಶನಿವಾರ ರಾತ್ರಿ ಶಿಶುವಿಗೆ ಸಂಬಂಧಿಸಿದಂತೆ ನಮಗೆ ಮಾಹಿತಿ ಬಂದಿದೆ. ನಾವು ಸ್ಥಳಕ್ಕೆ ತಲುಪಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ದೆವು.. ನಾವು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಬಾಲಕಿಯೊಂದಿಗೆ ಮಗು ಇರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಡಸಿನ ಸಖ್ಯ ಬೇಕಿಲ್ಲ, ಮದುವೆಯಾಗುತ್ತೇವೆ ಎಂದು ಮನೆ ಬಿಟ್ಟು ಹೋದ ಯುವತಿಯರು

ಇದಾದ ಮೇಲೆ ಬಾಲಕಿಯನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದಾಗ  ಸುಮಾರು ಎಂಟರಿಂದ ಒಂಬತ್ತು ತಿಂಗಳ ಹಿಂದೆ 60 ವರ್ಷದ ವ್ಯಕ್ತಿಯೊಬ್ಬ  ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದು ಗೊತ್ತಾಗಿದೆ..  ಬಾಲಕಿ ತನ್ನ ಕುಟುಂಬದವರಿಗೆ ವಿಷಯ ತಿಳಿಸದೆ ಮುಚ್ಚಿಟ್ಟಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಮಗುವನ್ನು ಬಟ್ಟೆಯಲ್ಲಿ ಸುತ್ತಿಕೊಂಡು ತಂದು ಹತ್ತಿರದ ಅಂಗಡಿ ಮುಂದೆ ಇಟ್ಟು ಬಾಲಕಿ ಕಣ್ಮರೆಯಾಗಿದ್ದಾಳೆ.  ಅಂಗಡಿಯೊಂದರಲ್ಲಿ ಕೆಲಸ ಮಾಡುವ ತಾಯಿ ಜತೆ ಬಾಲಕಿ ವಾಸವಿದ್ದಳು.