ಕಾನ್ಪುರ(ಮಾ.10): ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದೇನೆಂದು ಆರೋಪಿಸಿ 13 ವರ್ಷದ ಬಾಲಕಿಯೊಬ್ಬಳು ಮೂವರು ವಿರುದ್ಧ ದೂರು ದಾಖಲಿಸಿದ ಎರಡೇ ದಿನದಲ್ಲಿ ಆಕೆಯ ತಂದೆ, ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಇನ್ನು ಈ ಸಂತ್ರಸ್ತೆಯ ತಂದೆ ಆಕೆಯನ್ನು ವೈದ್ಯಕೀಯ ತಪಾಸಣೆಗೆಂದು ಕರೆತಂದ ಆಸ್ಪತ್ರೆ ಎದುರೇ ಮೃತಪಟ್ಟಿರುವುದು ಮತ್ತೊಂದು ಶಾಕಿಂಗ್ ವಿಚಾರವಾಗಿದೆ.

ಇನ್ನು ಬಾಲಕಿ ತನ್ನ ದೂರಿನಲ್ಲಿ ತಿಳಿಸಿರುವ ಇಬ್ಬರು ಆರೋಪಿಗಳಾದ ದೀಪು ಯಾದವ್ ಹಾಗೂ ಸೌರಭ್ ಯಾದವ್ ತಂದೆ ಕಾನ್ಪುರದಿಂದ 100 ಕಿ. ಮೀ ದೂರದಲ್ಲಿರುವ, ಕನೌಜ್ ಜಿಲ್ಲೆಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ಗಳಾಗಿ ಕಾರ್ಯ ನಿರ್ವಹಿಸುತ್ತಾರೆಂಬುವುದು ಉಲ್ಲೇಖನೀಯ.

ಲಿಂಗಸುಗೂರು: ಸಾರಿಗೆ ಬಸ್‌ಗೆ ಟ್ರ್ಯಾಕ್ಟರ್‌ ಡಿಕ್ಕಿ, ತಪ್ಪಿದ ಅನಾಹುತ

ಇನ್ನು ಮೂರನೇ ಆರೋಪಿ ಗೋಲು ಯಾದವ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಈ ಎಲ್ಲಾ ಆರೋಪಿಗಳು ದೂರು ನೀಡಿದಾಗಿನಿಂದ ಬೆದರಿಕೆ ಹಾಕುತ್ತಿದ್ದಾರೆ. ಪೊಲೀಸರೂ ಇದಕ್ಕೆ ಸಹಕರಿಸುತ್ತಿದ್ದು, ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂಸತ್ರಸ್ತೆ ಕುಟುಂಬ ಸದಸ್ಯರು ದೂರಿದ್ದಾರೆ. ಇನ್ನು ಮಗನನ್ನು ಕಳೆದುಕೊಂಡ ಸಂತ್ರಸ್ತೆಯ ಅಜ್ಜ 'ನನ್ನ ಮಗನ ಕೊಲೆಯಾಗಿದೆ, ಇದಕ್ಕೆ ಪೊಲೀಸರೂ ಸಹಕರಿಸಿದ್ದಾರೆ' ಎಂದು ಕಂಬನಿ ಮಿಡಿದಿದ್ದಾರೆ.

ಇನ್ನು ಪ್ರಕರಣ ಸಂಬಂಧ ಮಾಹಿತಿ ನೀಡಿರುವ ಪೊಲೀಸರು 'ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಬಿಟ್ಟು, ಆಕೆಯ ತಂದೆ ಚಹಾ ಕುಡಿಯಲು ಹೊರಗೆ ತೆರಳಿದ್ದರು. ಈ ವೇಳೆ ಟ್ರಕ್‌ ಒಂದಕ್ಕೆ ಡಿಕ್ಕಿಯಾಗಿದ್ದಾರೆ. ಕೂಡಲೇ ಅವರನ್ನು ಕಾನ್ಪುರ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಅವರು ಬದುಕುಳಿದಿಲ್ಲ. ಅಪಘಾತ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ' ಎಂದಿದ್ದಾರೆ.

ತಿಂಗಳ ಮಗುವಿನ ಪ್ರಾಣ ಉಳಿಸಿದ ನಟ ಮಹೇಶ್ ಬಾಬು

ಬಾಲಕಿಯ ಅತ್ಯಾಚಾರ ದೂರಿನ ವಿಚಾರವಾಗಿ ಪ್ರತಿಕ್ರಿಯಿಸಿದ ಪೊಲೀಸರು 'ಸಂತ್ರಸ್ತ ಬಾಲಕಿಯೊಂದಿಗೆ ಬಂದು ಅವರು ದೂರು ದಾಖಲಿಸಿದ ಬೆನ್ನಲ್ಲೇ ನಾವು ತನಿಖೆ ಆರಂಭಿಸಿದ್ದೆವು' ಎಂದಿದ್ದಾರೆ. ಇನ್ನು ಈಗಾಗಲೇ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಈ ಪ್ರಕರಣ ಸಂಬಂಧ ಶೀಘ್ರವಾಗಿ ತನಿಖೆ ನಡೆಸುವಂತೆ ಆದೇಶಿಸಿದ್ದು, ಅಪಘಾತ ಹಾಗೂ ಅತ್ಯಚಾರ ಘಟನೆಗಳಿಗೆ ಸಂಬಂಧವಿದೆಯೇ ಎಂದು ಪರಿಶೀಲಿಸುವಂತೆಯೂ ಸೂಚಿಸಿದ್ದಾರೆ.